ಕಾಫಿನಾಡಲ್ಲಿ ಇಂದಿನಿಂದ ದತ್ತಜಯಂತಿ ಸಂಭ್ರಮ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ದತ್ತ ಜಯಂತಿ ಅಂಗವಾಗಿ ಶೃಂಗೇರಿ ಪಟ್ಟಣದ ಚಪ್ಪರದಾಂಜನೆಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ದತ್ತ ಭಕ್ತರು ಮಾಲಾಧಾರಣೆ ಮಾಡುವ ಮೂಲಕ ದತ್ತ ಜಯಂತಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತರು ಇದ್ದರು.

ಶೃಂಗೇರಿ ಪಟ್ಟಣದ ಚಪ್ಪರದಾಂಜನೆಯ ಸ್ವಾಮಿ ದೇವಸ್ಥಾನದಲ್ಲಿ ಮಾಲಾಧಾರಣೆ
ಶೃಂಗೇರಿ ಪಟ್ಟಣದ ಚಪ್ಪರದಾಂಜನೆಯ ಸ್ವಾಮಿ ದೇವಸ್ಥಾನದಲ್ಲಿ ಮಾಲಾಧಾರಣೆ

ಇದನ್ನೂ ಓದಿ; ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್


ಎನ್. ಆರ್.‌ ಪುರದ ಈಶ್ವರ ದೇವಸ್ಥಾನದಲ್ಲಿ ಮಾಲಾಧಾರಣೆ:
ಬಜರಂಗದಳ ಕಾರ್ಯಕರ್ತರು ಪಟ್ಟಣದ ಹಳೇ ಮಂಡಗದ್ದೆ ಸರ್ಕಲ್ ಬಳಿ ಶ್ರೀ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ದತ್ತಮಾಲೆ ಧರಿಸಿದರು. ಬಜರಂಗದಳ ನಗರ ಸಂಯೋಜಕ ದರ್ಶನ್ ಬಜರಂಗದಳ ಕಾರ್ಯಕರ್ತರೊಂದಿಗೆ ದತ್ತಮಾಲೆ ಧರಿಸುವುದರ ಮೂಲಕ ದತ್ತಮಾಲೆಗೆ ಚಾಲನೆ ನೀಡಿದರು.

ಡಿ.10 ರಂದು ಬೆಳಗ್ಗೆ 11 ಗಂಟೆಗೆ ಬಸ್ತಿಮಠದ ಮಹಾವೀರ ಭವನದಲ್ಲಿ ಸತ್ಯನಾರಾಯಣ ಪೂಜೆ ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ಬಸ್ತಿಮಠದ ಆವರಣದಿಂದ ಶೋಭಾಯಾತ್ರೆ ಹೊರಟು ಪ್ರವಾಸಿ ಮಂದಿರದ ಸರ್ಕಲ್ ತಲುಪಿ ಅಲ್ಲಿಂದ ಮೇದರ ಬೀದಿ ಮಾರ್ಗವಾಗಿ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣ ತಲುಪಲಿದೆ. ನಂತರ ಬೃಹತ್ ವೇದಿಕೆಯಲ್ಲಿ ಹಿಂದು ಸಮ್ಮಿಲನ ಕಾರ್ಯಕ್ರಮ ನಡೆಯ ಲಿದೆ. ಕಾರ್ಯಕ್ರಮಕ್ಕೆ ದಿಕ್ಕೂಚಿ ಭಾಷಣಕಾರರಾಗಿ ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಗಮಿಸಲಿದ್ದಾರೆ.

ಎನ್.ಆ‌ರ್.ಪುರ ದತ್ತ ಜಯಂತಿ ಅಂಗವಾಗಿ ದತ್ತಮಾಲೆ ಧರಿಸುವುದರ ಮೂಲಕ ಚಾಲನೆ
ಎನ್.ಆ‌ರ್.ಪುರ ದತ್ತ ಜಯಂತಿ ಅಂಗವಾಗಿ ದತ್ತಮಾಲೆ ಧರಿಸುವುದರ ಮೂಲಕ ಚಾಲನೆ

ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್; ಅನ್ನಚಕ್ರ ಯೋಜನೆಗೆ ಚಾಲನೆ!, ಏನಿದು ಯೋಜನೆ, ಇಲ್ಲಿದೆ ನೋಡಿ ಡಿಟೈಲ್ಸ್


ಮೂಡಿಗೆರೆ ನಗರದ ವೇಣು ಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ದತ್ತ ಮಾಲಧಾರಣೆ:
ಮೂಡಿಗೆರೆ; ದತ್ತ ಜಯಂತಿಯ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮೂಡಿಗೆರೆ ಪ್ರಖಂಡದ ವತಿಯಿಂದ ಮೂಡಿಗೆರೆ ನಗರದ ವೇಣು ಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ದತ್ತ ಮಾಲಧಾರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರು ಸಾಲು ಮರ ಮಹೇಶ್, ಮೂಡಿಗೆರೆ ತಾಲೂಕು ಸಂಯೋಜಕ ಸಂತೋಷ ಶುಭ ನಗರ, ಜಿಲ್ಲಾ ಸಹ ಕಾರ್ಯದರ್ಶಿ ವಿನಯ್ ಶೆಟ್ಟಿ, ಜಿಲ್ಲಾ ಸಹ ಸಂಯೋಜಕ ಅಭಿ ಬಣಕಲ್, ಜಿಲ್ಲಾ ಗೋ ರಕ್ಷಾ ಪ್ರಮುಖ್ ಅಜಿತ್ ಜೇನ್ ಬೈಲ್, ತಾಲೂಕು ಸಹ ಸಂಯೋಜಕ ಕಾರ್ತಿಕ್, ಪುಣೀತ್, ಪ್ರದೀಪ್, ತಾಲೂಕು ವಿದ್ಯಾರ್ಥಿ ಪ್ರಮುಖ್ ಮನು, ತಾಲೂಕು ಸುರಕ್ಷಾ ಪ್ರಮುಖ್ ಚೇತನ್, ತಾಲೂಕು ಬಲೋಪಸನ ಕೇಂದ್ರ ಪ್ರಮುಖ್ ರಂಜಿತ್, ಮೂಡಿಗೆರೆ ನಗರ ಸಂಯೋಜಕ ಧನು, ನಗರ ಸುರಕ್ಷಾ ಪ್ರಮುಖ್ ನಿತಿನ್, ನಗರ ಗೋ ರಕ್ಷಾ ಪ್ರಮುಖ್ ಪ್ರಸನ್ನ, ನಗರ ಬಲೋ ಪಸನ ಕೇಂದ್ರ ಪ್ರಮುಖ್ ಲಿಖಿತ್, ಕಸಬಾ ಹೋಬಳಿ ಸಂಯೋಜಕ ಶಶಿ ಹಳೇಕೋಟೆ, ಗೋಣಿಬಿಡು ಸಂಯೋಜಕ ರಾಜು, ನಗರ ಸಪ್ತಾ ಹಿಕ್ ಮಿಲನ್ ಪ್ರಮುಖ್ ಸಾಗರ್ ಹಾಗೂ ಎಲ್ಲಾ ಬಜರಂಗದಳ ಕಾರ್ಯಕರ್ತರು ಮತ್ತು ಹಿರಿಯರು ಇದ್ದರು.

ಮೂಡಿಗೆರೆ ನಗರದ ವೇಣು ಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ದತ್ತ ಮಾಲಧಾರಣೆ
ಮೂಡಿಗೆರೆ ನಗರದ ವೇಣು ಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ದತ್ತ ಮಾಲಧಾರಣೆ

ಇದನ್ನೂ ಓದಿ; ಮಹಿಳೆಯರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ; ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!


14ಕ್ಕೆ ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ:
ದತ್ತಪೀಠದಲ್ಲಿ ಹೋಮ, ಹವನ ನಡೆಸುವ ಮೂಲಕ ಡಿಸೆಂಬರ್ 12ರಂದು ಅನುಸೂಯ ಜಯಂತಿ ಆಚರಿಸಲಿದ್ದಾರೆ. ಡಿಸೆಂಬರ್ 13 ರಂದು ಚಿಕ್ಕಮಗಳೂರು ನಗರದಲ್ಲಿ ದತ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 25 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಡಿಸೆಂಬರ್ 14 ರಂದು ರಾಜ್ಯದ ಮೂಲೆಮೂಲೆಗಳಿಂದ ಬರುವ ಅಪಾರ ಸಂಖ್ಯೆಯ ಭಕ್ತರು ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆಯುವರು.


ಇದನ್ನೂ ಓದಿ; KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಭರ್ಜರಿ ಸಿಹಿಸುದ್ದಿ; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಖಾಕಿ ಫುಲ್ ಅಲರ್ಟ್:
ಈಗಾಗಲೇ ಹಿಂದೂ ಅರ್ಚಕರ ನೇತೃತ್ವದಲ್ಲಿಯೇ ದತ್ತಜಯಂತಿ ನಡೆಯುತ್ತಿದೆ. ಹಿಂದೂಗಳಿಗೆ ಪೀಠ ಒಪ್ಪಿಸಬೇಕು ಎಂಬ ಅಗ್ರಹ ಈ ಬಾರಿಯೂ ಕೇಳಿಬಂದಿದೆ. ಇದರ ನಡುವೆ ವಕ್ಫ್ ವಿವಾದ ದತ್ತಜಯಂತಿಯಲ್ಲಿ ಮತ್ತೆ ಸದ್ದು ಮಾಡಿದ್ದು, ವಕ್ಪ್ ನ ಮೊದಲ ಬಲಿಯೇ ದತ್ತಪೀಠ, ಮೂಲದಾಖಲೆಯನ್ನ ಪರಿಶೀಲನೆ ನಡೆಸದೇ ವಕ್ಪ್ ಬೋರ್ಡ್ ಗೆಜೆಟ್ ನೋಟಿಫೀಕೆಷನ್ ಮಾಡಿದರು ಉಳಿಸಿಕೊಳ್ಳಲು ಜನಾದೊಂಲನ, ನ್ಯಾಯಲಯದಲ್ಲಿ ಹೋರಾಟ ಮಾಡಬೇಕಾಯಿತು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದರು.

25 ನೇ ವರ್ಷದ ವಿಎಚ್ ಪಿ, ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಜಯಂತಿಯನ್ನ ಅದ್ದೂರಿಯಾಗಿ ಅಚರಿಸಲು ಪ್ಲಾನ್ ಮಾಡಲಾಗಿದೆ. ಇನ್ನೂ ಮಾಲಾಧಾರಣೆಯಾಗ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದೆ. ನಗರದಲ್ಲಿ ತೆಲಗಾಂಣದಿಂದ ಬಂದಿರೋ ರ್ಯಾಪಿಡ್ ಆಕ್ಷನ್ ಪೋರ್ಸ್ ಹಾಗೂ ಸ್ಥಳೀಯರ ಪೊಲೀಸರ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ. ಅಧುನಿಕ ಶಸಾಸ್ತ್ರಗಳನ್ನ ಹೊತ್ತು ಪಥಸಂಚನೆ ನಡೆಸಿ ಜನರಲ್ಲಿ ಧೈರ್ಯ ತುಂಬಿದರು.

ರ್ಯಾಪಿಡ್ ಆಕ್ಷನ್ ಪೋರ್ಸ್ ಹಾಗೂ ಸ್ಥಳೀಯರ ಪೊಲೀಸರ ನೇತೃತ್ವದಲ್ಲಿ ರೂಟ್ ಮಾರ್ಚ್
ರ್ಯಾಪಿಡ್ ಆಕ್ಷನ್ ಪೋರ್ಸ್ ಹಾಗೂ ಸ್ಥಳೀಯರ ಪೊಲೀಸರ ನೇತೃತ್ವದಲ್ಲಿ ರೂಟ್ ಮಾರ್ಚ್

ಇದನ್ನೂ ಓದಿ; ಈ ಅಭಿವೃದ್ಧಿ ನಿಗಮ ವತಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ; ಈ ರೀತಿ ಅರ್ಜಿ ಸಲ್ಲಿಸಿ


ಕಾಫಿನಾಡು ಬೂದಿ ಮುಚ್ಚಿದ ಕೆಂಡ:
ರಾಜ್ಯದ ಮೂಲೆ ಮೂಲೆಗಳಿಂದ ಬರುವ 25,000ಕ್ಕೂ ಅಧಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ದತ್ತಜಯಂತಿಯ ಸೂಕ್ಷ್ಮ ದಿನವಾಗಿದ್ದು ಜಿಲ್ಲಾದ್ಯಂತ ಸಾವಿರಾರು ಪೊಲೀಸರ ಹದ್ದಿನ ಕಣ್ಣಿಡಲಿದ್ದಾರೆ. ಚಿಕ್ಕಮಗಳೂರು ಬೂದಿ ಮುಚ್ವಿದ ಕೆಂಡದಂತಿರಲಿದೆ.


ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.