ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಾಮಾಚಾರದ ಆತಂಕಕ್ಕೆ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (29) ಆತ್ಮಹತ್ಯೆಗೆ ಶರಣಾದ ಗೃಹಿಣಿ.
ಇದನ್ನೂ ಓದಿ: ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ ಜಾರಿ; ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಆದೇಶ!

ಕಳೆದ ಹತ್ತು ವರ್ಷಗಳ ಹಿಂದೆ ಭಕ್ತರಹಳ್ಳಿ ಗ್ರಾಮದ ಮಂಜು ಎಂಬುವವರ ಜೊತೆ ವಿವಾಹವಾಗಿದ್ದ ಜಯಂತಿ. ಮೂಲತಃ ಬೇಲೂರು ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ಬೋವಿ ಕಾಲೋನಿಯವ್ರು. ಭಕ್ತರಹಳ್ಳಿ ಗ್ರಾಮದ ಇಬ್ಬರಿಂದ ತನ್ನ ಮೇಲೆ ಮಾಟ ಮಂತ್ರ ಮಾಡಿಸಲಾಗಿದೆ ಎಂದು ನಂಬಿದ್ದ ಗೃಹಿಣಿ ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅಂಚೆ ಇಲಾಖೆಯ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ಹೀಗೆ ಚೆಕ್ ಮಾಡಿ ನಿಮ್ಮ ರಿಸಲ್ಟ್
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸಹಕಾರಿ ಬ್ಯಾಂಕ್’ನಲ್ಲಿ ಜಾಬ್ ಆಫರ್; 21,400 ಸಂಬಳ













