
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮನೆಗೆ ಬಂದ ನಾಗರಹಾವು ಮನೆಯಲ್ಲಿದ್ದ ಬೆಕ್ಕಿನ ಮರಿಯನ್ನ ನುಂಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ; ಬಿಪಿಎಲ್ ಕಾರ್ಡ್ ಇದ್ರೆ ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ!; ಹೇಗೆ.. ಏನು ನಿಯಮ..?

ತರುವೆ ಗ್ರಾಮದ ದೀಕ್ಷಿತ್ ಎಂಬುವರ ಮನೆಗೆ ಬಂದ ನಾಗರಹಾವು ನೇರವಾಗಿ ಮಂಚದ ಕೆಳ ಭಾಗಕ್ಕೆ ಸೇರಿ ಬೆಕ್ಕಿನ ಮರಿಯನ್ನು ನುಂಗಿ ಮುಂದೆ ಸಂಚರಿಸಲಾಗದೆ ಪರದಾಡುತ್ತಿತ್ತು. ಇದನ್ನು ಗಮನಿಸಿದ ಮನೆಯವರು ಕೂಗಾಡುತ್ತಿದ್ದಂತೆ ಪುನಃ ಮನೆಯ ಒಳಗೆ ಹೋಗಲು ಪ್ರಯತ್ನಿಸಿದೆ. ಮನೆಯವರು ಕೂಡಲೇ ಬಾಗಿಲು ಹಾಕಿದ್ದಾರೆ.


ಇದನ್ನೂ ಓದಿ; pm ಕಿಸಾನ್ ಯೋಜನೆಯ ನೋಂದಣಿ ಹೇಗೆ ಮಾಡೋದು..; ಸಿಂಪಲ್ ಸ್ಟೆಪ್ಸ್ ಇಲ್ಲಿವೆ!
ಸ್ಥಳಕ್ಕೆ ಬಂದ ಉರಗತಜ್ಞ ಸ್ನೇಕ್ ಆರೀಫ್ ಹಾವನ್ನ ಸೆರೆಹಿಡಿದು ನುಂಗಿದ್ದ ಬೆಕ್ಕಿನ ಮರಿಯನ್ನು ಕಕ್ಕಿಸಿದ್ದಾರೆ. ನಂತರ ಹಾವನ್ನ ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ; svc ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಉದ್ಯೋಗ;113 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಈಗಾಗಲೇ ಮಲೆನಾಡಿನಾದ್ಯಂತ ಕಾಡಾನೆ, ಹುಲಿ, ಚಿರತೆ ಹಾಗೂ ಕಾಡುಕೋಣದ ಹಾವಳಿ ಮಿತಿಮೀರಿದೆ. ಬಿಸಿಲಿನ ತಾಪಕ್ಕೆ ಭೂಮಿಯ ಒಳಭಾಗದಲ್ಲೂ ಬಿಸಿ ಹೆಚ್ಚಾಗಿ ಅರಣ್ಯದಲ್ಲಿ ಸಮರ್ಪಕವಾಗಿ ಕುಡಿಯಲು ನೀರು ಹಾಗೂ ಆಹಾರ ಸಿಗದ ಕಾರಣ ನಾಗರಹಾವು ಸೇರಿದಂತೆ ಕಾಳಿಂಗ ಸರ್ಪಗಳು ಗ್ರಾಮಗಳತ್ತ ಬರುತ್ತಿವೆ. ಶೀಘ್ರವೇ ಮಳೆಯಾಗದಿದ್ದರೆ ಮತ್ತಷ್ಟು ಕಾಡುಪ್ರಾಣಿಗಳ ಹಾವಳಿ ಹೆಚ್ಚಾದರೂ ಆಶ್ಚರ್ಯವಿಲ್ಲ. (ವರದಿ- ತನು ಕೊಟ್ಟಿಗೆಹಾರ)
ಕಡೂರು: ಕಾರು-ಬೈಕ್ ನಡುವೆ ಭೀಕರ ಅಪಘಾತ: ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಸಾವು
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಅಂಡರ್ ಪಾಸ್ ನಲ್ಲಿ ನಡೆದಿದೆ. ಮಲ್ಲಿಕಾರ್ಜುನ್ (44) ಸ್ಥಳದಲ್ಲೇ ಮೃತಪಟ್ಟ ಹೆಡ್ ಕಾನ್ಸ್ ಟೇಬಲ್.
ಕಡೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ್, ಪ್ರಕರಣವೊಂದರ ಸ್ಥಳ ಮಹಜರ್ ಗೆ ಅಂಚೆಚೋಮನಹಳ್ಳಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದ್ದು, ಡಿಕ್ಕಿಯಾದ ರಭಸಕ್ಕೆ ಮಲ್ಲಿಕಾರ್ಜುನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.













