ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಫಿ ತೋಟಕ್ಕೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ನಡೆದಿದೆ.
ಇದನ್ನೂ ಓದಿ; ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ | 09-09-2023

ಕೊಟ್ಟಿಗೆಹಾರದಿಂದ ಬಾಳೂರಿಗೆ ತೆರಳುತ್ತಿದ್ದ ಕಾರು. ಚಾಲಕನ ನಿಯಂತ್ರಣ ತಪ್ಪಿ ಬಾಳೂರಿನ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಅಜ್ಜಿ ಕುಡಿಗೆ ತೋಟಕ್ಕೆ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-09.09.2023
ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Bagar Hukum: ಬಗರ್ ಹುಕುಂ ಸಾಗುವಳಿದಾರರಿಗೆ ಭರ್ಜರಿ ಗುಡ್ ನ್ಯೂಸ್ | ಹಕ್ಕುಪತ್ರ ವಿತರಣೆಗೆ ಮಹತ್ವದ ಕ್ರಮ
Bagar Hukum: ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸಾಗುವಳಿದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ನಿಜವಾದ ಬಗರ್ ಹುಕುಂ (Bagar Hukum:) ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಮೂರು ತಿಂಗಳಿಗೆ ಕ್ಷೇತ್ರ ಭೇಟಿ:
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫಾರಂ 57 ವಿಲೇವಾರಿ ಮಾಡಲು ತಹಶೀಲ್ದಾರರಿಗೆ ಹೊಸ ಆಪ್ ನೀಡಲಾಗುವುದು. ಇದರಲ್ಲಿ ಡಾಟಾ ಅಪ್‌ಲೋಡ್ ಮಾಡಿದಾಗ ಅದು ಸರ್ಕಾರಿ ಅಥವಾ ಅರಣ್ಯ ಭೂಮಿ ಎಂದು ಗೊತ್ತಾಗುತ್ತದೆ. 15 ವರ್ಷದ ಸ್ಯಾಟಲೈಟ್ ಇಮೇಜ್ ಸಿಗಲಿದೆ. ಗ್ರಾಮ ಲೆಕ್ಕಿಗರು ಪ್ರತಿ ಮೂರು ತಿಂಗಳಿಗೆ ಕ್ಷೇತ್ರ ಭೇಟಿ ನೀಡಿ ಒತ್ತುವರಿ ಬಗ್ಗೆ ಪರಿವೀಕ್ಷಿಸಿ ವರದಿ ನೀಡಬೇಕು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ 97,000 ಫಾರಂ 57 ಅರ್ಜಿಗಳು ಬಂದಿದ್ದು ಇದನ್ನು ಇತ್ಯರ್ಥಗೊಳಿಸಲು ಸಮಿತಿಯ ರಚನೆ ಮಾಡಲಾಗುವುದು ಮತ್ತು ಸದರಿ ಸಮಿತಿಯು ರೈತರ ಹೆಸರಲ್ಲಿ ಭೂ ಕಬಳಿಕೆ ಆಗದಂತೆ ತಡೆದು ನಿಜವಾದ ಬಡ ರೈತರನ್ನು ಹೆಚ್ಚು ಕಛೇರಿಗೆ ಅಲೆದಾಡಿಸದೆ ಸಹಾಯ ಮಾಡಬೇಕೆಂದು ತಿಳಿಸಿದರು. ಹಾಗೂ 2019 ರಿಂದ 2022 ರ ತನಕದ ನೆರೆಸಂತ್ರಸ್ಥರ ಪುನರ್ವಸತಿ ಯೋಜನೆಯಡಿ ಶುರು ಮಾಡಿರುವ ಮನೆಗಳ ಕುರಿತು ತಹಶೀಲ್ದಾರರು ಪರಿಶೀಲಿಸಿ ನೋಟಿಸ್ ನೀಡುವ ಮೂಲಕ ಇತ್ಯರ್ಥಗೊಳಿಸಬೇಕು ಹಾಗೂ ಶಾಲೆ-ಅಂಗನವಾಡಿಗಳಲ್ಲಿ ಉಳಿದಿರುವ ಸಣ್ಣ-ಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಬೇಸತ್ತು ಸ್ವಯಂ ಬಾಳೆ ಗಿಡ ನಾಶ ಮಾಡಿದ ರೈತರು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಕಾಡಾನೆ ಹಿಂಡಿನಿಂದ ಬೇಸತ್ತ ರೈತರು, ಸ್ವತಃ ತಾವೇ ಬೆಳೆಯನ್ನು ನಾಶಪಡಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮ ಸಮೀಪದ ಹಕ್ಕಿಮಿಕ್ಕಿ ಗ್ರಾಮದಲ್ಲಿ ನಡೆದಿದೆ.













