ಎನ್.ಆ‌ರ್.ಪುರ: ನದಿಯಲ್ಲಿ ಈಜಲು ಹೋಗಿ ಯುವಕ ಸಾವು: ಎರಡು ದಿನಗಳ ಬಳಿಕ ಮೃತದೇಹ ಪತ್ತೆ

ಎನ್.ಆ‌ರ್.ಪುರ: (ನ್ಯೂಸ್ ಮಲ್ನಾಡ್ ವರದಿ)ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕನ ಶವ ಎರಡು ದಿನಗಳ ಬಳಿಕ ಪತ್ತೆಯಾಗಿದೆ.


ಇದನ್ನೂ ಓದಿ: ಗೂಗಲ್ ಪೇನಲ್ಲಿ ಅದ್ಭುತವಾದ ವೈಶಿಷ್ಟ್ಯ ಪರಿಚಯ!;  ಏನದು ಗೊತ್ತಾ?


ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ಜಲಾಲ್ (25) ಸುಳಿಗೆ ಸಿಕ್ಕಿ ಭಾನುವಾರ ಸಾವನ್ನಪ್ಪಿದ್ದ. ಎರಡು ದಿನಗಳು ಕಳೆದರೂ ಯುವಕನ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ, ಮೃತದೇಹಕ್ಕಾಗಿ ಸತತವಾಗಿ ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ಹಾಗೂ ಸ್ಥಳೀಯರು ನಿರಂತರ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ, ನಿನ್ನೆ ಉಡುಪಿಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡ ಸಹ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿತ್ತು , ಈ ಸಂದರ್ಭದಲ್ಲಿ ದೇಹ ನೀರಿನಲ್ಲಿ ತೇಲಿ ಹೊಳೆಯ ಕೆಲವು ಮೀಟರ್ ದೂರದಲ್ಲಿ ಹೋಗಿ ಸಿಲುಕಿಕೊಂಡಿತ್ತು. ಸ್ಥಳೀಯರು, ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಈಶ್ವರ್ ಮಲ್ಪೆ ತಂಡದ ಸಹಕಾರದಿಂದ ದೇಹವನ್ನು ಹೊರ ತೆಗೆಯಲಾಯಿತು.


ಇದನ್ನೂ ಓದಿ: ಪೋಸ್ಟ್‌ ಆಫೀಸ್‌ ನಲ್ಲಿ ಜಾಬ್‌ ಆಫರ್; 10th ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಮೃತದೇಹ ಹೊರ ತೆಗೆಯುತ್ತಿದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.


ಇದನ್ನೂ ಓದಿ: ನಿಮ್ಮ ಬೆರಳುಗಳಲ್ಲಿ ಅಡಗಿದೆ ಈ ರಹಸ್ಯ!; ಕಿರುಬೆರಳು ಹೇಳುತ್ತೆ ನಿಮ್ಮ ವ್ಯಕ್ತಿತ್ವ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.