ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮ ಮದ್ಯ ಮಾರಾಟ ಮತ್ತು MSIL ಗೆ ಗ್ರಾಮ ಮಟ್ಟದಲ್ಲಿ ಅನುಮತಿ ಕೊಡುವುದನ್ನು ವಿರೋಧಿಸಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಡಿಕಲ್ ನಲ್ಲಿ 19.10.2023 ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿಯಿಂದ ಗ್ರಾಮಸ್ಥರಲ್ಲಿ ನೆಮ್ಮದಿ ಇಲ್ಲದಂತಾಗಿದೆ,. ಗ್ರಾಮ ಮಟ್ಟದಲ್ಲಿ ಶಾಲೆಗಳು ತಲೆಯೆತ್ತಬೇಕಾದ ಈ ದಿನಗಳಲ್ಲಿ ನಮ್ಮನಾಳುವ ಸರ್ಕಾರಗಳು ಸಾವಿರಾರು ಸಾರಾಯಿ ಅಂಗಡಿಗಳಿಗೆ ಅನುಮತಿ ನೀಡುತ್ತಿದೆ. ಸುಂದರ ಈ ಪರಿಸರದಲ್ಲಿ ಸುಸಜ್ಜಿತ ಗ್ರಂಥಾಲಯಗಳು, ಶಾಲೆಗಳು, ಆಸ್ಪತ್ರೆ ಹಳ್ಳಿಯ ಜನರಿಗೆ ಬೇಕಾದ ಮೂಲ ಭೂತ ಸೌಕರ್ಯಗಳಾದ ರಸ್ತೆ ವಿದ್ಯುತ್, ಮನೆಗಳಿಗೆ ಹಕ್ಕು ಪತ್ರ ಸಾಗುವಳಿ ಜಮೀನಿಗೆ ಹಕ್ಕುಪತ್ರ ನೀಡಬೇಕಾದ ಯೋಜನೆಗಳು ಜಾರಿಗೆ ಒತ್ತಾಯಿಸಬೇಕಾದ ಯುವಜನತೆ ಅಥವಾ ಊರಿನ ಜನ ಮದ್ಯಪಾನದಿಂದ ತನ್ನ ತನವನ್ನೇ ಕಳೆದುಕೊಂಡು ಮಾನಸಿಕ ಅಸ್ವಸ್ಥರಾಗತೊಡಗಿದ್ದಾರೆ.
ಇದನ್ನೂ ಓದಿ; ಸಾರ್ವಜನಿಕರ ಗಮನಕ್ಕೆ; ರಾಜ್ಯದ ಪ್ರತಿಯೊಬ್ಬರ ಮೊಬೈಲ್ ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್!
ಯಾವ ಸರ್ಕಾರ ಬಂದರು, ಹೋದರು ಒಂದು ಕಡೆ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರವೆನ್ನುತ್ತಲೆ ದಿನಸಿ ಅಂಗಡಿಗಳಲ್ಲಿ, ಮನೆಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಜನರನ್ನು ಮದ್ಯ ವ್ಯಸನಿಗಳಾಗುವಂತೆ ಪ್ರೇರೆಪಿಸುತ್ತಿದೆ. ಮತ್ತು ಊರಿನ ಜನರ ಮಧ್ಯೆಯೇ ದ್ವೇಷದ ವಾತಾವರಣ ಸೃಷ್ಟಿಸುತ್ತಿದೆ. ಇದರಿಂದ ಮನೆ, ಮನಸ್ಸು ಊರು ಎಲ್ಲವೂ ಕೂಡ ನೆಮ್ಮದಿ ಕಳೆದುಕೊಳ್ಳುವ ಪರಿಸ್ಥಿತಿ ದುಡಿಯುವ ಜನರು ತಮ್ಮ ಆರೋಗ್ಯವನ್ನು ಹದಗೆಡಿಸಿಕೊಂಡು ನಿಕ್ತರಾಗುತ್ತಿದ್ದಾರೆ.
ಇದನ್ನೂ ಓದಿ; ರೈತರಿಗೆ ಸಿಹಿ ಸುದ್ದಿ;ಪಿಎಂ ಕಿಸಾನ್ ಹೊಸ ಕಂತಿನ ಹಣ ಈ ತಿಂಗಳಲ್ಲೇ ಬಿಡುಗಡೆ?
ಆದ ಕಾರಣ 19.10.2023 ಗುರುವಾರರಂದು ಬೆಳಗ್ಗೆ 10.30ಕ್ಕೆ ನಡೆಯುವ ಅಕ್ರಮ ಮದ್ಯ ಮಾರಾಟ ಮತ್ತು MSIL ಗೆ ಗ್ರಾಮ ಮಟ್ಟದಲ್ಲಿ ಅನುಮತಿ ಕೊಡುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾರಾಯಿ ವಿರೋಧಿ ಹೋರಾಟ ಸಮಿತಿಯ ರಾಧಾ ಹಾಗಲಗಂಚಿ ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ.
ಚಿಕ್ಕಮಗಳೂರು: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಾಲ ಮಂದಿರದಿಂದ ತಪ್ಪಿಸಿಕೊಂಡಿದ್ದ ಇಬ್ಬರು ಬಾಲಕಿಯರನ್ನು ವೇಶ್ಯಾವಾಟಿಕೆಯ ಜಾಲಕ್ಕೆ ತಳ್ಳಿ ಅತ್ಯಾಚಾರಕ್ಕೆ ಕಾರಣವಾಗಿದ್ದ ನಾಲ್ವರು ಸೇರಿ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ:
ಶಿವಮೊಗ್ಗದಲ್ಲಿ ಬಾಲಕಿಯೊಂದಿಗೆ ಸುತ್ತಾಡುತ್ತಿದ್ದ ಯುವಕನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. 16 ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯುವಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ರೋ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಬಾಲಕಿಯನ್ನು ಚಿಕ್ಕಮಗಳೂರಿನ ಬಾಲ ಮಂದಿರಕ್ಕೆ ಒಪ್ಪಿಸಿದ್ದರು.
ಬಾಲ ಮಂದಿರದಿಂದ ಮತ್ತೊಬ್ಬ 14 ವರ್ಷದ ಬಾಲಕಿಯೊಂದಿಗೆ ಹೊರಹೋಗಿದ್ದ ಬಾಲಕಿ, ವೇಶ್ಯಾವಾಟಿಕೆ ನಡೆಸುವವರ ಸಂಪರ್ಕಕ್ಕೆ ಸಿಲುಕಿದ್ದಾರೆ. ಈ ಇಬ್ಬರು ಬಾಲಕಿಯರನ್ನು ಹಾಸನದ ಮತ್ತೊಬ್ಬ ಮಧ್ಯವರ್ತಿಯ ಬಳಿ ಚಿಕ್ಕಮಗಳೂರಿನ ಮಧ್ಯವರ್ತಿ ಕಳುಹಿಸಿದ್ದಾರೆ. ಅಲ್ಲಿ ಇಬ್ಬರು ಬಾಲಕಿಯರ ಮೇಲೆ ಹಲವರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ಮೂಲಗಳ ಮಾಹಿತಿ, ಅಲ್ಲಿಂದ ಬಸ್ ಹತ್ತಿ ಬೆಂಗಳೂರಿಗೆ ತೆರಳಿ, ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಅಷ್ಟರಲ್ಲಿ ಬಾಲ ಮಂದಿರದ ಸಿಬ್ಬಂದಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಧರ್ಮಸ್ಥಳದಿಂದ ಬಾಲಕಿಯರನ್ನು ಕರೆ ತಂದು ವಿಚಾರಿಸಿದಾಗ ವೇಶ್ಯಾವಾಟಿಕೆಗೆ ತಳ್ಳಿ, ಹಾಸನದಲ್ಲಿ ಹಲವರಿಂದ ಅತ್ಯಾಚಾರ ನಡೆದಿದೆ ಎಂಬುದನ್ನು ಬಾಲಕಿಯರು ಪೊಲೀಸರ ಮುಂದೆ ತಿಳಿಸಿದ್ದಾರೆ.
ಚಿಕ್ಕಮಗಳೂರಿನಿಂದ ಹಾಸನಕ್ಕೆ ಕಳುಹಿಸಿದ ಆರೋಪದಲ್ಲಿ ಮಧ್ಯವರ್ತಿ ದಂಪತಿ, ಹಾಸನದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾದ ದಂಪತಿ, ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಆರು ಮಂದಿ ಸೇರಿ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಲ ಮಂದಿರದಿಂದ ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳಲು ಅವಕಾಶ ಇಲ್ಲ. ಆಗಿರುವ ಪ್ರಮಾದಕ್ಕೆ ಕಾರಣ ಕೇಳಿ ಕಾವಲುಗಾರರಿಗೆ ಬಾಲ ಮಂದಿರದ ಮುಖ್ಯಸ್ಥರು ನೋಟಿಸ್ ನೀಡಿದ್ದಾರೆ.












