
ಅಜ್ಜಂಪುರ: (ನ್ಯೂಸ್ ಮಲ್ನಾಡ್ ವರದಿ) ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಮಹಿಳೆಯರಿಗೆ ಹಣ ಕಟ್ಟುವಂತೆ ಕಿರುಕುಳ ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಉಚಿತ ಚಿಕಿತ್ಸೆ ಯಾವ ಯೋಜನೆ? ಚಿಕಿತ್ಸಾ ವೆಚ್ಚ ಎಷ್ಟು?

ರಾಜ್ಯದಲ್ಲಿ ಮುಂದುವರಿದ ಮೈಕ್ರೋ ಫೈನಾನ್ಸ್ ಕಿರುಕುಳ ಸರ್ಕಾರ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತಂದರು ಕೂಡ ಸಿಎಂ ಆದೇಶಕ್ಕೂ ಬಗ್ಗಲ್ಲ ಸುಗ್ರೀವಾಜ್ಞೆಗೂ ಕಿಮ್ಮತ್ತಿಲ್ಲ ಎನ್ನುವ ರೀತಿ ಮೈಕ್ರೋ ಫೈನಾನ್ಸ್ ಕಂಪನಿಯು ತನ್ನ ಅಟ್ಟಹಾಸವನ್ನು ಮುಂದುವರಿಸಿದೆ.

ಇದನ್ನೂ ಓದಿ: ಶಿಕ್ಷಕರ ಗಮನಕ್ಕೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಮಿಸ್ ಮಾಡ್ದೆ ಈ ಸುದ್ದಿ ಓದಿ
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಕಾರೇಹಳ್ಳಿ ಗ್ರಾಮದಲ್ಲಿ ಮಹಿಳೆಯರಿಗೆ ಲೋನ್ ಕಟ್ಟುವಂತೆ ಮನೆಯ ಮುಂದೆ ಬೆಳಗ್ಗೆ 7 ಗಂಟೆ ಇಂದಲೆ ಬಿ.ಎಸ್‌ಎಸ್ ಮೈಕ್ರೋ ಫೈನಾನ್ಸ್ ಬ್ರಾಂಚ್ ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿಸುದ್ದಿ ಗೃಹಲಕ್ಷ್ಮಿ ಹಣದಲ್ಲಿ ಹೆಚ್ಚಳ..!
ಗ್ರೂಪ್ ಲೋನ್ ಪಡೆದಿದ್ದ 9 ಜನ ಮಹಿಳೆಯರು ಇದುವರೆಗೂ ಒಂದೇ ಒಂದು ಕಂತು ಬಾಕಿ ಉಳಿಸಿಕೊಳ್ಳದೆ ಸಾಲ ಕಟ್ಟಿದ್ದರು ಆದರೆ ಜನವರಿ ತಿಂಗಳ 2-3 ಕಂತು ಬಾಕಿ ಉಳಿಸಿಕೊಂಡಿದ್ದು, ಅದರ ವಸೂಲಿಗೆ ಮಹಿಳೆಯರ ಮನೆಯ ಮುಂದೆ ಬೆಳಗ್ಗೆಯಿಂದಲೇ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕುಳಿತ್ತಿದ್ದಾರೆ. ಮಹಿಳೆಯರು ಕಂತು ಕಟ್ಟಲು ಸಮಯ ಕೇಳುತ್ತಿದ್ದರು ಅವರ ಮನವಿಗೂ ಸ್ಪಂದಿಸದೆ ಹಣ ಕಟ್ಟುವವರೆಗೂ ಹೋಗಲ್ಲ ಎನ್ನುತ್ತಿದ್ದ ಸಿಬ್ಬಂದಿಗೆ ಮಹಿಳೆಯರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.













