ಅಸಗೋಡು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಮಹಾಸಭೆ

ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ಅಸಗೋಡು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಮಹಾ ಸಭೆಯನ್ನು 25/02/2025 ಮಂಗಳವಾರ ಒಕ್ಕೂಟದ ಅಧ್ಯಕ್ಷರಾದ ಸುಮ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.


ಇದನ್ನೂ ಓದಿ: ಹೊರಗುತ್ತಿಗೆ ನೌಕರರ ಗಮನಕ್ಕೆ!; ಸರ್ಕಾರದಿಂದ ಮಹತ್ವದ ಸುದ್ದಿ


ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ನವೀನ್ ಅವರು ಮಾತನಾಡಿ, ಒಕ್ಕೂಟ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ತಿಳಿಸಿದ್ದು, ಒಕ್ಕೂಟವು ಹೆಚ್ಚು ಲಾಭದಾಯಕವಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ ಎಂದರು. ಹಾಗೆಯೇ ಗ್ರಾಮ ಪಂಚಾಯಿತಿ ಮತ್ತು ಒಕ್ಕೂಟವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ನಾವು ಒಟ್ಟಾಗಿ ಕಾರ್ಯನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಮಹಿಳೆಯರು ಸದೃಢರಾಗಿ, ಅಸಗೋಡು gplf ಒಂದು ಮಾದರಿ gplf ಆಗಿ ಮಾಡಲು ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.

MBK ರಜನಿ M. S ಅವರು ವರದಿ ಮಂಡನೆ ಮಾಡಿ ಒಕ್ಕೂಟದ ಕಾರ್ಯವೈಖರಿ ಹಾಗೂ ಒಕ್ಕೂಟಕ್ಕೆ ಬಂದಿರುವ ಅನುದಾನಗಳು ಮತ್ತು ಅದರ ಬಳಕೆ ಬಗ್ಗೆ ಎಲ್ಲಾ shg ಸದಸ್ಯರುಗಳಿಗೆ ತಿಳಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಲೆಕ್ಕ ಪರಿಶೋಧನ ವರದಿ ಬಗ್ಗೆ ಮತ್ತು ಮಹಿಳೆಯರಿಗೆ NRLM ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.


ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ನಕಲಿ ಕಲ್ಲಂಗಡಿ ಹಣ್ಣು!; ಹೀಗೆ ಪತ್ತೆ ಹಚ್ಚಿ…


ನಂತರ ಸಾಮಾಜಿಕ ಕ್ರೂಡಿಕರಣ ಅಭಿಯಾನ ಸಂಬಂಧಿಸಿದಂತೆ ಇಂದಿನ ಮಹಾಸಭೆಯಲ್ಲಿ 2 ಹೊಸ ಸಂಘಗಳನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಬದಲಾವಣೆ ಮತ್ತು ಮಹಿಳೆಯರಿಗೆ ಆಟೋಟ ಸ್ಪರ್ಧೆ ಮಾಡಿ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಸಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರು ರಮೇಶ್ BB, ಉಪಾಧ್ಯಕ್ಷರು ಯಶೋಧ, ಸದಸ್ಯರಾದ ಚಂದ್ರಶೇಖರ K R, ರೇಖಾ, ಕಾರ್ಯದರ್ಶಿ ಮಂಜುಳ, ವಲಯ ಮೇಲ್ವಿಚಾರಕರು ಚೈತ್ರ, ಒಕ್ಕೂಟದ ಉಪಾಧ್ಯಕ್ಷರಾದ ವೇದಾವತಿ ಮತ್ತು ಪದಾಧಿಕಾರಿಗಳು, LCRP ಕಲಾವತಿ, ಚೈತ್ರ,  ಪಶುಸಖಿ ಭಾಮಿನಿ, ಕೃಷಿ ಸಖಿ ಅಶ್ವಿನಿ, FLCRP ಅಖಿಲ ಬಾನು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.


ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.