ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ಗಾಜಿನ ಸೇತುವೆ! | ಪ್ರವಾಸೋದ್ಯಮ ಇಲಾಖೆಯಿಂದ ಮಹತ್ವ ಯೋಜನೆ ಪ್ರಸ್ತಾವ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನಲ್ಲಿ ಮಳೆ ಬೀಳಲು ಆರಂಭಿಸಿದರೆ ಸಾಕು ಪ್ರವಾಸಿಗರು ಚಿಕ್ಕಮಗಳೂರಿನತ್ತ ಮುಖ ಮಾಡುತ್ತಾರೆ. ಸಹಜವಾಗಿ ಪ್ರವಾಸಿಗರು ಮುಳ್ಳಯ್ಯನಗರಿಗೆ ಹೋಗುತ್ತಾರೆ. ಇಂತಹದ್ದೇ ಇನ್ನೊಂದು ಬ್ಯೂಟಿಫುಲ್ ಪ್ರವಾಸಿ ತಾಣವನ್ನ ಪರಿಚಯಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಅದುವೇ ಪಶ್ಚಿಮ ಘಟ್ಟದ ಆರಂಭಿಕ ಪಾಯಿಂಟ್ ಎನಿಸಿಕೊಂಡಿರುವ “ರಾಣಿ ಝರಿ ವೀವ್ ಪಾಯಿಂಟ್”.

 

ಇದನ್ನೂ ಓದಿ; ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?

ಮೂಡಿಗೆರೆ ತಾಲ್ಲೂಕಿನ ಅಂಚಿನಲ್ಲಿರುವ ಈ ಅದ್ಭುತ ಪ್ರವಾಸಿ ತಾಣ. ಸುಂಕಸಾಲೆ ಗ್ರಾಮದ ಸಮೀಪ ಇರುವ ಈ ಜಾಗದಲ್ಲಿನ ಪ್ರಪಾತದ ಮೇಲ್ಬಾಗ ಚಿಕ್ಕಮಗಳೂರು ಜಿಲ್ಲೆಗೆ ಸೇರಿದರೆ, ಕೆಳಭಾಗ ದಕ್ಷಿಣ ಕನ್ನಡ ಜಿಲ್ಲೆಗೆ ಸೇರುತ್ತದೆ. ಪಶ್ಚಿಮಘಟ್ಟ ಆರಂಭದ ಘಟ್ಟವೂ ಇದೇ ಆಗಿದ್ದು, ಹಸಿರ ಪ್ರಕೃತಿಯನ್ನು ಹೊದ್ದು ಮಲಗಿದಂತೆ ಕಾಣುವ ಈ ರಾಣಿ ಝರಿ ಪರ್ವತದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಲ್ಲೇ ಹತ್ತಿರದಲ್ಲಿರುವ ಬಲ್ಲಾಳರಾಯನದುರ್ಗಾ ಕೋಟೆಗೆ ತೆರಳುತ್ತಾರೆ ಆದ್ರೂ ಇತ್ತ ಕಡೆ ಬರೋ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ

 

ಇದನ್ನೂ ಓದಿ; 2,000 ರೂ. ನೋಟ್ ಹಿಂಪಡೆದ rbi; ಆದಷ್ಟು ಬೇಗ ಬದಲಾಯಿಸಿ 2000 ನೋಟು; ಇನ್ನುಳಿದಿದೆ ಕೆಲವೇ ದಿನಗಳು

ಹೀಗಾಗಿ ರಾಣಿ ಝರಿ ವೀವ್ ಪಾಯಿಂಟ್ ಅನ್ನು ಕೂಡಾ ಪ್ರವಾಸಿ ತಾಣವಾಗಿ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ರಾಜ್ಯದಲ್ಲಿಯೇ ಮೊದಲ ಬಾರಿಗೆ ಗಾಜಿನ ಸೇತುವೆಯನ್ನು ನಿರ್ಮಿಸಲು ಮುಂದಾಗಿದೆ. ಈಗಾಗಲೇ ಇದಕ್ಕೆ ಬೇಕಾದ ಅಧ್ಯಯನವು ಆರಂಭಗೊಂಡಿದೆ ಎಂದು ಹೇಳಲಾಗಿದೆ.

 

ಇದನ್ನೂ ಓದಿ; ಭರ್ಜರಿಯಾಗಿ ಇಳಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ಇಂದಿನ ದರಪಟ್ಟಿ- 14.09.2023

ಇನ್ನು ಈ ಗಾಜಿನ ಸೇತುವೆ ನಿರ್ಮಿಸುವ ಯೋಜನೆಗೆ ಎಷ್ಟು ವೆಚ್ಚವಾಗಲಿದೆ, ಯಾವ ರೀತಿ ನಿರ್ಮಾಣ ಮಾಡಬಹುದು ಎಂಬುದರ ಸಂಪೂರ್ಣ ವಿವರ ಒಳಗೊಂಡ ಅಂದಾಜು ಪಟ್ಟಿ ತಯಾರಿಸಲು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ; ರೈತರಿಗೆ ಕಾಡುತ್ತಿರುವ ಮತ್ತೊಂದು ಭೀತಿ…!; ಗೊಬ್ಬರ ಬೆಲೆ ಏರಿಕೆ ಆಗಲಿದೆಯಾ…?; ಯಾವ ಗೊಬ್ಬರಕ್ಕೆ ಸಬ್ಸಿಡಿ ಸಿಗಲಿದೆ

 

ಚಿಕ್ಕಮಗಳೂರು: ರಸ್ತೆಗಳಲ್ಲಿ ವ್ಹೀಲಿಂಗ್ ಹಾವಳಿ | ಪುಂಡರಿಗೆ ಬಿತ್ತು ದಂಡ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮೋಟಾರ್ ಸೈಕಲ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಗೇರ್ ಮರಡಿ ರಸ್ತೆಯಲ್ಲಿ ನಡೆದಿದೆ.

ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುತ್ತಿದ್ದ ಸುಮಾರು 22 ವರ್ಷ ವಯಸ್ಸಿನ ಯುವಕನ ವಿರುದ್ಧ ಕಲಂ 189 ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘನ ನ್ಯಾಯಾಲಯವು 5,000 ರೂಗಳನ್ನು ದಂಡ ವಿಧಿಸಿದ್ದಾರೆ.

 

ಹಲವು ಕಡೆ ವೈಕ್ ವ್ಹೀಲಿಂಗ್ ಹುಚ್ಚಾಟ ನಡೆಯುತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಯುವಕರ ಮೊಜು ಮೊಸ್ತಿ ಆಟವಾಗಿರಬೇಕು. ಆದರೆ ಅದು ಹುಚ್ಚಾಟವಾದರೆ ಜೀವಗಳಿಗೆ ಕುತ್ತು ತರುತ್ತದೆ ಅನ್ನೊದಕ್ಕೆ ಈ ಹಿಂದೆ ವಿವಿದ ಕಡೆ ವ್ಹೀಲಿಂಗ್ ವೇಳೆ ನಡೆದ ಕೃತ್ಯಗಳೇ ನೈಜ ಉದಾಹರಣೆ. ಅಷ್ಟೆ ಅಲ್ಲದೇ ಸೋಶಿಯಲ್ ಮೀಡಿಯದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಮೇಲೆ ಸಹ ನಿಗಾ ವಹಿಸಲಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಸಹ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.