ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಳಹೊಲಗದ್ದೆ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ; ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ; ಈಗಲೇ ಅರ್ಜಿ ಸಲ್ಲಿಸಿ

ಕಾಫಿ ತೋಟದಲ್ಲಿ ಕಾಫಿ ಗಿಡಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದು, ಪಿ.ಎಸ್.ಐ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಮತ್ತು ತಂಡ ಓರ್ವ ಆರೋಪಿಯನ್ನು ವಶಕ್ಕೆ ಪಡೆದು, 100 ಗ್ರಾಂ ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಅಂಚೆ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆ!; ಜನರಿಂದ ಭರ್ಜರಿ ರೆಸ್ಪಾನ್ಸ್, ಏನಿದು ಯೋಜನೆ?
ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಭಕ್ತರ ಪಾದ ತೊಳೆದು, ಎಣ್ಣೆ ಮಸಾಜ್ ಮಾಡಿದ ವಿನಯ್ ಗುರೂಜಿ..!
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಶಿವರಾತ್ರಿ ಹಬ್ಬಕ್ಕೆ ಇನ್ನು ಕೆಲ ದಿನಗಳ ಬಾಕಿ ಇರುವಂತೆ ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದು, ಮೂಡಿಗೆರೆ, ಕೊಟ್ಟಿಗೆಹಾರದ ಮೂಲಕ ಜನರು ಸಾಗರದಂತೆ ಹೋಗುತ್ತಿದ್ದಾರೆ. ನೂರಾರು ಕೀಲೋಮೀಟರ್ ಗಟ್ಟಲೆ ಭಕ್ತರ ನಡೆಗೆ ಮೂಲಕ ತೆರಳಿ ದೇವರ ದರ್ಶನ ಪಡೆಯುಲಿದ್ದಾರೆ.
ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ವಿಶ್ರಾಂತಿಗೆ ವ್ಯವಸ್ಥೆ:
ರಾಜ್ಯದ ಮೂಲೆ ಮೂಲೆಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಭಕ್ತರು ಆಗಮಿಸುತ್ತಿದ್ದು, ನೂರಾರು ಭಕ್ತರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣವನ್ನು ರಾತ್ರಿ ವಿಶ್ರಾಂತಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಸನ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕುಣಿಗಲ್, ಬೆಂಗಳೂರು, ಕಡೂರು, ತರೀಕೆರೆ ಭಾಗದ ಭಕ್ತರು ಆಗಮಿಸುತ್ತಿದ್ದು, ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವೇಳೆ ಪಾದಯಾತ್ರೆ ಮಾಡಲು ಕಷ್ಟವಾಗುವ ಹಿನ್ನೆಲೆಯಲ್ಲಿ ಭಕ್ತರು ಬಸ್ ನಿಲ್ದಾಣವನ್ನು ವಿಶ್ರಾಂತಿಗೆ ಬಳಸಿಕೊಂಡರು.
ಪಾದಯಾತ್ರೆ ಹೊರಟ ಭಕ್ತರಿಗೆ ಎಣ್ಣೆ ಮಸಾಜ್ ಮಾಡಿದ ವಿನಯ್ ಗುರೂಜಿ..!:
ಅವಧೂತ ವಿನಯ್ ಗುರೂಜಿ ಪಾದಯಾತ್ರಿಗಳ ಕಾಲು ತೊಳೆದು, ಪುಷ್ಪ ಹಾಕಿ ಪೂಜಿಸಿ ಬಳಿಕ ಎಣ್ಣೆ ಹಚ್ಚಿ ಮಸಾಜ್ ಮಾಡಿದ ಚಿಕ್ಕಮಗಳೂರಿನಲ್ಲಿ ನಡೆದಿದೆ. ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಿಲ್ಲೆಯ ಅನೇಕ ಕಡೆಗಳಿಂದ ಪಾದಯಾತ್ರೆ ಮಾಡುತ್ತಿದ್ದು, ತಂಡೋಪತಂಡವಾಗಿ ಸಾಗುತ್ತಿದ್ದಾರೆ. ಮಂಗಳವಾರ ರಾತ್ರಿ ಇಂತಹುದೇ ಪಾದಯಾತ್ರೆಯ ತಂಡ ಮೂಡಿಗೆರೆ ತಾಲೂಕಿನ ನೀರುಗಂಡಿಯಲ್ಲಿ ವಾಸವಾಗಿದ್ದರು. ಈ ವೇಳೆ ಅವಧೂತ ವಿನಯ್ ಗುರೂಜಿ ಪಾದಯಾತ್ರಿಗಳ ಕಾಲು ತೊಳೆದು, ಪುಷ್ಪ ಹಾಕಿ ಪೂಜಿಸಿದರು. ಬಳಿಕ ಎಣ್ಣೆ ಹಚ್ಚಿ ಮಸಾಜ್ ಮಾಡಿದರು. ಅವಧೂತ ವಿನಯ್ ಗುರೂಜಿ ಗೆ ಶಾಸಕಿ ನಯನ ಮೋಟಮ್ಮ ಸಾಥ್ ನೀಡಿದರು.












