
ತರಿಕೇರೆ: (ನ್ಯೂಸ್ ಮಲ್ನಾಡ್ ವರದಿ) ಶಾಲೆಯ ಸಮವಸ್ತ್ರವಿಲ್ಲವೆಂದು ಮನನೊಂದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತರಿಕೇರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಸಹ್ಯಾದ್ರಿಪುರದಲ್ಲಿ ನಡೆದಿದೆ.
ಇದನ್ನೂ ಓದಿ: PUC ಅಲ್ಲಿ 60% ಅಂಕ ಪಡೆದ ವಿದ್ಯಾರ್ಥಿಗಳ ಗಮನಕ್ಕೆ; ಮಿಸ್ ಮಾಡ್ದೆ ಈ ಸುದ್ದಿ ಓದಿ

ವಿದ್ಯಾರ್ಥಿನಿಗೆ ಯೂನಿಫಾರಂ ನೀಡಿದ್ದ ಶಾಲಾ ಶಿಕ್ಷಕರು. ಸೋಮವಾರ ದಿಂದ ಯೂನಿಫಾರಂ ಧರಿಸಿ ಬರುವಂತೆ ಸೂಚನೆ ನೀಡಿದ್ದರು. ಮನೆಗೆ ಬಂದು ಪೋಷಕರ ಬಳಿ ಯೂನಿಫಾರಂ ಕೇಳಿದ್ದು, ಎರಡು ದಿನದಲ್ಲಿ ಸಿಗುತ್ತೆ ಎಂದು ಪೋಷಕರ ಹೇಳಿದ್ದರು. ಯೂನಿಫಾರಂ ಇಲ್ಲದೆ ಶಾಲೆಗೆ ಹೋದರೆ ಶಿಕ್ಷಕರು ಹೊಡೆಯುತ್ತಾರೆ ಎಂದು ವಿದ್ಯಾರ್ಥಿನಿ ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿವಿಧ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ; ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ













