ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಗುಂಡಿ ತಪ್ಪಿಸಲು ಹೋದ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದಿರುವ ಘಟನೆ ಶನಿವಾರ ರಾತ್ರಿ ಬಾಳೆಹೊನ್ನೂರು – ಚಿಕ್ಕಮಗಳೂರು ಮುಖ್ಯ ರಸ್ತೆಯ ಎಲೆಕಲ್ಲು ಬಳಿ ನಡೆದಿದೆ.
ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 25,000 ದಿಂದ ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ

ಬಾಳೆಹೊನ್ನೂರು ಕಡೆಗೆ ರಸಗೊಬ್ಬರ ತುಂಬಿಕೊಂಡು ಬರುತ್ತಿದ್ದ ಲಾರಿ ಗುಂಡಿ ತಪ್ಪಿಸಲು ಹೋಗಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ; ಕೇಕ್ ಪ್ರಿಯರಿಗೆ ಬಿಗ್ ಶಾಕ್; ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ
ಇದೇ ರಸ್ತೆಯಲ್ಲಿ ಕಳೆದ ಭಾನುವಾರವೂ ತರಕಾರಿ ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿತ್ತು. ಶನಿವಾರ ರಾತ್ರಿ ಬಾಳೆಹೊನ್ನೂರು-ಶೃಂಗೇರಿ ರಸ್ತೆಯ ಸೀಗೋಡು ಮುಖ್ಯ ರಸ್ತೆ ಬಳಿಯೂ ಗುಂಡಿ ತಪ್ಪಿಸಲು ಹೋದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಈ ರಸ್ತೆಯಲ್ಲಿ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಪದೇ ಪದೇ ವಾಹನ ಅಪಘಾತ ಸಂಭವಿಸುತ್ತಿದೆ. ಅಲ್ಲದೆ ಅಪಾಯಕಾರಿ ರಸ್ತೆ ಇರುವ ಬಳಿ ಬ್ಯಾರಿಕೇಡ್ ಗಳು ಇರದೆ ಇರುವುದರಿಂದ ಅಪಘಾತ ಸಂಭವಿಸುತ್ತಿದೆ ಎಂದು ಚಾಲಕರು ದೂರಿದ್ದಾರೆ.
ಇದನ್ನೂ ಓದಿ; ಯುವತಿಯ ಕಿವಿಯೊಳಗೆ ಇಯರ್ಫೋನ್ ಸ್ಪೋಟ; ಇಯರ್ ಫೋನ್, ಏರ್ ಪೋಡ್ ಬಳಸುವವರು ಒಮ್ಮೆ ಈ ಸುದ್ದಿ ಓದಿ












