ಚಿಕ್ಕಮಗಳೂರು: ಜೋಡಿ ಕೊಲೆ ಕೇಸ್‌’ಗೆ ಸಿಕ್ತು ಬಿಗ್ ಟ್ವಿಸ್ಟ್!

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡು ಚಿಕ್ಕಮಗಳೂರಿನ ಕೊಳಗಾಮೆ ಗ್ರಾಮದಲ್ಲಿ ಡಬಲ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು 48 ಗಂಟೆಗಳ ಒಳಗೆ ಜಿಲ್ಲೆಯ ಮಲ್ಲಂದೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.


ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್


ನ.21 ರಂದು ಕರಿಬಸವಯ್ಯ (65) ಅವರ ಪತ್ನಿ ಲಲೀತಮ್ಮ (60) ಎಂಬವರ ಕೊಲೆಯಾಗಿತ್ತು. ಪ್ರಕರಣ ನಡೆದ 48 ಗಂಟೆಯಲ್ಲಿ ಮಲ್ಲಂದೂರು ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದೀಗ ಆರೋಪಿ ನಿಶಾಂತ್ (21) ಬಾಯಿಯಿಂದ ಕೊಲೆಗೆ ಕಾರಣ ಏನು ಎಂಬುದನ್ನು ಬಾಯಿ ಬಿಡಿಸಿದ್ದಾರೆ.

ಹೌದು, ತನಗಿರುವ ಕಾಯಿಲೆ ಗುಣವಾಗಲು ಅಜ್ಜಿಯ ಮೇಲೆ ಅತ್ಯಾಚಾರ ಎಸಗಿ ಮೊಮ್ಮಗನೇ ಕೊಲೆಗೈದಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸುವ ಮುನ್ನವೇ ಆರೋಪಿ ಅಜ್ಜನನ್ನು ಕೊಲೆಗೈದಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.


ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಜಾರಿಗೆ ಬರಲಿವೆ ಈ ಹೊಸ ನಿಯಮಗಳು!


ಇನ್ನು ಕೊಲೆಯಾದ ದಂಪತಿಗೆ ಮಕ್ಕಳಿರಲಿಲ್ಲ. ಮೃತ ಲಲಿತಮ್ಮನ ತಂಗಿಯ ಮೊಮ್ಮಗ ನಿಶಾಂತ್ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತ ಅಜ್ಜ ಅಜ್ಜಿಯ ಬಳಿ ಒಡವೆ ಹಾಗೂ ಹಣವನ್ನೂ ಪಡೆದುಕೊಂಡು ಅಡವಿಟ್ಟಿದ್ದ. ಒಡವೆ ಬಿಡಿಸಿಕೊಡದ ಹಿನ್ನೆಲೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ಹಣಕ್ಕಾಗಿ ಅಜ್ಜ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಪೊಲೀಸರು ಕೂಡ ಅದೇ ದೃಷ್ಟಿಕೋನದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ ಕೊಲೆಗೆ ಅಸಲಿ ಕಾರಣ ತಿಳಿದು ಪೊಲೀಸರು ಸಹ ಕಂಗಾಲಾಗಿದ್ದಾರೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೆ ಕೇಂದ್ರದಿಂದ ಮುಖ್ಯ ಮಾಹಿತಿ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.