
ಆಲ್ದೂರು:(ನ್ಯೂಸ್ ಮಲ್ನಾಡ್ ವರದಿ) ಹಳೆ ದ್ವೇಷ ಇಟ್ಟುಕೊಂಡು ಮಾರಣಾಂತಿಕವಾಗಿ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹವ್ವಳ್ಳಿ ಗ್ರಾಮದಲ್ಲಿ ನಡೆದಿದೆ. ಸುಧಾಕರ್ ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಮೋಹನ್ ಮತ್ತು ಸುಧಾಕರ್ ಇಬ್ಬರೂ ಚಿಕ್ಕಮಗಳೂರು ತಾಲೂಕಿನ ಹವ್ವಳ್ಳಿ ಗ್ರಾಮದ ನಿವಾಸಿಗಳು. 2 ತಿಂಗಳ ಹಿಂದೆ ಸುಧಾಕರ್ ಎಂಬ ವ್ಯಕ್ತಿ ಮೋಹನ್ ಎಂಬುವವನ ಮೇಲೆ ಮಚ್ಚಿನಿಂದ ಹಲ್ಲೆಗೈದು, ಒಂದು ತಿಂಗಳುಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದ. ಅದೇ ಒಂದು ಹಳೆ ದ್ವೇಷ ಇಟ್ಟುಕೊಂಡು ನಿನ್ನೆ ಮೋಹನ್ ಎಂಬ ವ್ಯಕ್ತಿ ಸುಧಾಕರ್ ಎಂಬುವವನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಹಲ್ಲೆಯಲ್ಲಿ ಸುಧಾಕರ್ ಕಾಲು ಮತ್ತು ಕೈಗೆ ಗಂಭೀರ ಗಾಯವಾಗಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಸಂಭಂದಿಸಿದಂತೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













