ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಆಕಸ್ಮಿಕವಾಗಿ ಕಾಲುವೆಗೆ ಬಿದ್ದಿದ್ದ ಕುದುರೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಶಿವಮೊಗ್ಗದ ಆಲ್ಕೊಳ ಸಮೀಪದ ಗೋಲ್ಡನ್ ಸಿಟಿ ಲೇಔಟ್ ಬಳಿ ಗುರುವಾರ ನಡೆದಿದೆ.
ಇದನ್ನೂ ಓದಿ: 17,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ

ಮೇಯಲು ಹೋಗಿದ್ದ ಕುದುರೆ ಮೂರು ದಿನದ ಹಿಂದೆ ಆಯಾತಪ್ಪಿ ಕಾಲುವೆಗೆ ಬಿದ್ದಿರುವ ಸಾಧ್ಯತೆಯಿದೆ. ಹೀಗಾಗಿ ಆಹಾರವಿಲ್ಲದೆ ನಿತ್ರಾಣಗೊಂಡಿತ್ತು. ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಗುರುವಾರ ಸಂಜೆ ರೋಪ್, ಲ್ಯಾಡರ್ ಬಳಿಸಿ ಕುದುರೆಯನ್ನು ಮೇಲೆತ್ತಲಾಗಿದೆ.

ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ 50,000ದ ವರೆಗೆ ಸ್ಕಾಲರ್ ಶಿಪ್; ಅರ್ಹರು ಯಾರು? ಇಲ್ಲಿದೆ ನೋಡಿ
ಸದ್ಯ ಕುದುರೆ ಆರೋಗ್ಯವಾಗಿದೆ ಎಂದು ತಿಳಿದು ಬಂದಿದ್ದು, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ನರೇಂದ್ರ, ಶರತ್, ರಾಜೀವ್ ಸುಣಗಾರ, ಸಂತೋಷ್, ಯಶ್ವಂತ್ ಅವರು ಕಾರ್ಯಾಚರಣೆಯಲ್ಲಿ ಇದ್ದರು.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್!; ಶೀಘ್ರವೇ ಗೌರವಧನ ಹೆಚ್ಚಳ













