
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೆರೆಗೆ ಬಿದ್ದು ಮೇಲೆ ಏಳಲಾಗದೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಜಿಂಕೆಯನ್ನು ರಕ್ಷಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ನ್ಯೂಸ್; ಏನದು? ಇಲ್ಲಿದೆ ನೋಡಿ

ಜಿಂಕೆಯೊಂದು ಕೆರೆಗೆ ಬಿದ್ದಿದ್ದು, ಕೆರೆಗೆ ಬಿದ್ದ ಜಿಂಕೆಯನ್ನು ಕಂಡು ಜಿಂಕೆಯನ್ನ ಸುತ್ತುವರಿದ ನಾಯಿಗಳು ಬೊಗಳುತ್ತಿದ್ದವು. ಇದನ್ನು ಗಮನಿಸಿದ ಮರ್ಕಲ್ ಗ್ರಾಮದ ಯುವಕರು ಕೆರೆಗೆ ಇಳಿದು ಜಿಂಕೆಗೆ ಹಗ್ಗ ಕಟ್ಟಿ ಮೇಲೆ ಎಳೆದು ರಕ್ಷಿಸಿ ಕಾಡಿಗೆ ಬಿಡುವಂತೆ ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಸಿಹಿಸುದ್ದಿ; ಜನಸೇವಕ ಮೂಲಕ ಮನೆಯಿಂದಲೇ ಇ-ಖಾತೆ ಪಡೆಯಲು ಅವಕಾಶ!













