ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯ ಪತ್ರಕರ್ತ ಯೋಗೀಶ್ ಕಾಮೇನಹಳ್ಳಿ ಭಾಜನರಾಗಿದ್ದಾರೆ.
ಇದನ್ನೂ ಓದಿ; ಮಹಾನಗರ ಪಾಲಿಕೆಯಲ್ಲಿ ಉದ್ಯೋಗಾವಕಾಶ; 89 ಹುದ್ದೆಗಳಿಗೆ ನೇರ ನೇಮಕಾತಿ

ಫೆಬ್ರವರಿ 3 ಮತ್ತು 4 ದಾವಣಗೆರೆಯಲ್ಲಿ ನಡೆಯಲಿರುವ 38 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿದ್ದು, ಈ ಸಮ್ಮೇಳನದಲ್ಲಿ ಯೋಗೇಶ್ ಕಾಮೇನಹಳ್ಳಿ ಅವರಿಗೆ ಅತ್ಯುತ್ತಮ ಸುದ್ದಿ ಮತ್ತು ಛಾಯಚಿತ್ರ ವಿಭಾಗದಲ್ಲಿ ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇದನ್ನೂ ಓದಿ; ಬಿಯರ್ ಪ್ರಿಯರಿಗೆ ಬ್ಯಾಡ್ ನ್ಯೂಸ್; ಮತ್ತೆ ಕುಡುಕರ ಜೇಬಿಗೆ ಕೈ ಹಾಕಿದ ಸರ್ಕಾರ
ಯೋಗೇಶ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪತ್ರಿಕಾ ವೃತ್ತಿಯಲ್ಲಿ ನಿರತರಾಗಿದ್ದು, ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು: ಮೋಟಾರ್ ಸೈಕಲ್ ಕಳವು ಪ್ರಕರಣ | ಇಬ್ಬರು ಆರೋಪಿಗಳ ಬಂಧನ
ಇದನ್ನೂ ಓದಿ; ಕೃಷಿ ಉಪಕರಣ ಪಡೆಯಲು ಅರ್ಜಿ ಆಹ್ವಾನ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೋಟಾರ್ ಸೈಕಲ್ ಕಳವು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ಜಿಲ್ಲಾವಾರು ಹುದ್ದೆಗಳ ಮಾಹಿತಿ
PSI ಲಿಂಗದಹಳ್ಳಿ ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ 2.5 ಲಕ್ಷ ಬೆಲೆಯ 2 ಮೋಟಾರ್ ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ್ದ 2.4 ಲಕ್ಷ ಬೆಲೆಯ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ; ಪರಿವರ್ತನೆಗೊಂಡ ಎಸ್ಸಿ-ಎಸ್ಟಿ ಭೂಮಿ ಮಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ: ಹೈಕೋರ್ಟ್
ಈ ಕಾರ್ಯಾಚಾರಣೆಯಲ್ಲಿ PSI ಲಿಂಗದಹಳ್ಳಿ ಶಶಿಕುಮಾರ್ ವೈ ಎಸ್, ASI ನಯೀಮುಲ್ಲಾ ಖಾನ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಿರೀಶ್ ವೈ, ಇರ್ಫಾನುಲ್ಲಾ, ಹರೀಶ್ ಆರ್, ಶ್ರೀಧರ್ ಜೋಗಿ, ಶಶಿಕುಮಾರ್ ಆರ್, ನವೀನ್ ಇದ್ದರು.












