ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) Ksrtc ಬಸ್ ನಿಲುಗಡೆ ನಿಷೇಧ ತೆರವುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ರಕ್ಷಣಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮೊದಲ ಹಂತವಾಗಿ ನಾಗರಿಕ ಹೋರಾಟ ಸಮಿತಿ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ; ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳು ಕಡ್ಡಾಯ!

ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಹಾಗೂ ಚಿಕ್ಕಮಗಳೂರು ನಗರ ಸಂಚಾರಿ ವಿಭಾಗದ ಠಾಣಾಧಿಕಾರಿಗಳ ಅವೈಜ್ಞಾನಿಕ ವರದಿಯ ಹಿನ್ನೆಲೆಯಲ್ಲಿ ಶೃಂಗಾರ್ ವೃತ್ತದಲ್ಲಿ KSTRC ಬಸ್ ನಿಲುಗಡೆ ಮಾಡದಂತೆ ಜಿಲ್ಲಾಡಳಿತ ಆದೇಶ ಮಾಡಿದೆ. ಇದರಿಂದಾಗಿ ಜಯಪುರ, ಗೌರಿ ಕಾಲುವೆ, ನೆಹರು ನಗರ, ರಾಮನಹಳ್ಳಿ, ಬಸವನಹಳ್ಳಿ, ಅಯ್ಯಪ್ಪ ನಗರ ಸುತ್ತಮುತ್ತಲಿನ ನಾಗರಿಕರಿಗೆ, ಹಾಸ್ಟೆಲ್-ಕಾಲೇಜ್ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದೆ.
ಇದನ್ನೂ ಓದಿ; ರೇಷನ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ; ಇಂತಹವರಿಗೆ ಮುಂದಿನ ತಿಂಗಳಿನಿಂದ ಸಿಗಲ್ಲ ರೇಷನ್!
ಜಿಲ್ಲಾಡಳಿತದ ಈ ಅವೈಜ್ಞಾನಿಕ ನೀತಿ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದು, ಮೊದಲ ಹಂತವಾಗಿ ನಾಗರಿಕ ಹೋರಾಟ ಸಮಿತಿ ಹೆಸರಿನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ; ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಏನದು? ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ












