
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಕರಕುಚ್ಚಿ ಬಿ. ಕಾಲೊನಿ ಗ್ರಾಮದಲ್ಲಿ ವಿವಿಧ ದಲಿತ ಪರ ಸಂಘಟನೆಗಳಿಂದ ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಅಚರಿಸಲಾಯಿತು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಉಚಿತ ಚಿಕಿತ್ಸೆ ಯಾವ ಯೋಜನೆ? ಚಿಕಿತ್ಸಾ ವೆಚ್ಚ ಎಷ್ಟು?

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಕುಮಾರ್ ಮಾತನಾಡಿ, 1818ರ ಜ. 1ರಂದು ಸ್ವಾಭಿಮಾನಕ್ಕಾಗಿ ನಡೆದ ಈ ಯುದ್ಧದಲ್ಲಿ ಪೇಳ್ವೆಗಳ 25 ಸಾವಿರಕ್ಕೂ ಹೆಚ್ಚಿನ ಸೈನಿಕರನ್ನು ಕೇವಲ 500 ಜನ ಮಾಹರ್ ರೆಜಿಮೆಂಟ್ ಸೈನಿಕರು ಸೋಲಿಸಿದ್ದರು. ಇದರ ನೆನಪಿಗಾಗಿ ಈ ವಿಜಯೋತ್ರ ಆಚರಿಸುತ್ತಿರುವುದು ಸಂತಸದ ಸಂಗತಿ. ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಿಂದ ನಾವೆಲ್ಲರೂ ಸಮಾನತೆಯಿಂದ ಬದುಕುತ್ತಿದ್ದೇವೆ’ ಎಂದರು.

ಇದನ್ನೂ ಓದಿ: ಶಿಕ್ಷಕರ ಗಮನಕ್ಕೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಮಿಸ್ ಮಾಡ್ದೆ ಈ ಸುದ್ದಿ ಓದಿ
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್. ನಾಗರಾಜ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಸತ್ಪಪ್ರಜೆಗಳಾಗಿ ಬಾಳಬೇಕು ಎಂದರು.
ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿಸುದ್ದಿ ಗೃಹಲಕ್ಷ್ಮಿ ಹಣದಲ್ಲಿ ಹೆಚ್ಚಳ..!
ಡಾ. ದೇವಿದಾಸ್, ನಿವೃತ್ತ ಉಪನ್ಯಾಸಕ ಶಿವಬಸಪ್ಪ, ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಶ್ರೀನಿವಾಸ್, ಗೋವಿಂದಪ್ಪ, ರಮೇಶ್ ಇದ್ದರು. ಶಿಕ್ಷಕ ನಾಗೇಶ್ ಕ್ರಾಂತಿ ಗೀತೆಗಳನ್ನು ಹಾಡಿದರು.
ಇದನ್ನೂ ಓದಿ: 475 ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ ಸಂಬಳ ಎಷ್ಟು?, ಇಲ್ಲಿದೆ ಡಿಟೈಲ್ಸ್













