ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ನಿನ್ನೆ ನಾಮಪತ್ರದ ಜೊತೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಬಡ್ಡಿಯಿಲ್ಲದೆ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ!

ಆಸ್ತಿ ವಿವರದಲ್ಲಿ ಕೋಟ ಶ್ರೀನಿವಾಸ ಪೂಜಾರಿ 21,25,910 ರೂ. ವಾರ್ಷಿಕ ವರಮಾನ, 40,64,924 ರೂ. ಸಾಲ ಹೊಂದಿದ್ದಾರೆ.

ಕೋಟ ಒಟ್ಟು 79,95,082 ರೂ. ಹಾಗೂ ಪತ್ನಿ ಶಾಂತಾ 1,62,79,027 ಮೌಲ್ಯದ ಚರ-ಸ್ಥಿರಾಸ್ತಿ ಹೊಂದಿದ್ದಾರೆ.
ಕೋಟ 90 ಸಾವಿರ ರೂ., ಪತ್ನಿ ಶಾಂತಾ 20 ಸಾವಿರ ರೂ., ಮಗಳು ಸ್ವಾತಿ 10 ಸಾವಿರ ರೂ., ಮಗ ಶಶಿಧರ್ 25 ಸಾವಿರ ರೂ., ನಗದು ಹೊಂದಿದ್ದಾರೆ.
ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆ; 8ನೇ ಕಂತಿನ ಹಣ ಈ ದಿನ ಬಿಡುಗಡೆ..!
ವಿವಿಧ ಬ್ಯಾಂಕ್ ಖಾತೆಗಳಲ್ಲಿ 8,53,047 ., ಪತ್ನಿ 52,027, ಮಗಳು ಸ್ವಾತಿ 11 ಸಾವಿರ ರೂ., ಅಂಚೆ ಖಾತೆಯಲ್ಲಿ 30 ಸಾವಿರ ರೂ., ಮಗ ಶಶಿಧರ್ 22,254 ರೂ., ಕಿರಿ ಮಗಳು ಶ್ರುತಿ 2,616 ರೂ. ಇಟ್ಟಿದ್ದಾರೆ.
ಕೋಟ 63,850 ರೂ. ಮೌಲ್ಯದ, ಪತ್ನಿ 9,57,000 ಮೌಲ್ಯದ, ಸ್ವಾತಿ 3.19 ಲಕ್ಷ ಮೌಲ್ಯದ, ಶಶಿಧರ್ 63,850 ರೂ. ಮೌಲ್ಯದ, ಶ್ರುತಿ 63,850 ರೂ.ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.
ಇದನ್ನೂ ಓದಿ; ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
ಕೋಟ 1.5 ಲಕ್ಷ ರೂ. ಮೌಲ್ಯದ ಆಲ್ಟೋ ಕಾರು, 22 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು, ಮಗ 16.5 ಲಕ್ಷ ರೂ. ಮೌಲ್ಯದ ಹೋಂಡಾ ಸಿಟಿ ಕಾರು ಹೊಂದಿದ್ದಾರೆ.
ಮಗಳು ಸ್ವಾತಿ ಬಳಿ 3.70 ಲಕ್ಷ ರೂ., ಶ್ರುತಿ ಬಳಿ 66,466 ರೂ. ಮೌಲ್ಯದ ಚರಾಸ್ತಿ, ಮಗ ಶಶಿಧರ್ ಬಳಿ 47,59,935 ಮೌಲ್ಯದ ಚರ-ಸ್ಥಿರಾಸ್ತಿ ಇದೆ.
ಪತ್ನಿ ಶಾಂತಾ 35,43,757 ರೂ. ಹಾಗೂ ಮಗ ಶಶಿಧರ್ 28,35,964 ರೂ. ಸಾಲ ಪಡೆದಿದ್ದಾರೆ.
ಕೊಟ್ಟಿಗೆಹಾರ: ದಾಖಲೆ ತೋರಿಸಿದರೂ ಹಣ ವಶಕ್ಕೆ ಪಡೆದ ಅಧಿಕಾರಿಗಳು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿದ್ದು, ಈ ಬೆನ್ನಲ್ಲೇ ದೇವತಾ ಕಾರ್ಯಕ್ಕೆ ಹಣ ಕೊಂಡೊಯ್ಯುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ.
ಇದನ್ನೂ ಓದಿ; ಜನಸಾಮಾನ್ಯರಿಗೆ ಗುಡ್ ನ್ಯೂಸ್; ಗಗನಕ್ಕೇರಿದ್ದ ಅಕ್ಕಿ ದರ ಇಳಿಕೆ
ಇದನ್ನೂ ಓದಿ; ಯಾವುದೇ ಪರೀಕ್ಷೆ ಇಲ್ಲದೇ ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ ಉದ್ಯೋಗ; 47 ಹುದ್ದೆಗೆ ಅರ್ಜಿ ಆಹ್ವಾನ
ನೀತಿ ಸಂಹಿತೆ ಜಾರಿಯಲ್ಲಿದ್ದು, ತಾಲೂಕಿನ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಈ ನಿಯಮವೇ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಚುನಾವಣಾ ಅಧಿಕಾರಿಗಳ ಧೋರಣೆಯಿಂದ ಸಾರ್ವಜನಿಕರು ಪರದಾಟ ಅನುಭವಿಸುವಂತಾಗಿದೆ.













