
ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಜೋಸೆಫ್ ಎಂಬ ವ್ಯಕ್ತಿ (35) ಪಾರ್ಶ್ವವಾಯುನಿಂದ ದೇಹದ ಒಂದು ಭಾಗ ಸ್ವಾದಿನ ಕಳೆದುಕೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ.. ಏನಿದೆ ಇದರಲ್ಲಿ..?; ಅಲ್ಪಸಂಖ್ಯಾತರ ಕಲ್ಯಾಣ: ಹೆಚ್ಚಿನ ಘೋಷಣೆಗಳು – ಇಲ್ಲಿ ಹೈಲೈಟ್ಸ್

ಈ ವರ್ಷದ ಮಳೆಗಾಲದಲ್ಲಿ ಮನೆ ಕಳೆದುಕೊಂಡು ಗುಡ್ಡೆಟ್ಟಿಯಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೆ ವಾಸಿಸುತ್ತಿದ್ದರು. ಬೆಳಗ್ಗೆ ಕೆಲಸಕ್ಕೆ ಹೋಗಲು ಇನ್ನೂ ಯಾಕೆ ಬರಲಿಲ್ಲ ಎಂದು ಮಾಲೀಕರು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.

ಈಗ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯ ಐ.ಸಿ.ಯು ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ 3 ಲಕ್ಷ ವೆಚ್ಚವಾಗಲಿದೆ. ಹೀಗಾಗಿ ಹೃದಯವಂತ ದಾನಿಗಳ ನೆರವು ಬೇಕಾಗಿದೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2025-26: SC/ST ಸಮುದಾಯಗಳಿಗೆ ಸಿದ್ದರಾಮಯ್ಯ ಗಿಫ್ಟ್
ಸಹಾಯ ಮಾಡಲು ಇಚ್ಚಿಸುವವರು ಈ ಕೆಳಕಂಡ ನಂಬರ್ ಗೆ ನೇರವಾಗಲು ಕೋರಿದ್ದಾರೆ.
9535027480
(ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಸೌರ ಪಂಪ್ ಯೋಜನೆಗೆ 1 ಲಕ್ಷ ಸಹಾಯಧನ; ಸಂಪೂರ್ಣ ಮಾಹಿತಿ ಇಲ್ಲಿದೆ













