ಅಂಬಲಿಗೋಳ ಜಲಾಶಯ ಹಿನ್ನೀರಿನಲ್ಲಿ ಗುಂಡು ತಗುಲಿದ ಹುಲಿಯ ಮೃತ ದೇಹ ಪತ್ತೆ!

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗ, ಸಾಗರ ಅರಣ್ಯ ವಿಭಾಗದ ಅಂಬಳಿಗೋಳ ವಲಯ ವ್ಯಾಪ್ತಿಯ ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ಸೋಮವಾರ ಸಂಜೆ ಹುಲಿಯ ಮೃತದೇಹ ಪತ್ತೆಯಾಗಿದ್ದು, ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.


ಇದನ್ನೂ ಓದಿ: ಗೂಗಲ್ ಪೇನಲ್ಲಿ ಅದ್ಭುತವಾದ ವೈಶಿಷ್ಟ್ಯ ಪರಿಚಯ!;  ಏನದು ಗೊತ್ತಾ?


ಹುಲಿಯು ಅಂದಾಜು 8 ರಿಂದ 10ವರ್ಷ ಗಂಡು ಹುಲಿ ಎನ್ನಲಾಗಿದೆ. ಹುಲಿಯನ್ನು ಗುಂಡು ಹೊಡೆದು ಕೊಂದು ಅಂಬಾಳಿಗೋಳ ಜಲಾಶಯದ ಹಿನ್ನೀರು ಪ್ರದೇಶಕ್ಕೆ ನೀರಿನಲ್ಲಿ ಎಸೆದು ಹೋಗಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ 50 ವರ್ಷದಲ್ಲಿ ಹುಲಿಯ ಆವಾಸಸ್ಥಾನವಾಗಿದ್ದು, ಹುಲಿಗಳು ಯಾರಿಗೂ ಕಂಡು ಬಂದಿಲ್ಲ. ಈ ಭಾಗದಲ್ಲಿ ಹುಲಿಗಳು ಇಲ್ಲದೇ ಇರುವುದು ಈಗ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ಕಂಡು ಬಂದಿರುವ ನೋಡಿದರೆ ಶೆಟ್ಟಿಹಳ್ಳಿ ಅಭಯಾರಣ್ಯ ಅಥವಾ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಉಂಬಲೇಬೈಲು, ಲಕ್ಕವಳ್ಳಿ ಅರಣ್ಯದಲ್ಲಿ ಹುಲಿಯನ್ನು ಗುಂಡು ಹಾರಿಸಿ ಕೊಂದು ಇಲ್ಲಿಗೆ ಎಸೆದು ಹೋಗಿದ್ದಾರೆ ಎನ್ನುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಪೋಸ್ಟ್‌ ಆಫೀಸ್‌ ನಲ್ಲಿ ಜಾಬ್‌ ಆಫರ್; 10th ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಗುಂಡಿನ ಗುರುತು ಪತ್ತೆ:
ಹುಲಿಯ ಮರಣೋತ್ತರ ಪರೀಕ್ಷೆ ಮಂಗಳವಾರ ನಡೆದಿದ್ದು, ಶಿವಮೊಗ್ಗ ತವರೆಕೊಪ್ಪ ಸಿಂಹ ಧಾಮಮದ ಗುತ್ತಿಗೆ ಪಶು ವೈದ್ಯ ಮತ್ತವರ ತಂಡ ಇದ್ದು, ಹುಲಿಯ ಕುತ್ತಿಗೆ, ಗಂಟಲು ಭಾಗದಲ್ಲಿ ಗುಂಡು, ಚರೆ ತಗುಲಿದ ಹೆಚ್ಚು ತೂತದ ಗುರುತುಗಳು ಪತ್ತೆಯಾಗಿವೆ.

ಕಾಡು ಹಂದಿ, ಜಿಂಕೆ ಬೇಟೆ ಆಡಲು ಬಳಸುವ ನಡ ಬಂದೂಕು ಬಳಸಿ ಚರೇ, ಮದ್ದು ಗುಂಡು ಹಾಕಿ ಬಂದೂಕಿನಿಂದ ಈ ಹುಲಿಗೆ ಹೊಡೆದು ಹಾಕಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಗುಂಡು ಪತ್ತೆ ಹಚ್ಚಲು ಲೋಹ ಶೋಧಾಕ ಉಪಕರಣ ಬಳಸಿಲ್ಲ ಎನ್ನಲಾಗಿದ್ದು, ಇದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಇನ್ನು ಪೊಲೀಸ್, ಬಾಲಿಸ್ಟಿಕ್ ತಜ್ಞರು ಕೂಡ (balistic expert) ಇರಲಿಲ್ಲ, ಗುಂಡು ಮತ್ತು ಲೋಹ ಶೋಧಕ ತಜ್ಞರು ಕೂಡ ಇರಲಿಲ್ಲ ಎನ್ನಲಾಗಿದೆ.


ಇದನ್ನೂ ಓದಿ: ನಿಮ್ಮ ಬೆರಳುಗಳಲ್ಲಿ ಅಡಗಿದೆ ಈ ರಹಸ್ಯ!; ಕಿರುಬೆರಳು ಹೇಳುತ್ತೆ ನಿಮ್ಮ ವ್ಯಕ್ತಿತ್ವ


ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರ, ಹುಲಿ ಮರಣೋತ್ತರ ಪರೀಕ್ಷೆ ಸಮಯದಲ್ಲಿ ಹುಲಿ ತಜ್ಞರು ಅಥವಾ ಹುಲಿ ವಿಜ್ಞಾನಿಗಳು ಇರಬೇಕು. ಮತ್ತು ವನ್ಯಜೀವಿ ತಜ್ಞರು ಇರಬೇಕು. ಸ್ವತಂತ್ರ ತನಿಖೆ ತಂಡ ಇರಬೇಕಿತ್ತು. ಆದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ತಜ್ಞತೆ ಇಲ್ಲದ ಏನ್.ಜಿ.ಓ ಅವರನ್ನು ಕರೆಸಿ ಬೇಕೋ ಬೇಡವು ಎನ್ನುವ ಹಾಗೆ ಸ್ಥಳ ಮಜೂರೂ ನಡೆಸಿ ಹುಲಿ ಹತ್ಯೆಯನ್ನು ಮುಚ್ಚಿಹಾಕುವ ಹುನ್ನಾರ ವ್ಯವಸ್ಥಿತವಾಗಿ ಮಾಡಿದ್ದಾರೆ ಎನ್ನಲಾಗಿದೆ.

ಕಳೆದ ವಾರ ಹಾಸನ ಅರಣ್ಯ ವಿಭಾಗದ ಹಳೇಬೀಡು ವ್ಯಾಪ್ತಿಯಲ್ಲಿ ರೇಡಿಯೋ ಕಾಲರ್ ಹಾಕಿದ್ದ ಹುಲಿಯೊಂದು ರಂಗನಾಥಪುರ ಕೆರೆಯಲ್ಲಿ ಮೃತ ದೇಹ ತೇಲುತ್ತಿತ್ತು, ಅಲ್ಲೂ ಕೂಡ ಎಲ್ಲಿಯೂ ಹುಲಿಯ ಕಾಡು ಇಲ್ಲ, ಹುಲಿಯು ಇಲ್ಲ. ಈಗ ಇದೇ ರೀತಿ ಅಂಬಳಿಗೋಳ ಜಲಾಶಯದ ಹಿನ್ನೀರಿನಲ್ಲಿ ಗುಂಡು ತಗುಲಿದ ಹುಲಿಯ ಮೃತ ದೇಹ ತೇಲುತ್ತ ಸಿಕ್ಕಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಹೀಗಾಗಿ ಈ ಕುರಿತು ಉನ್ನತ ಮಟ್ಟದ ತನಿಖೆಯನ್ನು ಕೈಕೊಂಡು ಹುಲಿಗಳ ಸಾವಿಗೆ ನ್ಯಾಯ ಒದಗಿಸುವಂತೆ ವನ್ಯಜೀವಿ ಪ್ರೇಮಿಗಳು ಸರ್ಕಾರ ಮತ್ತು ಅರಣ್ಯ ಸಚಿವರನ್ನು ಒತ್ತಾಯಿಸಿದ್ದರು. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ತನಿಖೆಗೆ ಈಶ್ವರ ಖಂಡ್ರೆ ಸೂಚನೆ:
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚನೆ ನೀಡಿದ ಅವರು, ಹುಲಿಗೆ ಗುಂಡು (ಪೆಲೆಟ್ಸ್) ಹೊಡೆದ ಗಾಯವೂ ಇರುವುದಾಗಿ ಮಾಧ್ಯಮಗಳಲ್ಲಿ ಸಚಿತ್ರ ವರದಿಗಳು ಪ್ರಕಟವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ 10 ದಿನಗಳ ಒಳಗಾಗಿ ವಾಸ್ತವ ವರದಿ ಸಲ್ಲಿಸಲು ತಿಳಿಸಿದ್ದಾರೆ.

ಹುಲಿಯ ಮೃತದೇಹ ಪತ್ತೆಯಾಗಿರುವ ಪ್ರದೇಶದಲ್ಲಿ ಯಾವತ್ತೂ ಹುಲಿಯ ದರ್ಶನವೇ ಆಗಿಲ್ಲ. ಹೀಗಾಗಿ ಬೇರೆ ಕಡೆ ಹುಲಿ ಕೊಂದು ಇಲ್ಲಿ ಹಾಕಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲು ಸೂಚಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.