ಆಗುಂಬೆ: ಸ್ವಂತ ಖರ್ಚಿನಲ್ಲೇ ರಸ್ತೆ ಬದಿಯ ಕಡಿದುಗಳಿಗೆ ಮಣ್ಣು ತುಂಬಿಸಿದ ಬಿ. ಟಿ. ಉಮೇಶ್ ಬಿಳಿಗೆರೆ

ಆಗುಂಬೆ: (ನ್ಯೂಸ್ ಮಲ್ನಾಡ್ ವರದಿ) ರಸ್ತೆಯ ಬದಿಯಲ್ಲಿ ದೊಡ್ಡದಾದ ಹೊಂಡ ದಿಮ್ಮಿ ಬಿದ್ದ ಕಾರಣ ಬಿ. ಟಿ. ಉಮೇಶ್ ಬಿಳಿಗೆರೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಬದಿಯ ಕಡಿದುಗಳಿಗೆ ಮಣ್ಣು ತುಂಬಿಸಿದ್ದಾರೆ.


ಇದನ್ನೂ ಓದಿ: ಹೊರಗುತ್ತಿಗೆ ನೌಕರರ ಗಮನಕ್ಕೆ!; ಸರ್ಕಾರದಿಂದ ಮಹತ್ವದ ಸುದ್ದಿ


ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮದ ಬಿಳಿಗೆರೆ ನಿವಾಸಿಯಾದ ಇವರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಸಾಮಾನ್ಯ ನಾಗರೀಕರಾಗಿದ್ದಾರೆ. ಜೀವನೋಪಾಯಕ್ಕಾಗಿ ತನ್ನದೇ ಆದ ಜೆಸಿಬಿ ಮತ್ತು ಟ್ರಾಕ್ಟರ್ ಉದ್ಯಮ ನಡೆಸುತ್ತಿದ್ದಾರೆ.

ಗುಡ್ಡೇಕೇರಿ – ಹೊಸಗದ್ದೆ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ನೂರಾರು ಸಾರ್ವಜನಿಕ ವಾಹನಗಳು ಹಾಗೂ ಶೃಂಗೇರಿ – ಕುಂದಾದ್ರಿಗೆ ಆಗಮಿಸುವ ಪ್ರವಾಸಿಗರು ಇದೇ ರಸ್ತೆಯ ಮಾರ್ಗದಲ್ಲಿ ಸಂಚರಿಸುತ್ತಿದ್ದು, ರಾಜ್ಯ ಹೆದ್ದಾರಿ ಪ್ರಾಧಿಕಾರದ ಸರಿಯಾದ ನಿರ್ವಹಣೆ ಇಲ್ಲದೆ ರಸ್ತೆಯ ಬದಿಯಲ್ಲಿ ದೊಡ್ಡದಾದ ಹೊಂಡ ದಿಮ್ಮಿ ಇದ್ದ ಕಾರಣ ಸಣ್ಣ ವಾಹನ ಸವಾರರಿಗೆ ಹಾಗೂ ಶಾಲಾ ಮಕ್ಕಳ ವಾಹನಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಕುರಿತು ಸಂಬಂಧಿತ ಇಲಾಖೆಗಳ ಗಮನಕ್ಕೂ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.


ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ನಕಲಿ ಕಲ್ಲಂಗಡಿ ಹಣ್ಣು!; ಹೀಗೆ ಪತ್ತೆ ಹಚ್ಚಿ…


ಹೀಗಾಗಿ ಬಿ. ಟಿ. ಉಮೇಶ್ ಬಿಳಿಗೆರೆ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಬದಿಯ ಕಡಿದುಗಳಿಗೆ ಮಣ್ಣು ತುಂಬಿಸಿದ್ದಾರೆ.


ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.