ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ಕಾರ್ಯಕರ್ತರ ಹೋರಾಟದಿಂದ ಲ್ಯಾಂಪ್ ಸಂಸ್ಥೆಯಲ್ಲಿ ಜಯ ಸಿಕ್ಕಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ನಕಲಿ ಕಲ್ಲಂಗಡಿ ಹಣ್ಣು!; ಹೀಗೆ ಪತ್ತೆ ಹಚ್ಚಿ…

ಬಿಜೆಪಿ ಕಚೇರಿಯಲ್ಲಿ ಲ್ಯಾಂಪ್ ಸಂಸ್ಥೆ ಉಪಾಧ್ಯಕ್ಷ ಯೋಗೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಲ್ಯಾಂಪ್ ಸಂಸ್ಥೆ ಹಾಗೂ ಬಿಜೆಪಿಯನ್ನು ಇನ್ನಷ್ಟು ಸದೃಢವಾಗಿ ಕಟ್ಟಬೇಕು. ಈ ಹಿಂದೆಯೂ ಲ್ಯಾಂಪ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು, ಆದರೆ ಕೆಲವರ ಸ್ವಹಿತ ಹೆಚ್ಚಾಗಿ ಪಕ್ಷದ ಕಾರ್ಯವನ್ನು ಬಿಟ್ಟರು. ಆದ್ದರಿಂದ ನಮಗೆ ಹಿನ್ನಡೆಯಾಗುತ್ತ ಬಂದಿದೆ. ಹಿಂದಿನ ತಪ್ಪು ಮರುಕಳಿಸಬಾರದು ಎಂದರು.
ಲ್ಯಾಂಪ್ ಸಹಕಾರ ಮಹಾಮಂಡಲದ ಉಪಾಧ್ಯಕ್ಷ ಮಂಜುನಾಥ್ ನಾಯ್ಕ ಮಾತನಾಡಿ, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಅವಕಾಶಗಳು ಇದೆ. ತಾಳ್ಮೆ, ಪಕ್ಷದ ನಿಷ್ಠೆ ಎಲ್ಲವನ್ನೂ ತಂದುಕೊಡುತ್ತದೆ. ಲ್ಯಾಂಪ್ ನಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಉತ್ತಮವಾಗಿ ಬಳಸಿಕೊಳ್ಳಿ ಎಂದರು.
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಲ್ಲಿ ತರಬೇತಿಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಲ್ಯಾಂಪ್ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಮುತ್ತಪ್ಪ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ಇದ್ದರೆ ಮಾತ್ರ ಅಭಿವೃದ್ಧಿ, ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಗಳು ಶೂನ್ಯ ಎಂದು ಹೇಳಿದರು.
ಬಿಜೆಪಿ ಮುಖಂಡ ಪದ್ಮನಾಭ ಮಾತನಾಡಿ, ಚುನಾವಣೆ ಫಲಿತಾಂಶ ಹೊರಬಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ 10, ಬಿಜೆಪಿ 3 ಸ್ಥಾನ ಪಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸಿದ್ದರು. ಇದನ್ನು ಸವಾಲಾಗಿ ತೆಗೆದುಕೊಂಡು ಕೈ ಬೆಂಬಲದಿಂದ ಗೆದ್ದವರನ್ನು ರಾತ್ರೋ ರಾತ್ರಿ ಮಾತನಾಡಿಸಿ, ಕಾಂಗ್ರೆಸ್ ಬೆಂಬಲದಿಂದ ಗೆದ್ದ ಎಂ.ಸಿ.ಯೋಗೇಶ್ ಅವರನ್ನು ಬಿಜೆಪಿಗೆ ಸೆಳೆದು ಉಪಾಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ವಿಶ್ವದ ಮೊದಲ CNG ಸ್ಕೂಟರ್ ಬಿಡುಗಡೆಗೆ ಸಿದ್ದ; ಮೈಲೇಜ್ ಕೇಳಿ ಶಾಕ್ ಆದ ಜನ…
ನಾನು ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಉಪಾಧ್ಯಕ್ಷನಾಗಿ ಆಯ್ಕೆಯಾಗುತ್ತಿರಲಿಲ್ಲ. ಬಿಜೆಪಿಗೆ ಬಂದ ಕಾರಣ ಅಧಿಕಾರ ಸಿಕ್ಕಿದೆ. ಕಾಂಗ್ರೆಸ್ನಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ. ಬೂತ್ ಅಧ್ಯಕ್ಷ ಮಾಡಿದ್ದರೆ ಹೊರತು ಬೇರೆ ಯಾವುದೇ ಹುದ್ದೆಯನ್ನು ಕಾಂಗ್ರೆಸ್ ನೀಡಿರಲಿಲ್ಲ ಎಂದು ನೂತನ ಉಪಾಧ್ಯಕ್ಷ ಎಂ. ಸಿ. ಯೋಗೇಶ್ ಹೇಳಿದರು.
ಇದನ್ನೂ ಓದಿ: ಹೊರಗುತ್ತಿಗೆ ನೌಕರರ ಗಮನಕ್ಕೆ!; ಸರ್ಕಾರದಿಂದ ಮಹತ್ವದ ಸುದ್ದಿ












