ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಮಲ್ಲೇನಹಳ್ಳಿ ಇರುವ ಪ್ರಸಿದ್ಧ ದೇವಿರಮ್ಮ ಬೆಟ್ಟದಲ್ಲಿ ಮಹಿಳೆಯ ಅಸ್ತಿ ಪಂಜರ ಪತ್ತೆಯಾಗಿದೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ

ದೀಪಾವಳಿ ಹಬ್ಬದ ದಿನ ಬೆಟ್ಟ ಏರಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ವರ್ಷ ಬೆಟ್ಟಕ್ಕೆ ತೆರಳಿ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ. ಇದೋಗ ದೇವಿರಮ್ಮ ಬೆಟ್ಟ ದಾರಿ ಸ್ವಚ್ಛ ವೇಳೆ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಮಹಿಳೆಯ ಅಸ್ತಿ ಪಂಜರ ಪತ್ತೆಯಾಗಿದೆ.
ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಪೊಲೀಸರು ಅಸ್ತಿಪಂಜರ ಪತ್ತೆ ಕುರಿತು ತನಿಖೆ ನಡೆಸುತ್ತಿದ್ದಾರೆ.












