ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಪ್ರಮಾಣದ ಸಾಲ ಮತ್ತು ರಿಫಂಡ್ ನೀಡುವುದಾಗಿ ನಂಬಿಸಿ 6,26,000 ರೂ. ಪಡೆದು ವಂಚಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: ರಾಜ್ಯದ SC, ST ಸಮುದಾಯದವರ ಗಮನಕ್ಕೆ; ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ

ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಯೊಬ್ಬರುಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋಗಳನ್ನು ವೀಕ್ಷಿಸುತ್ತಿರುವಾಗ ತುಂಬಾ ಕಡಿಮೆ ಬಡ್ಡಿಗೆ ಲೋನ್ ಕೊಡುವ ವಿಡಿಯೋ ಬಂದಿದೆ. ಇದನ್ನು ವೀಕ್ಷಿಸಿದ ವ್ಯಕ್ತಿಗೆ ಸೈಬರ್ ವಂಚಕರು ಕರೆಮಾಡಿ ನೀವು ಲೋನ್ ಬಗ್ಗೆ ವಿಡಿಯೋವನ್ನು ವೀಕ್ಷಿಸಿರುತ್ತೀರಿ, ನಾವು ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಲೋನ್ ಬೇಕಾದರೆ ನಾವು ಕಡಿಮೆ ಬಡ್ಡಿಗೆ ಲೋನ್ ಮಾಡಿಸಿ ಕೊಡುತ್ತೇವೆಂದು ನಂಬಿಸಿದ್ದಾರೆ.
ಎರಡು ಲೋನ್ ಆಪ್ ಗಳನ್ನು ಡೌನ್ ಲೋಡ್ ಮಾಡಿಸಿ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿಸಿಕೊಂಡು ಅದರಿಂದ ಈ ವ್ಯಕ್ತಿಗೆ 4.5 ಲಕ್ಷ ರೂ ಸಾಲವನ್ನು ಮಂಜೂರು ಮಾಡಿಸಿ, ನಂತರ ನಿಮಗೆ ಇನ್ನೂ ಹೆಚ್ಚಿನ ಸಾಲ ಬೇಕಾದರೆ 07 ಲಕ್ಷ ರೂ. ಸಾಲ ಮಂಜೂರು ಮಾಡಿಸುತ್ತೇವೆ ಎಂದು ವಿಶ್ವಾಸ ಮೂಡಿಸಿದ್ದಾರೆ.
ಇದನ್ನೂ ಓದಿ: ವಿವಿಧ ಯೋಜನೆಗೆ ಅರ್ಜಿ ಆಹ್ವಾನ; 4 ಲಕ್ಷ ಸಹಾಯಧನ
ಬಳಿಕ ನೀವು ಸಾಲ ಪಡೆದಿರುವ 4.5 ಲಕ್ಷ ರೂ ಮತ್ತು ಪ್ರೊಸೆಸಿಂಗ್ ಚಾರ್ಜಸ್ ಸೇರಿ ಒಟ್ಟು 6,26,000 ರೂ ಗಳನ್ನು ನಾವು ಹೇಳುವ ಖಾತೆಗೆ ಹಾಕಿದರೆ ನಿಮಗೆ ಏಳು ಲಕ್ಷ ರೂ ಸಾಲದ ಜೊತೆಗೆ ನೀವು ನಮಗೆ ಹಾಕುವ 6,26,000 ರೂ ವಾಪಸ್ಸು ಮಾಡಿಸುತ್ತೇವೆಂದು ನಂಬಿಸಿದ್ದಾರೆ. 6,26,000 ರೂ ಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡ ವಂಚಕರು ಯಾವುದೇ ಲೋನ್ ಆಗಲಿ ಮತ್ತು ರೀಫಂಡ್ ಆಗಲಿ ಮಾಡದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೈನುಗಾರಿಕೆಗೆ ಸಿಗಲಿದೆ ಸಹಾಯಧನ; ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ












