
ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಕಾಳನಾಯಕನಕಟ್ಟೆಯಲ್ಲಿರುವ ಕೊಪ್ಪ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲಿ ಎಂಬುವವರ ತೋಟದಲ್ಲಿ ಅಕ್ರಮವಾಗಿ ಕಟ್ಟಿಹಾಕಿದ್ದ ಎರಡು ಗೋವುಗಳನ್ನು ಜಾನುವಾರುಗಳ ಮಾಲೀಕ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ರಕ್ಷಿಸಿದ್ದಾರೆ.
ಇದನ್ನೂ ಓದಿ: ಗೃಹ ಆರೋಗ್ಯ ಯೋಜನೆ; ಮನೆ ಬಾಗಿಲಲ್ಲೇ ಸಿಗಲಿವೆ ಈ ಎಲ್ಲಾ ಆರೋಗ್ಯ ಸೇವೆಗಳು

ಕಾಳನಾಯಕನಕಟ್ಟೆಯಲ್ಲಿರುವ ಮನ್ಸೂರ್ ಅವರ ತೋಟದಲ್ಲಿ ನಿಲುವಾಗಿಲಿನ ಸೂರ್ಯಕಾಂತ್ ಶೆಟ್ಟಿ ಅವರ ಎರಡು ಗೋವುಗಳು ಬುಧವಾರ ಸಂಜೆ ಪತ್ತೆಯಾಗಿವೆ. ಸೂರ್ಯಕಾಂತ್ ಅವರು ಸಾಕಿದ್ದ ಗೋವುಗಳು ಒಂದು ವಾರದಿಂದ ಕೊಟ್ಟಿಗೆಗೆ ಬಂದಿರಲಿಲ್ಲ. ಮನ್ಸೂರ್ ತೋಟದಲ್ಲಿ ಗೋವುಗಳು ಕಟ್ಟಿ ಹಾಕಲಾಗಿದೆ ಎಂದು ಬುಧವಾರ ಸೂರ್ಯಕಾಂತ್ ಅವರಿಗೆ ಸ್ನೇಹಿತರೊಬ್ಬರು ಮಾಹಿತಿ ನೀಡಿದರು. ಸೂರ್ಯಕಾಂತ್ ಶೆಟ್ಟಿ ಹಾಗೂ ಹಿಂದು ಸಂಘಟನೆಯ ಕಾರ್ಯಕರ್ತರು ತೋಟಕ್ಕೆ ತೆರಳಿ ಗೋವುಗಳನ್ನು ರಕ್ಷಿಸಿದರು.

ಇದನ್ನೂ ಓದಿ: ಇಸ್ರೋದಲ್ಲಿ 300 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ; ವಿದ್ಯಾರ್ಹತೆ ಡಿಟೈಲ್ಸ್ ಇಲ್ಲಿದೆ ನೋಡಿ
ಹರಿಹರಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಹಿಂದು ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಗೋವುಗಳನ್ನು ವಶಕ್ಕೆ ಪಡೆದು ಗೌರಿಗದ್ದೆಯ ಗೋಶಾಲೆಗೆ ಬಿಟ್ಟಿದ್ದಾರೆ.
ಗೋವುಗಳ ಮಾಲೀಕ ಸೂರ್ಯಕಾಂತ್ ಶೆಟ್ಟಿ ದೂರು ನೀಡಿದ ಹಿನ್ನೆಲೆಯಲ್ಲಿ ಮನ್ಸೂರ್ ಅಲಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: 10th ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಗಮನಕ್ಕೆ; 3,500 ಹಾಗೂ 73,500ರೂ ವಿದ್ಯಾರ್ಥಿವೇತನ
















