ಆಲ್ದೂರು; (ನ್ಯೂಸ್ ಮಲ್ನಾಡ್ ವರದಿ) ಸಚಿವ ಜಮೀರ್ ಅಹ್ಮದ್ ವಿರುದ್ಧ ಚಿಕ್ಕಮಗಳೂರಿನಲ್ಲಿ ಆಕ್ರೋಶ ಮುಂದುವರೆದಿದ್ದು, ರಾಜೀನಾಮೆ ನೀಡುವಂತೆ ಬಿಜೆಪಿ ಹಾಗೂ ಒಕ್ಕಲಿಗ ಸಂಘಟನೆಯಿಂದ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ; APL-BPL ಕಾರ್ಡ್‌ದಾರರಿಗೆ ಮುಖ್ಯ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ

ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಇತ್ತೀಚೆಗೆ ಚನ್ನಪಟ್ಟಣ ಉಪಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಹೇಳಿ ನಿಂದನೆ ಮಾಡಿದ್ದು, ಸದ್ಯ ಈ ಬಗ್ಗೆ ರಾಜ್ಯದಲ್ಲಿ ಸಚಿವ ಜಮೀರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ರಾಜೀನಾಮೆ ನೀಡುವಂತೆ ಬಿಜೆಪಿ ಹಾಗೂ ಒಕ್ಕಲಿಗ ಸಂಘಟನೆಯಿಂದ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ; ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್; ಮಿನಿ ಟ್ರ್ಯಾಕ್ಟರ್ ಖರೀದಿಗೆ ಅರ್ಜಿ ಆಹ್ವಾನ; ಶೇ.90 ಸಹಾಯಧನ
ಜಮೀರ್ ಒಬ್ಬ ಗುಜರಿ ವ್ಯಾಪಾರಿ:
ಜಮೀರ್ ಒಬ್ಬ ಗುಜರಿ ವ್ಯಾಪಾರಿ, ದೇವೇಗೌಡರ ಉಗುರಿನ ಸಮಕ್ಕೂ ಇಲ್ಲ. ವಿಧಾನಸೌಧದ ಬಾಗಿಲನ್ನು ಒಂದಾಗಲೇ ಅವನಿಗೆ ಬುದ್ಧಿ ಕಲಿಸಬೇಕಿತ್ತು. ಜಮೀರ್ ಅಹ್ಮದ್ ನನ್ನು ವಿಧಾನಸೌಧ ಮೆಟ್ಟಿಲು ಹತ್ತಿಸಿದ್ದು ದೇವೇಗೌಡರು ಅನ್ನೋದು ನೆನಪಿರಬೇಕು. ಸಿದ್ದರಾಮಯ್ಯ ಸರ್ಕಾರ ಅಂತ್ಯವಾಗುವುದು ಜಮೀರ್ ಅಹ್ಮದ್ ನಿಂದಲೇ ಎಂದು ಆಲ್ದೂರಿನಲ್ಲಿ ಜಮೀರ್ ಅಹ್ಮದ್ ವಿರುದ್ಧ ಬಿಜೆಪಿ ಹಾಗೂ ಒಕ್ಕಲಿಗ ಮುಖಂಡರು ಕಿಡಿಕಾರಿದ್ದಾರೆ.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ST ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 25,000 ಶಿಷ್ಯ ವೇತನ













