TERRORIST ARREST: ತೀರ್ಥಹಳ್ಳಿ ಮೂಲದ ಐಸಿಸ್‌ ಉಗ್ರ ಎನ್‌ಐಎ ಬಲೆಗೆ

ತೀರ್ಥಹಳ್ಳಿ; (ನ್ಯೂಸ್ ಮಲ್ನಾಡ್ ವರದಿ) ತೀರ್ಥಹಳ್ಳಿ ಮೂಲದ ಶಂಕಿತ ಉಗ್ರನನ್ನು ದೆಹಲಿ ಏರ್ಪೋರ್ಟ್ ನಲ್ಲಿ ಎನ್.ಐ.ಎ ಬಂಧಿಸಿದೆ.

 

ಇದನ್ನೂ ಓದಿ; ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?

2019 ರಲ್ಲಿ ತೀರ್ಥಹಳ್ಳಿ ತೊರೆದು ಬೆಂಗಳೂರು ಸೇರಿದ್ದ ಅರಾಫತ್ ಅಲಿ. ನಂತರ ಬೆಂಗಳೂರಿನಲ್ಲೇ ಇಂಜಿನಿಯರಿಂಗ್ ಸೇರಿದ್ದ. 2020 ರ ನವೆಂಬರ್ 27 ರಂದು ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಪ್ರಚೋದನೆ ನೀಡಿದ್ದ ಎಂಬ ಆರೋಪ ಈತನೆ ಮೇಲಿತ್ತು. ಐಸೀಸ್ ಉಗ್ರರೊಂದಿಗೆ ಈತನಿಗೆ ನಂಟಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈತ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ.

 

ಇದನ್ನೂ ಓದಿ; 2,000 ರೂ. ನೋಟ್ ಹಿಂಪಡೆದ rbi; ಆದಷ್ಟು ಬೇಗ ಬದಲಾಯಿಸಿ 2000 ನೋಟು; ಇನ್ನುಳಿದಿದೆ ಕೆಲವೇ ದಿನಗಳು

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿ ಅರಾಫತ್ ಅಲಿ. ಕೀನ್ಯಾದ ನೈರೋಬಿಯಿಂದ ಬರುತ್ತಿದ್ದಾಗ ದೆಹಲಿಯಲ್ಲಿ ಬಂಧನ ಮಾಡಲಾಗಿದೆ.

 

ಚಿಕ್ಕಮಗಳೂರು: ರಸ್ತೆಗಳಲ್ಲಿ ವ್ಹೀಲಿಂಗ್ ಹಾವಳಿ | ಪುಂಡರಿಗೆ ಬಿತ್ತು ದಂಡ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮೋಟಾರ್ ಸೈಕಲ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಗೇರ್ ಮರಡಿ ರಸ್ತೆಯಲ್ಲಿ ನಡೆದಿದೆ.

ಇದನ್ನೂ ಓದಿ; ರೈತರಿಗೆ ಕಾಡುತ್ತಿರುವ ಮತ್ತೊಂದು ಭೀತಿ…!; ಗೊಬ್ಬರ ಬೆಲೆ ಏರಿಕೆ ಆಗಲಿದೆಯಾ…?; ಯಾವ ಗೊಬ್ಬರಕ್ಕೆ ಸಬ್ಸಿಡಿ ಸಿಗಲಿದೆ

 

ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುತ್ತಿದ್ದ ಸುಮಾರು 22 ವರ್ಷ ವಯಸ್ಸಿನ ಯುವಕನ ವಿರುದ್ಧ ಕಲಂ 189 ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘನ ನ್ಯಾಯಾಲಯವು 5,000 ರೂಗಳನ್ನು ದಂಡ ವಿಧಿಸಿದ್ದಾರೆ.

ಹಲವು ಕಡೆ ವೈಕ್ ವ್ಹೀಲಿಂಗ್ ಹುಚ್ಚಾಟ ನಡೆಯುತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಯುವಕರ ಮೊಜು ಮೊಸ್ತಿ ಆಟವಾಗಿರಬೇಕು. ಆದರೆ ಅದು ಹುಚ್ಚಾಟವಾದರೆ ಜೀವಗಳಿಗೆ ಕುತ್ತು ತರುತ್ತದೆ ಅನ್ನೊದಕ್ಕೆ ಈ ಹಿಂದೆ ವಿವಿದ ಕಡೆ ವ್ಹೀಲಿಂಗ್ ವೇಳೆ ನಡೆದ ಕೃತ್ಯಗಳೇ ನೈಜ ಉದಾಹರಣೆ. ಅಷ್ಟೆ ಅಲ್ಲದೇ ಸೋಶಿಯಲ್ ಮೀಡಿಯದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಮೇಲೆ ಸಹ ನಿಗಾ ವಹಿಸಲಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಸಹ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ; ಭರ್ಜರಿಯಾಗಿ ಇಳಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ಇಂದಿನ ದರಪಟ್ಟಿ- 14.09.2023

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.