ಕಳಸ: ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವಕರು ನೀರುಪಾಲು

ಕಳಸ: (ನ್ಯೂಸ್ ಮಲ್ನಾಡ್ ವರದಿ)  ಪ್ರವಾಸಕ್ಕೆ ಬಂದಿದ್ದ 12 ಜನ ಯುವಕರಲ್ಲಿ ಇಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ವಶಿಷ್ಟಾಶ್ರಮದ ತೂಗುಸೇತುವೆ ಬಳಿ ನಡೆದಿದೆ. ರಾಜಸ್ತಾನ ಮೂಲದ ಜಗದೀಶ್(33) ಮತ್ತು ಚೋಟಾ ಸಿಂಗ್(28) ಮೃತ ದುರ್ದೈವಿಗಳು.


ನ್ನೂ ಓದಿ: ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯ!; ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ


ಹೋಳಿ ರಜೆ ಕಾರಣಕ್ಕೆ 2 ಕಾರಿನಲ್ಲಿ ಶನಿವಾರ ಕಳಸಕ್ಕೆ ಬಂದಿದ್ದ 12 ಯುವಕರು ಕಳಸ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಡ್ಡಾಡಿದರು. ಬೆಂಗಳೂರಿಗೆ ಭಾನುವಾರ ಬೆಳಿಗ್ಗೆ ಮರಳುವ ಮೊದಲು ವಶಿಷ್ಟಾಶ್ರಮದ ತೂಗುಸೇತುವೆ ನೋಡಲು ಹೋಗಿದ್ದಾರೆ. 10 ಗೆಳೆಯರು ತೂಗುಸೇತುವೆ ನೋಡಲು ಹೋದಾಗ ಇಬ್ಬರು ಯುವಕರು ನೀರಿನಲ್ಲಿ ಈಜಾಡಲು ಇಳಿದಿದ್ದಾರೆ. ಈಜು ಬಾರದ ಇಬ್ಬರೂ ನೀರಿಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.


ನ್ನೂ ಓದಿ: ಗ್ರಾಮೀಣ ಪ್ರದೇಶಗಳಿಗೆ ಇ-ಖಾತಾಕ್ಕೆ ಹೊಸ ನಿರ್ಧಾರ!; ಏನದು? ಇಲ್ಲಿದೆ ನೋಡಿ


ಇಬ್ಬರ ಮೃತದೇಹವನ್ನೂ ನೀರಿನಿಂದ ಮೇಲೆತ್ತಿದ್ದು, ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನ್ನೂ ಓದಿ: ರಾಜ್ಯದಲ್ಲಿ ಪೂರ್ವ ಮುಂಗಾರಿನ ಆರ್ಭಟ!; ಯಾವ್ಯಾವ ಜಿಲ್ಲೆಗಳಿಗೆ ಮಳೆ ಅಲರ್ಟ್?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.