
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಶಾರ್ಟ್ ಸರ್ಕ್ಯೂಟ್ ನಿಂದ ಅಡಿಕೆ ಸುಲಿಯುವ ಯಂತ್ರ ಸೇರಿದಂತೆ ಹಲವು ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಮುತ್ತಿನ ಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಡ್ಬೂರು ನಲ್ಲಿ ನಡೆದಿದೆ.
ಇದನ್ನೂ ಓದಿ: £19,800 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ

ಗುಡ್ಡೆಕೊಪ್ಪದ ಪುಟ್ಟೇಗೌಡರು ನೂತನ ಮನೆ ನಿರ್ಮಾಣ ಮಾಡುತ್ತಿದ್ದರಿಂದ ಪಕ್ಕದ ಶೆಡ್ ಗೆ ಮನೆಯಲ್ಲಿದ್ದ ವಸ್ತುಗಳನ್ನು ಸ್ಥಳಾಂತರಿಸಿದ್ದರು. ನಿನ್ನೆ ರಾತ್ರಿ ಅಡಿಕೆ ಸುಲಿಯುವ ಯಂತ್ರ ಸೇರಿದಂತೆ ಎರಡು ಚೀಲ ಅಡಿಕೆ, ಗೃಹಬಳಕೆ ವಸ್ತುಗಳು, ಫರ್ನಿಚರ್ ಗಳು, ಸುಮಾರು 60,000 ಹಣ, ಬಟ್ಟೆ ಬೆಂಕಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದೆ.

ಇದನ್ನೂ ಓದಿ: £2,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?













