
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಂಚೆ ಕಚೇರಿಯಲ್ಲಿ ಒಂದೇ ಸೂರು ನೂರು ಸೇವೆ ಅಡಿಯಲ್ಲಿ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ; ಐಒಸಿಎಲ್ ನಲ್ಲಿ ಉದ್ಯೋಗಾವಕಾಶ; 1720 ಹುದ್ದೆಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಕುರಿತು ಇಲ್ಲಿದೆ ಮಾಹಿತಿ

ಪ್ರಸ್ತಾವಿಕವಾಗಿ ಭಾಷಣ ಮಾಡಿದ ಎನ್ ಕುಮಾರ್ ರವರು ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಉಳಿತಾಯ ಯೋಜನೆಗಳು, ಇನೂರೆನ್ಸ್, ಆಧಾರ್ ತಿದ್ದುಪಡಿ ಮತ್ತಿತರ ಯೋಜನೆಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಇದನ್ನೂ ಓದಿ; ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ- 21.10.223
ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾಕ್ಟರ್ ಬಿ ಆರ್ ಗಂಗಾಧರಪ್ಪ ಇವರು. ಅಂಚೆ ಇಲಾಖೆಯು ಸರ್ಕಾರಿ ವ್ಯವಸ್ಥೆ ಅಡಿಯಲ್ಲಿ ಬರುವ ಇಲಾಖೆಯಾಗಿದ್ದು. ಈ ಇಲಾಖೆಯಲ್ಲಿ ಸಾರ್ವಜನಿಕ ಸರಕು ಸೇವೆಗಳು ಮತ್ತು ಉಳಿತಾಯ ಯೋಜನೆಗಳು ಮತ್ತು ಪತ್ರ ವ್ಯವಹಾರಗಳನ್ನು ಮಾಡಬಹುದಾಗಿರುತ್ತದೆ. ಇಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿರುತ್ತದೆ ಸಾರ್ವಜನಿಕರು ನಿಶ್ಚಿಂತೆಯಾಗಿ ತಮ್ಮ ಸೇವೆಗಳನ್ನ ಇಲ್ಲಿ ತೊಡಗಿಸಬಹುದಾಗಿರುತ್ತದೆ. ಇಲಾಖೆಯ ನೌಕರರು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಸೇವೆಯಲ್ಲಿ ತೊಡಗಿರುತ್ತಾರೆ ಸರ್ಕಾರದ ಸೇವೆಗಳಾದ ಆಧಾರ್, ಪಾನ್ ಕಾರ್ಡ್, ಬ್ಯಾಂಕ್ ಸೌಲಭ್ಯದ ಚೆಕ್ ಪುಸ್ತಕಗಳು ಮತ್ತಿತರ ಯಾವುದೇ ಸೌಲಭ್ಯಗಳನ್ನ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಮೇಶ್ ರವರು, ಅಂಚೆ ಕಚೇರಿಯು ಒಂದು ಸೂರು ನೂರು ಸೇವೆ ನುಡಿಯಂತೆ ಅಂಚೆ ಇಲಾಖೆಯು ಈ ದಿನ ಜನ ಸಂಪರ್ಕ ಸೇವೆಯನ್ನ ಹಮ್ಮಿಕೊಂಡಿದ್ದು ಸಾರ್ವಜನಿಕರು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ತಮ್ಮ ತಮ್ಮ ಆಧಾರ್ ಕಾರ್ಡುಗಳ ತಿದ್ದುಪಡಿ. ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲಾ ಅಂಚೆ ಕಚೇರಿಯ ಅಧೀಕ್ಷಕರಾದ ರಮೇಶ್ ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ರಮೇಶ್ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಬಿಆರ್ ಗಂಗಾಧರಪ್ಪ ಪದವೀಧರ ಮುಖ್ಯೋಪಾಧ್ಯಾಯರು ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೆಣಸೆ. ಪ್ರವೀಣ್ ಪೂಜಾರಿ ಅಧ್ಯಕ್ಷರು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ. ಎಂ ಕುಮಾರ್ ಅಂಚೆ ನಿರೀಕ್ಷಕರು ಕೊಪ್ಪ ಶೃಂಗೇರಿ ಅಂಚೆಪಾಲಕರಾದ ಶ್ರೀಮತಿ ಸೋಮನಾ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ವಿಫಲ- ಸುಧಾಕರ ಶೆಟ್ಟಿ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ಸರ್ಕಾರ ನೀಡಿದ್ದ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಜೆಡಿಎಸ್ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಟೀಕಿಸಿದರು.
ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಮಾಡುವಂತೆ ಒತ್ತಾಯ:
ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದಲ್ಲಿ 2.13 ಕೋಟಿ ಮಹಿಳೆಯರು ನೋಂದಣಿಯಾಗಿದ್ದಾರೆ. ಮೊದಲ ಕಂತಿನಲ್ಲಿ 1 ಕೋಟಿ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ನೀಡಲಾಗಿದೆ. ಉಳಿದವರಿಗೆ ಬ್ಯಾಂಕ್ ಖಾತೆಗೆ ಜಮೆ ಮಾಡಿಲ್ಲ. 2 ನೇ ಕಂತಿನಲ್ಲಿ 80 ಲಕ್ಷ ಮಹಿಳೆಯರಿಗೆ ಮಾತ್ರ ಹಣ ಜಮೆಯಾಗಿದೆ. ಕೂಡಲೇ ಸರ್ಕಾರ ಸಮರ್ಪಕವಾಗಿ ಹಣ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಮೂರು ಸಾವಿರ ಹಾಗೂ ಡಿಪ್ಲೊಮಾ ಮುಗಿಸಿದ ವಿದ್ಯಾರ್ಥಿಗಳಿಗೆ 1500 ರೂ. ಪ್ರತಿ ತಿಂಗಳು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯೋಜನೆ ಜಾರಿಗೊಳಿಸಿಲ್ಲ. ಇದರಿಂದ ವಿದ್ಯಾವಂತ ನಿರುದ್ಯೋಗಿಗಳು, ಹತಾಶರಾಗಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಗ್ರಾಮೀಣ ಪ್ರದೇಶದ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಖಾಸಗಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಈಗ ನಾವು ಐದು ಕೆ.ಜಿ. ಅಕ್ಕಿ ನೀಡುತ್ತೇವೆ, ಕೇಂದ್ರ ಸರ್ಕಾರ ಐದು ಕೆ.ಜಿ. ಅಕ್ಕಿ ನೀಡಲಿದೆ. ನಂತರ ಅಕ್ಕಿಯ ಬದಲು ಹಣ ಪಡಿತರ ಚೀಟಿದಾರರ ಖಾತೆಗೆ ಹಾಕುವುದಾಗಿ ಹೇಳಿದರು. ಮೊದಲ ತಿಂಗಳಲ್ಲಿ ಹಣ ಜಮೆ ಮಾಡಲಾಗಿದ್ದು, ಎರಡು ತಿಂಗಳಿಂದ ಹಣ ಜಮೆಯಾಗಿಲ್ಲ ಎಂದು ದೂರಿದರು.













