ಕೊಪ್ಪದ ಡಾ. ಸಂಜಯ ಕೆ.ಎಸ್. ಅವರಿಗೆ ಡೀನ್ ಹುದ್ದೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್), ಬೆಂಗಳೂರು ಇಲ್ಲಿ ಭಾರತೀಯ ಔಷಧ ಪದ್ಧತಿ ವಿಭಾಗದ ಡೀನ್ ಆಗಿ ಕೊಪ್ಪ ಮೂಲದ ಡಾ. ಸಂಜಯ ಕೆ.ಎಸ್. ಅವರನ್ನು ನೇಮಕ ಮಾಡಲಾಗಿದೆ.


ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ


ಈ ಹುದ್ದೆಯು ರಾಜ್ಯದ ಆಯುರ್ವೇದ, ಯುನಾನಿ, ಸಿದ್ಧ, ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ಕಾಲೇಜುಗಳ ಪ್ರಮುಖ ಆಡಳಿತ ಮತ್ತು ಶೈಕ್ಷಣಿಕ ಹೊಣೆಗಾರಿಕೆಯನ್ನು ಒಳಗೊಂಡಿದ್ದು, ಭಾರತೀಯ ಚಿಕಿತ್ಸಾ ಪದ್ಧತಿಗಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಅವಕಾಶವೆಂದು ಪರಿಗಣಿಸಲಾಗಿದೆ. ಡೀನ್ ಆಗಿ ಡಾ. ಸಂಜಯ ಕೆ.ಎಸ್. ಅವರು ಶಿಕ್ಷಣದ ಗುಣಮಟ್ಟ ವೃದ್ಧಿ, ಸಂಶೋಧನಾ ಚಟುವಟಿಕೆಗಳ ಉತ್ತೇಜನ ಮತ್ತು ವಿವಿಧ ಚಿಕಿತ್ಸಾ ಪದ್ಧತಿಗಳ ಸಮನ್ವಯಕ್ಕೆ ಕ್ರಮ ಕೈಗೊಳ್ಳಲಿದ್ದು, ಡಾ. ಸಂಜಯ ಕೆ.ಎಸ್. ಅವರು ಪ್ರಸ್ತುತ ಕುಂದಾಪುರ ರೂರಲ್ ಆಯುರ್ವೇದ ಕಾಲೇಜುನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಆಯುರ್ವೇದ ಶಿಕ್ಷಣ ಮತ್ತು ಆಡಳಿತ ಕ್ಷೇತ್ರದಲ್ಲಿ ವಿಶಿಷ್ಟ ಅನುಭವ ಹೊಂದಿದ್ದಾರೆ.


ಇದನ್ನೂ ಓದಿ: LPG ಗ್ರಾಹಕರಿಗೆ ಮಹತ್ವದ ಸೂಚನೆ; ಆಧಾರ್‌ ಇ ಕೆವೈಸಿ ಮಾಡದಿದ್ರೆ ಸಿಗಲ್ಲ ಸಿಲಿಂಡರ್‌ !


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.