
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಪಟ್ಟಣದ ಕೊಪ್ಪ ಮಾರ್ಗ ಮಧ್ಯೆಯ ಕುಂಬಾರದಡಿಗೆ ತಿರುವಿನಲ್ಲಿ ಬಳಿ ಶುಕ್ರವಾರ ನಡೆದಿದೆ.
ಇದನ್ನೂ ಓದಿ: ಪಂಚಾಯಿತಿಯಲ್ಲೇ ಸಿಗಲಿವೆ ಜನನ-ಮರಣ ಪ್ರಮಾಣ ಪತ್ರ

ಪಟ್ಟಣದ ಕುರುವಳ್ಳಿ ಸಮೀಪದ ಕುಂಬಾರದಡಿಗೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೊಪ್ಪ ಭಾಗದಿಂದ ತೀರ್ಥಹಳ್ಳಿಗೆ ಬರುವಾಗ ಈ ಅವಘಡ ಸಂಭವಿಸಿದೆ. ವಿದ್ಯುತ್ ಕಂಬ ಮುರಿದು ಬಿದ್ದಿದೆ.

ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆಗೆ ಅನುಮತಿ













