ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಲ್ಲಿ ಮತ್ತೆ ದತ್ತಪೀಠ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದ ಪೂಜಾ-ವಿಧಿವಿಧಾನದ ಬಗ್ಗೆ ಸರ್ಕಾರದ ವಿರುದ್ಧ ಮತ್ತೆ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!

ಜಿಲ್ಲಾಡಳಿತ ಜಿಯಾರತ್ ಹಾಗೂ ಫಾತೇಹಾ ಅವಕಾಶ ನೀಡದಿದ್ದಕ್ಕೆ ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸಿದ್ದು ದರ್ಗಾ ಹಾಗೂ ಖಬರಸ್ಥಾನ್ ನಲ್ಲಿ ಜಿಯಾರತ್ ಸಲ್ಲಿಸಲು ಅವಕಾಶ ನೀಡದ ಜಿಲ್ಲಾಡಳಿತ ಹೀಗಾಗಿ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಅವಕಾಶ ನೀಡಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದತ್ತಪೀಠದ ಆವರಣದಲ್ಲಿರುವ ದರ್ಗಾ ಮತ್ತು ಖಬರಸ್ಥಾನ್ನಲ್ಲಿ ಜಿಯಾರತ್ (ಸಮಾಧಿಗಳಿಗೆ ಪ್ರಾರ್ಥನೆ ಸಲ್ಲಿಸುವುದು) ಹಾಗೂ ಫಾತೇಹಾ (ಸಮಾಧಿ ಬಳಿ ಸಿಹಿ ಇಟ್ಟು ಪೂಜಿಸುವುದು) ನಡೆಸಲು ಈ ಬಾರಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಆಚರಣೆಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ, “ಇದು ಹೊಸ ಪದ್ಧತಿ” ಎಂಬ ಕಾರಣ ನೀಡಿ ಅನುಮತಿ ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಕಳೆದ ಬಾರಿ ತೆರೆದಿದ್ದ ಖಬರಸ್ಥಾನ್ ಗೇಟ್ ಅನ್ನು ಈ ಬಾರಿ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಭಕ್ತರು ದೂರದಿಂದಲೇ ಸಮಾಧಿಗಳನ್ನು ನೋಡಿ ಮರಳುವಂತಾಗಿದೆ.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!
ಜಿಲ್ಲಾಡಳಿತದ ಈ ಧೋರಣೆಯನ್ನು ಖಂಡಿಸಿ ದತ್ತಪೀಠದ ಆವರಣದಲ್ಲೇ ಮುಸ್ಲಿಂ ಸಮುದಾಯದ ನೂರಾರು ಜನರು ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. “ನಮ್ಮ ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಡಚಣೆ ಇಲ್ಲದೆ ಜಿಯಾರತ್ ಮಾಡಲು ಅವಕಾಶ ನೀಡಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂಬಂಧ ಸಚಿವ ರಾಮಲಿಂಗಾ ರೆಡ್ಡಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗ್ರಾಮೀಣ ಜನತೆಯ ಗಮನಕ್ಕೆ; ಮಾ.31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ದರೆ ಬೀಳಲಿದೆ ಭಾರಿ ದಂಡ!












