ಮೂಡಿಗೆರೆ: ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ಅರಣ್ಯ ಇಲಾಖೆಯ ವತಿಯಿಂದ ಚಾರ್ಮಾಡಿ ಘಾಟ್ ವಲಯದ ಮಾರುತದಿಂದ ಗಡಿ ಭಾಗದವರೆಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

 

 

ಇದನ್ನೂ ಓದಿ; ವಾಟ್ಸ್​ಆ್ಯಪ್​ನಿಂದ ಬೆರಗುಗೊಳಿಸುವ ಅಪ್ಡೇಟ್; ಇನ್ನುಂದೆ ಸ್ಟೇಟಸ್ 24 ಗಂಟೆ ಮಾತ್ರ ಅಲ್ಲ

ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಚರಣ್ ಕುಮಾರ್ ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್ 1 ರಿಂದ 7ರವರೆಗೆ ವನ್ಯ ಜೀವಿ ಸಪ್ತಾಹವನ್ನು ಇಲಾಖೆ ವತಿಯಿಂದ ಆಚರಿಸುತ್ತೇವೆ. ಈ ವರ್ಷವೂ ನಮ್ಮ ಎಲ್ಲಾ ಸಿಬ್ಬಂದಿಗಳ ಜೊತೆಗೆ ಚಾರ್ಮಾಡಿ ರಸ್ತೆ ಭಾಗದಲ್ಲಿ ಬಿದ್ದ ಪ್ಲಾಸ್ಟಿಕ್ ಮತ್ತಿತರ ಕಸಗಳನ್ನು ತೆಗೆದು ಸ್ವಚ್ಚತಾ ಆಂದೋಲನ ಮಾಡುತ್ತಿದ್ದೇವೆ.

 

ಇದನ್ನೂ ಓದಿ; ಮೀನುಗಾರರ ಬಲೆಗೆ ಬಿದ್ದ 350 ಕೆಜಿ ತೂಕದ ಮೀನು; ಇದರ ಮೌಲ್ಯ ಎಷ್ಟು ಗೊತ್ತಾ?

ಸುಮಾರು 11ಕಿ.ಮೀ ವರೆಗೆ ಎರಡು ತಂಡವಾಗಿ ಸಿಬ್ಬಂದಿಗಳು ಸ್ವಚ್ಚತೆ ಮಾಡುತ್ತಿದ್ದು ಕಸವನ್ನು ಗೋಣಿ ಚೀಲದಲ್ಲಿ ಹಾಕಿ ವಾಹನದ ಮೂಲಕ ಕಸವನ್ನು ವಿಲೇವಾರಿ ಮಾಡುತ್ತಿದ್ದೇವೆ. ಗಾಂದಿ ಜಯಂತಿ ಆಚರಣೆಯೂ ಬಂದಿರುವುದರಿಂದ ಗಾಂಧೀಜಿಯವರ ಸ್ವಚ್ಚ ಭಾರತ ಕನಸು ನನಸು ಮಾಡುವುದು ಇಲಾಖೆಯ ಪ್ರಥಮ ಉದ್ದೇಶವಾಗಿದೆ ಎಂದರು.

 

 

ಸ್ವಚ್ಚತಾ ಕಾರ್ಯದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಮೇಶ್, ನವೀನ್, ಬಸವರಾಜ್ ಬಗಲಿ, ಶಿವಕುಮಾರ್, ಬಸವರಾಜ್, ಚಾಲಕ ಸಮಂತ್, ಅರಣ್ಯ ವೀಕ್ಷಕರಾದ ಮುಳ್ಳಯ್ಯ, ವೆಂಕಟೇಶ್, ಕುಮಾರ, ಮೂರ್ತಿ, ಸುರೇಶ್, ರಾಜೇಶ್, ಸಾತ್ವಿಕ್, ಸುದೀರ್, ಕೃಷ್ಣ ಅರಣ್ಯ ರಕ್ಷಕರಾದ ಶಿವಕುಮಾರ್, ಪರಮೇಶ್, ನಂದಕುಮಾರ್, ಡಿ.ಬಿ.ಸುರೇಶ್, ಕೆ.ಎನ್.ಕುಮಾರ್, ಸಿದ್ದೇಶ್, ಜಯಪ್ಪ, ಮೋಹ್ಸೀನ್ ಬೇಜಾದ್, ಮಂಜುನಾಥ್ ಮತ್ತಿತರರು ಇದ್ದರು.

ವರದಿ- ತನು ಕೊಟ್ಟಿಗೆಹಾರ

ಹೈ ವೋಲ್ವೇಜ್ ವಿದ್ಯುತ್ ತಂತಿ ತಗುಲಿ ಹೊತ್ತಿ ಉರಿದ ಮರ

 

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಹೈ ವೋಲ್ವೇಜ್ ವಿದ್ಯುತ್ ತಂತಿತಾಗಿ ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಬೆಂಕಿ ಹತ್ತಿ ಧಗಧಗ ಉರಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ತೂದೂರು ಸಮೀಪ ಇಂದು (ಶನಿವಾರ) ಬೆಳಿಗ್ಗೆ 4.30ರ ವೇಳೆಗೆ ಹೈ ವೋಲ್ವೇಜ್ ಲೈನ್ ತಾಗಿ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯರು ಅಗ್ನಿಶಾಮಾಕ ಇಲಾಖೆಗೆ ತಿಳಿಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಭಾರೀ ಮಳೆ ಜೊತೆ ಬೀಸುತ್ತಿರೋ ರಣಗಾಳಿ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ)  ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರಿದಿದ್ದಾನೆ. ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಆರಂಭವಾದ ಮಳೆ ಒಂದೆರಡು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ದೇವರು ಮನೆ, ಬಾಳೂರು ಭಾಗದಲ್ಲಿ ಭಾರೀ ಮಳೆ ಜೊತೆ ರಣಗಾಳಿ ಬೀಸುತ್ತಿದೆ. ಇನ್ನು ಭಾರೀ ಗಾಳಿ-ಮಳೆಯಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಇನ್ನು ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು ಅಲ್ಲಲ್ಲೆ ಮರಗಳು ಮುರಿದು ಬಿದ್ದಿದೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಮಲೆನಾಡಿನ ಕೆಲ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.