ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ರಾತ್ರಿ ಜಿಲ್ಲೆಯ ಹಲವೆಡೆ ಮಳೆ ಅಬ್ಬರಿಸಿದ್ದ ಪರಿಣಾಮ ಹಲವು ಅವಾಂತರ ಸೃಷ್ಟಿಯಾಗಿದೆ.
ಇದನ್ನೂ ಓದಿ: ರೈತರೇ ಗಮನಿಸಿ; ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ; ಈ ರೀತಿ ಮಾಡಿ

ಚಿಕ್ಕಮಗಳೂರು ನಗರದಲ್ಲಿ ಬೈಕ್ ಗಳ ಮೇಲೆ ಕಾಂಪೌಂಡ್ ಕುಸಿದು ಬಿದ್ದು, ಎರಡು ಬೈಕ್ ಗಳು ಸಂಪೂರ್ಣ ಜಖಂಗೊಂಡಿದೆ. ಅಲ್ಲದೆ ಭಾರೀ ಮಳೆಯಿಂದ ಗುಡಿಸಲಿಗೆ ಚರಂಡಿ ನೀರು ನುಗ್ಗಿದ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿಯಲ್ಲಿ ನಡೆದಿದೆ.


ಇದನ್ನೂ ಓದಿ: ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ತಪ್ಪದೆ ಈ ಸುದ್ದಿ ಓದಿ
ಎರಡು ಗುಡಿಸಲು ಹಾಗೂ ಗೊಬ್ಬರದ ಗೋಡಾನ್ ಗೆ ಮಳೆ ನೀರು ನುಗ್ಗಿದ್ದು, ಚರಂಡಿ ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದೇ ಸ್ಥಳದಲ್ಲಿ ಗೋಡಾನ್ ಗೆ ನೀರು ನುಗ್ಗಿರೋದ್ರಿಂದ ಅಪಾರ ಪ್ರಮಾಣದ ಗೊಬ್ಬರ ಕೂಡ ಹಾಳಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅವಾಂತರ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಾಹನಗಳಿಗೆ hsrp ಅಳವಡಿಕೆ; ಗಡುವು ಮತ್ತೆ ವಿಸ್ತರಿಸುತ್ತಾ ಸರ್ಕಾರ…?
ಮನೆ ಮೇಲೆ ಮರ ಬಿದ್ದು ಸಂಪೂರ್ಣ ಜಖಂ:
ಇನ್ನು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ಕಸ್ಕೆ ಎಂಬ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊAಡಿದೆ. ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಜಯಪುರ: ವಿದ್ಯುತ್ ತಂತಿಗೆ ಅಲ್ಯುಮಿನಿಯಮ್ ಏಣಿ ತಾಗಿ ಶಾಕ್; ಕೃಷಿಕ ಸಾವು
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಹಲಸಿನ ಹಣ್ಣು ಕುಯ್ಯಲು ತೆರಳುತ್ತಿರುವ ವೇಳೆ ವಿದ್ಯುತ್ ಶಾಕ್ ಹೊಡೆದು ಕೃಷಿಕರೊಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬರ ಪರಿಹಾರ; ನಿಮ್ಮ ಖಾತೆಗೆ ಹಣ ಜಮಾ ಆಗಿಲ್ವಾ?; ಹೀಗೆ ಚೆಕ್ ಮಾಡಿ
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೇತೋಟದ ವಿಜಯಗೌಡ (56) ವಿದ್ಯುತ್ ಶಾಕ್ ನಿಂದಾಗಿ ಮೃತಪಟ್ಟ ಕೃಷಿಕ. ಹಲಸಿನ ಹಣ್ಣು ಕುಯ್ಯಲು ತೆರಳುತ್ತಿದ್ದಾಗ ಅಲ್ಯುಮಿನಿಯಂ ಎಣಿ ವಿದ್ಯುತ್ ವೈರ್ ಗೆ ತಗಲಿದ ಪರಿಣಾಮ ಸ್ಥಳದಲ್ಲಿಯೇ ವಿಜಯ್ ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾಕ್ ಹೊಡೆದ ಪರಿಣಾಮ ದೇಹದ ಬಹುತೇಕ ಭಾಗಗಳು ಬೆಂಕಿಯಲ್ಲಿ ಸುಟ್ಟು ಹೋಗಿತ್ತು. ಹೊಗೆಯನ್ನು ಗಮನಿಸಿದ ಸ್ಥಳೀಯರೊಬ್ಬರು ಮೆಸ್ಕಾಂ ಸಿಬ್ಬಂಧಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; Hsrp Number Plate ಬಗ್ಗೆ ಬಂದೇ ಬಿಡ್ತು ಮತ್ತೊಂದು ಮಹತ್ವದ ಮಾಹಿತಿ; ಏನದು? ಇಲ್ಲಿದೆ ನೋಡಿ
ಘಟನೆಯ ಕುರಿತು ಮೃತರ ಪತ್ನಿ ಪ್ರಮೀಳ ಜಯಪುರ ಠಾಣೆಗೆ ದೂರು ನೀಡಿದ್ದು, ಪಿಎಸ್ಐ ಅಂಬರೀಶ್ ತನಿಖೆ ಪ್ರಾರಂಭಿಸಿದ್ದಾರೆ.












