ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ವಶಕ್ಕೆ ಪಡೆದ ಶೃಂಗೇರಿ ಪೊಲೀಸ್

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.


ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ


ನಿನ್ನೆ ರಾತ್ರಿ ಕಿರಕೋಡು ಸಮೀಪ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಶೃಂಗೇರಿ PSI ನೇತೃತ್ವದಲ್ಲಿ ದಾಳಿ ನಡೆಸಿ ಪಿಕ್‌ ಅಪ್‌ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಅಕ್ರಮ ಮರಳು ಸಾಗಾಟ ಮಾಡುವ ವಾಹನಗಳ ಮುಂಭಾಗ ಮಾತ್ರ ನಂಬರ್ ಪ್ಲೇಟ್ ಹೊಂದಿದ್ದು, ಹಿಂಭಾಗ ನಂಬರ್‌ ಪ್ಲೇಟ್‌ ಇಲ್ಲದೆ ಮರಳು ಸಾಗಾಟದ ಧಂದೆಗೆ ಇಳಿಯುತ್ತಿದ್ದಾರೆ. ಅತ್ಯಂತ ವೇಗವಾಗಿ ವಾಹನವನ್ನು ಚಲಾಯಿಸುವುದರಿಂದ ಕೆಲವು ರಸ್ತೆಗಳಲ್ಲಿ ರಾತ್ರಿ ಸಮಯದ ವೇಳೆ ವಾಹನದಲ್ಲಿ ಚಲಿಸಲು ಭಯದ ವಾತಾವರಣ ಇದೆ.


ಇದನ್ನೂ ಓದಿ: ಜಮೀನು ಸರ್ವೆಯಲ್ಲಿ ಬದಲಾವಣೆ;ಇನ್ಮುಂದೆ 10 ನಿಮಿಷದಲ್ಲಿ ಮುಗಿಯಲಿದೆ ಲ್ಯಾಂಡ್ ಸರ್ವೆ; ಈ ಕುರಿತು ಕಂದಾಯ ಸಚಿವ ಹೇಳಿದ್ದೇನು?


ಸದ್ಯ ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅವರ ಮುಂದಿನ ಕ್ರಮ ಏನೆಂಬುದು ತಿಳಿಯಬೇಕಿದೆ.


ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.