ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ತಾಳು ಬಳಿ ಸಮೃದ್ಧವಾಗಿ ಕೂಡಿದ್ದ ಗುಡ್ಡದ ಕಾಡಲ್ಲಿ ಅರಣ್ಯ ಇಲಾಖೆ ಯಂತ್ರ ಬಳಸಿ ಹೊಂಡ ತೋಡಿ ಹಣ್ಣಿನ ಗಿಡಗಳನ್ನು ನೆಡಲು ಮುಂದಾಗಿದೆ ಎಂದು ಆರೋಪಿಸಿ ಹಾಗಲಗಂಚಿ ಹಾಗೂ ಹುಲ್ತಾಳು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಕರ್ನಾಟಕ ಜನಶಕ್ತಿ ಜಿಲ್ಲಾ ಘಟಕದ ಅಧ್ಯಕ್ಷೆ ರಾಧಾ ಹಾಗಲಗಂಚಿ ಮಾತನಾಡಿ, ಮಲೆನಾಡಿನ ಕಾಡಿನಲ್ಲಿ ನೈಸರ್ಗಿಕವಾಗಿ ಮರ-ಗಿಡಗಳು ಬೆಳೆದಿವೆ. ಇದರೊಳಗೆ ಹಣ್ಣಿನ ಗಿಡ ನೆಡುವ ಮೂಲಕ ಕೃತಕ ಅರಣ್ಯ ಸೃಷ್ಟಿಗೆ ಯತ್ನಿಸಲಾಗುತ್ತಿದೆ. ಅದರ ಅವಶ್ಯಕತೆ ಇಲ್ಲ ಎಂದರು.

ಅದರಲ್ಲೂ ಜೆಸಿಬಿ ಬಳಸಿ ಆಳದ ಗುಂಡಿಗಳನ್ನು ತೆಗೆಯಲಾಗುತ್ತಿದೆ. ಹೀಗೆ ಮಾಡುವುದರಿಂದ ಪರಿಸರದಲ್ಲಿನ ಔಷಧೀಯ ಸಸ್ಯಗಳು, ಮೇಲ್ಪದರದಲ್ಲಿ ಇರುವ ಲಕ್ಷಾಂತರ ಸೂಕ್ಷ್ಮಾಣುಗಳು ನಾಶವಾಗುತ್ತದೆ. ಈ ಯೋಜನೆ ಮಲೆನಾಡಿಗೆ ಪೂರಕವಾಗಿಲ್ಲ. ತಕ್ಷಣ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಕಾರೆಮನೆ, ಹುಲ್ತಾಳು, ಹಾಗಲಗಂಚಿಯಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ಅನೇಕ ವರ್ಷಗಳಿಂದ ವಾಸಿಸುತ್ತಿವೆ. ಹೇರಳವಾದ ಜೀವ ವೈವಿಧ್ಯತೆ ಇರುವ ಪರಿಸರದಲ್ಲಿ ಅರಣ್ಯ ಇಲಾಖೆ ಯಾವುದೇ ಸೂಚನೆ ನೀಡದೆ ಗುಂಡಿ ತೆಗೆದು ಗಿಡ ನೆಡಲು ಆರಂಭಿಸಿರುವುದು ಗ್ರಾಮಸ್ಥರಿಗೆ ಮಾಡುತ್ತಿರುವ ಅನ್ಯಾಯ ಎಂದರು.
ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.













