ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ಶ್ರೀಧರ್ ಮೃತ ಕೂಲಿ ಕಾರ್ಮಿಕ.
ಇದನ್ನೂ ಓದಿ; ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!

ಕಾಫಿ ತೋಟದ ಕೆಲಸಕ್ಕೆಂದು ತೆರಳುತ್ತಿದ್ದ ಶ್ರೀಧರ್ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ ಕೂಲಿ ಕಾರ್ಮಿಕನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ; ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
ಇನ್ನು ಕಳೆದ ಎರಡು ವರ್ಷದಲ್ಲಿ ಆನೆ ದಾಳಿಗೆ ಐದಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಿಲ್ಲೆಯ ವಿವಿಧೆಡೆ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕೆ.ಆರ್.ಪೇಟೆ, ಕೆಂಚೇನಹಳ್ಳಿ ಸುತ್ತಮುತ್ತ ಓಡಾಡುತ್ತಿದೆ ಎನ್ನಲಾಗಿದೆ.
ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಅಕ್ರಮ ಹಣ ಸೀಜ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಒಂದೇ ದಿನ 23,62,750 ರೂಪಾಯಿ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ; ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ; ಈ ಯೋಜನೆಯಲ್ಲಿ ನಿಮಗೂ ಸಹ ಹಣ ಸಿಗುತ್ತಾ?
ಚೌಡಿಪಾಳ್ಯ ಚೆಕ್ ಪೋಸ್ಟ್ ಬಳಿ ಎಸ್.ಎಫ್.ಸಿ ತಂಡದ ಅಧಿಕಾರಿಗಳು, ನಂಬರ್ ಪ್ಲೇಟ್ ಬದಲಾಯಿಸಿ ಓಮಿನಿ ಕಾರಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಣವನ್ನು ಪಂಚನಹಳ್ಳಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ನಿಂದ ಡಿ.ಎಂ.ಕರ್ಕೆ ಗ್ರಾಮಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಬ್ಯಾಂಕ್ ನ ಹಣವಾಗಿದ್ದರೇ ನಂಬರ್ ಪ್ಲೇಟ್ ಬದಲಾಯಿಸಿ ಸಾಗಿಸುತ್ತಿದ್ದುದು ಏಕೆ?, ಅಲ್ಲದೆ ಬ್ಯಾಂಕ್ ಹಣ ಸಾಗಿಸುವ ವೇಳೆ ಗನ್ ಮ್ಯಾನ್ ಅನ್ನು ಜೊತೆಯಲ್ಲಿ ಕರೆದೊಯ್ಯದಿರುವುದು ಏಕೆ? ಎಂಬ ಪ್ರಶ್ನೆ ಮೂಡಿದ್ದು, ಜಪ್ತಿ ಮಾಡಿ ಹಣದ ಮೂಲದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ; ನಿರುದ್ಯೋಗಿಗಳಿಗೆ ಗುಡ್ ನ್ಯೂಸ್; ಉಚಿತ ಸಿಸಿಟಿವಿ ಅಳವಡಿಕೆ ತರಬೇತಿಗೆ ಅರ್ಜಿ ಆಹ್ವಾನ
ಇನ್ನು ಮೂಡಿಗೆರೆ ತಾಲೂಕಿನ ಕಸ್ಕೇಬೈಲು ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3,62,750 ರೂಪಾಯಿ ಹಣವನ್ನ ವಶಕ್ಕೆ ಪಡೆಯಲಾಗಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ; ಬೆಳಗಾವಿ ನ್ಯಾಯಾಲಯದಲ್ಲಿ ಉದ್ಯೋಗ; 10th, 12th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ












