ಮಂಡ್ಯದಿಂದ ಹೆಚ್.ಡಿ.ಕೆ ಸ್ಪರ್ಧೆ ವಿಚಾರ ಕೃಷಿ ಸಚಿವರ ಮಾತಿಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದರು. ಈ ಕುರಿತು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಪ್ರತಿಕ್ರಿಯೆಸಿ, ಮನೆಯಿಂದ ಹೊರಗೆ ಹೋದಾಗ ಕೆಟ್ಟ ಮಾತುಗಳನ್ನು ಆಡಿ ದೊಡ್ಡವನು ಆಗ್ತೀನಿ ಅನ್ನೋ ಭ್ರಮೆಯನ್ನು ಬಿಟ್ಟು ಕೃಷಿ ಸಚಿವರ ಕಾರ್ಯಭಾರ ಏನಿದೆ ನೋಡಿ ಅದರ ಮುಖಾಂತರ ಹೆಸರು ತೆಗೆದುಕೊಂಡರೆ ಜನರು ಮೆಚ್ಚುತ್ತಾರೆ ಎಂದರು.

ಇದನ್ನೂ ಓದಿ; ಕೇಂದ್ರದ ಬಂಪರ್ ಯೋಜನೆ;ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 1000 ರೂಪಾಯಿ
ಮಂಡ್ಯದಿಂದ ಹೆಚ್.ಡಿ.ಕೆ ಸ್ಪರ್ಧೆ ವಿಚಾರ ಕೃಷಿ ಸಚಿವ ವ್ಯಂಗ್ಯ:
ಮಂಡ್ಯ ಕ್ಷೇತ್ರದಿಂದ ಪುಟ್ಟರಾಜು ಅಭ್ಯರ್ಥಿಯಾಗಲಿ ಎಂದು ಮೊದಲು ಹೇಳಿದ್ದರು. ಆದರೆ ಇದೀಗ ಕುಮಾರಸ್ವಾಮಿಯೇ ಅಭ್ಯರ್ಥಿ ಆಗಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ. ಪುಟ್ಟರಾಜುಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಎಂದಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದರು.
ಇದನ್ನೂ ಓದಿ; ಕ್ಯೂನಲ್ಲಿ ನಿಲ್ಲಬೇಕಿಲ್ಲ, ಎಲ್ಲಿಯೂ ಅಲೆಯಬೇಕಾಗಿಲ್ಲ; ಆನ್ ಲೈನ್ ನಲ್ಲೇ ಲಭ್ಯವಿದೆ ಪಡಿತರ ಚೀಟಿ ಡಿಟೈಲ್ಸ್
ಈ ಕುರಿತು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಕೃಷಿ ಸಚಿವರಾದ ಚೆಲುವ ನಾರಾಯಣಸ್ವಾಮಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ ಕೂಡಲೇ ಬಹಳ ದೊಡ್ಡವರಾಗ್ತಿವಿ ಎಂದು ತಿಳಿದುಕೊಂಡಿದ್ದಾರೆ. ಅದರ ಬದಲಿಗೆ ಕೃಷಿ ಇಲಾಖೆಯಲ್ಲಿರುವ ಹಲವಾರು ಸೌಲತ್ತುಗಳನ್ನು ಜನರಿಗೆ ಮುಟ್ಟಿಸುವ, ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ ಮಾಡುವುದು ಒಳ್ಳೆಯದು ಎಂದರು.
ಇದನ್ನೂ ಓದಿ; ಈ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಬರದಿಂದ ಕಂಗೆಟ್ಟಿರುವ ರೈತರಿಗೆ ಸಹಾಯಧನವನ್ನು ಹೇಗೆ ನೀಡಬಹುದು. ಹಲವಾರು ಗ್ರಾಮೀಣ ಪ್ರದೇಶದಲ್ಲಿ ರೈತರ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಯಾವ ರೀತಿ ಪರಿಹಾರ ನೀಡುವುದು. ಅಲ್ಲದೆ ಗ್ರಾಮೀಣ ಪ್ರದೇಶದ ರೈತರ ಮಕ್ಕಳು ನಗರ ಪ್ರದೇಶಕ್ಕೆ ವಲಸೆ ಹೋಗದೆ ಇರುವ ರೀತಿ ಅಗ್ರಿ ಬ್ಯುಸಿನೆಸ್ ಗಳಿಗೆ ಪ್ರೋತ್ಸಾಹ ನೀಡಬೇಕು. ಇಂತಹ ಯೋಜನೆಯನ್ನು ರೂಪಿಸಿ ನಿಮ್ಮ ಕೆಲಸದ ಮಾತನ್ನು ಹೇಳಬೇಕು ಹೊರತು ಕೀಳು ಮಾತುಗಳನ್ನಲ್ಲ ಎಂದರು.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರ ವಶಕ್ಕೆ
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಾಲ್ಕು ಕೋಟಿ ಮೌಲ್ಯದ ಚಿನ್ನ, ವಜ್ರ ಬೆಳ್ಳಿ ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಎಂ.ಸಿ. ಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್!; ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ಕೋಟ್ಯಂತರ ಮೌಲ್ಯದ ಚಿನ್ನ, ಡೈಮಂಡ್ಸ್ ಹಾಗೂ ಬೆಳ್ಳಿ ವಸ್ತುಗಳನ್ನು ಟ್ರಕ್ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಚುನಾವಣಾಧಿಕಾರಿಗಳು, ಪೊಲೀಸರು ಟ್ರಕ್ ತಡೆದು ಪರಿಶೀಲನೆ ನಡೆಸಿದಾಗ ಚಿನ್ನಾಭರಣಗಳು ಪತ್ತೆಯಾಗಿದೆ. 6 ಕೆಜಿ 586 ಗ್ರಾಂ ಚಿನ್ನ, 1 ಕೆಜಿ 71.492 ಗ್ರಾಂ ವಜ್ರಾಭರಣ, 1 ಕೆಜಿ 873.731 ಗ್ರಾಂ ಬೆಳ್ಳಿ ವಸ್ತುಗಳನ್ನು ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗ; 733 ಹುದ್ದೆಗೆ ಅರ್ಜಿ ಆಹ್ವಾನ












