ಶೃಂಗೇರಿ: ಕರ್ತವ್ಯ ಲೋಪ ಹಿನ್ನೆಲೆ ಮರ್ಕಲ್ ಗ್ರಾಮ ಪಂಚಾಯಿತಿ ಪಿಡಿಒ ಅಮಾನತು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಘುವೀರ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಿ ಆದೇಶಿಸಲಾಗಿದೆ.


ನ್ನೂ ಓದಿ: HSRP ನಂಬರ್‌ ಪ್ಲೇಟ್‌ ಅಳವಡಿಕೆ ಮಾಡಿದವರಿಗೆ ಬಂತು ಮತ್ತೊಂದು ಸುದ್ದಿ; RC, ವಿಮೆ ಕುರಿತು ಬಿಗ್‌ ಅಪ್ಡೇಟ್


ಪಿಡಿಒ ಹಾಗೂ ಅಧ್ಯಕ್ಷರ ಮೇಲೆ ಹಲವು ಆರೋಪಗಳನ್ನು ಮಾಡಲಾಗಿದ್ದು, ಈ ಕುರಿತು ಶೃಂಗೇರಿ ಕಾರ್ಯ ನಿರ್ವಹಣಾಧಿಕಾರಿ ಸುದೀಪ್ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು, ಅದರಂತೆ ಆರೋಪಗಳು ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡುಬಂದಿದ್ದು ಪಿಡಿಒ ಅವರನ್ನು ಸೇವೆಯಿಂದ ವಜಾಗೊಳಿಸಿ ಚಿಕ್ಕಮಗಳೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.

ತನಿಖೆಗೊಳಪಟ್ಟ ಆರೋಪಗಳು:
1. ಗ್ರಾಮ ಪಂಚಾಯಿತಿ ಮಟ್ಟದ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯ ಅನುಮೋದನೆಗಾಗಿ ನಿಗಧಿತ ಕಾಲಮಿತಿಯೊಳಗೆ ಗ್ರಾಮ ಸಭೆಯನ್ನು ನಡೆಸದೇ ಕರ್ತವ್ಯ ಲೋಪ ಎಸಗಿರುವುದು.

2. 2024-25ರ ಸಾಲಿನ ಮೇ ಮಾಹೆಯಲ್ಲಿ 3964 ಮಾನವ ದಿನ ಗುರಿ ನಿಗದಿಪಡಿಸಿದ್ದು ಅದರಲ್ಲಿ 1535 ಮಾನವ ದಿನ ಗುರಿಯನ್ನು ಹಾಗೂ ಜೂನ್ ಮಾಹೆಯಲ್ಲಿ 6072 ಮಾನವ ದಿನ ಗುರಿ ನಿಗದಿಪಡಿಸಿದ್ದು ಅದರಲ್ಲಿ, 2341ಮಾನವ ದಿನಗಳ ಗುರಿಯನ್ನು ಬಾಕಿ ಉಳಿಸಿಕೊಂಡಿದ್ದು ನಿಗಧಿಪಡಿಸಿರುವ ಗುರಿಯನ್ನು ಸಾಧಿಸದೇ ಕರ್ತವ್ಯಲೋಪವೆಸಗಿರುವ ಕುರಿತು.


ನ್ನೂ ಓದಿ: ಬಿಜೆಪಿಯಿಂದ 6 ವರ್ಷ ಕಾಲ ಬಸನಗೌಡ ಪಾಟೀಲ್ ಉಚ್ಚಾಟನೆ!


3. ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಈ ಕೆಳಗಿನ ಕರ್ತವ್ಯ ಲೋಪ:

1. ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಕರ್ ಹೆಸರಿಗೆ ಹಣ ಪಾವತಿಸಿಕೊಂಡಿರುವುದು.

2. ಗ್ರಾಮ ಪಂಚಾಯಿತಿಯ ವಾಹನ ದುರಸ್ತಿಯನ್ನು ಆರ್.ಟಿ.ಓ ಅಧಿಕಾರಿಗಳ ಅನುಮತಿ ಪಡೆಯದೇ ದುರಸ್ತಿ ಮಾಡಿ ಹಣದುರುಪಯೋಗ ಪಡಿಸಿಕೊಂಡಿರುವ ಕುರಿತು.

3. ಚುನಾವಣಾ ಅವಧಿಯಲ್ಲಿ ಸರ್ಕಾರದಿಂದ ಬಂದ ಮತಗಟ್ಟೆ ವೆಚ್ಚ ಹಣವನ್ನು ಗ್ರಾಮ ಪಂಚಾಯಿತಿ ಖಾತೆಗೆ ವರ್ಗಾಯಿಸದೇ ಸ್ವಂತಕ್ಕೆ ಬಳಸಿಕೊಂಡಿರುವ ಕುರಿತು.

4. 15ನೇ ಹಣಕಾಸಿನಲ್ಲಿ ಕಸ ವಿಲೇವಾರಿ ಹೆಸರಿನಲ್ಲಿ ಎನ್.ಎಂ.ಆರ್ ಮೂಲಕ ಹಣ ದುರ್ಬಳಕೆ ಮಾಡಿಕೊಂಡಿರುವುದು.

5. ನಿಯಮಬಾಹಿರವಾಗಿ ಗ್ರಾಮ ಪಂಚಾಯಿತಿ ನೌಕರರ ಹೆಸರಲ್ಲಿ ನೌಕರರಿಗೆ ಪ್ರಯಾಣ ಭತ್ಯೆ ನೀಡಿರುವ ಕುರಿತು.

6. 15ನೇ ಹಣಕಾಸು ಯೋಜನೆಯ ಕಾಮಗಾರಿಗಳಲ್ಲಿ ತೆರಿಗೆ ಕಟಾವಣೆ ಮಾಡದೇ ಇರುವುದು.

7. 15ನೇ ಹಣಾಕಾಸು ಯೋಜನೆಯ ಕಾಮಗಾರಿಗಳಿಗೆ ನಿಗಧಿಪಡಿಸಿರುವ ಮೊತ್ತಕ್ಕಿಂತ ಹೆಚ್ಚುವರಿ ಹಣ ಪಾವತಿ ಮಾಡಿರುವುದು

8. ಶೃಂಗೇರಿಯ ಖಾಸಗಿ ಎಲೆಕ್ಟ್ರಿಕಲ್ ಗೆ ನಿಯಮಬಾಹಿರವಾಗಿ 81,851/- ಮೊತ್ತ ಪಾವತಿಯಾಗಿರುವ ಬಗ್ಗೆ,

9. ಎನ್.ಎಂ.ಆರ್ ಆಧರಿಸಿ ಗ್ರಾಮ ಪಂಚಾಯಿತಿ 15ನೇ ಹಣಕಾಸು ಯೋಜನೆಯಡಿ ನಿಯಮಬಾಹಿರವಾಗಿ ರೂ 8027 ಪಾವತಿ ಮಾಡಿರುವುದು

ಮೇಲ್ಕಂಡಂತೆ ಹಣದುರುಪಯೋಗ/ಕರ್ತವ್ಯಲೋಪವೆಸಗಿರುವ ಕುರಿತು ಹಾಗೂ ಸದರಿ ವರದಿಗೆ ಅನುಪಾಲನಾ ವರದಿಯನ್ನು ಸಾಕಷ್ಟು ಕಾಲಾವಕಾಶವನ್ನು ನೀಡಿದರೂ ಸಹಿತ ಅನುಪಾಲನ ವರದಿಯನ್ನು ಸಲ್ಲಿಸದಿರುವ ಕುರಿತು.

ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ದಿನಾಂಕ: 30.09.2024ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮೇಲೆ ಅಗೌರವ ತೋರಿಸಿರುವರೆಂಬ ದೂರು ಕುರಿತು


ನ್ನೂ ಓದಿ: ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ವಿತರಣೆ!; ಸರ್ಕಾರದಿಂದ ಮಹತ್ವದ ನಿರ್ಧಾರ


ಗ್ರಾಮ ಪಂಚಾಯಿತಿಯ ಕೇಂದ್ರ ಕಾರ್ಯ ಸ್ಥಾನದ ವ್ಯಾಪ್ತಿಯಲ್ಲಿ ವಾಸ ಮಾಡದೆ ಕರ್ತವ್ಯಲೋಪವೆಸಗಿರುವ ಕುರಿತು.

ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯದೇ : 16.10.2024 25.10.2014 ಹಾಜರಾಗದಿರುವ ಕುರಿತು.

ಗಂಡಘಟ್ಟ ಶಾಲೆಗೆ ಕುಡಿಯುವ ನೀರಿನ ಬಾವಿ ಕಾಮಗಾರಿಯ ಬಿಲ್ ಅನ್ನು ವಿನಾಕಾರಣ ಪಾವತಿ ಮಾಡದೇ ವಿಲೇ ಇರಿಸಿರುವ ಕುರಿತು ಹಾಗೂ ಬಿಲ್ ಪಾವತಿ ಮಾಡದೇ ಇರುವುದಕ್ಕೆ ಸಕಾರಣದೊಂದಿಗೆ ವರದಿ ಸಲ್ಲಿಸದೇ ಕರ್ತವ್ಯಲೋಪವೆಸಗಿರುವ ಕುರಿತು.

ಗ್ರಾಮ ಪಂಚಾಯಿತಿಯ ಒಟ್ಟು ಮೊತ್ತದಲ್ಲಿ ಶೇ.25ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಅನುದಾನದ ವೆಚ್ಚ ಭರಿಸದೇ ಕರ್ತವ್ಯ ಲೋಪವೆಸಗಿರುವ ಕುರಿತು.

ದಿನಾಂಕ: 27.09.2024ರಂದು ಜಮಾಬಂದಿ ಕಾರ್ಯಕ್ರಮವನ್ನು ನಿಗಧಿಪಡಿಸಿದರೂ ಜಮಾಬಂಧಿ ಕಾರ್ಯಕ್ರಮವನ್ನು ಆಯೋಜಿಸದೇ ಕರ್ತವ್ಯ ಲೋಪವೆಸಗಿರುವ ಕುರಿತು.

ಈ ಎಲ್ಲಾ ಆರೋಪಿಗಳ ಪರಿಶೀಲನೆ ಮಾಡಲಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ ಕಂಡುಬಂದಿರುವುದರಿಂದ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957 ರ ನಿಯಮ 10(1) ರಡಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.

ಮಾರ್ಕಲ್ ಗ್ರಾಮ ಪಂಚಾಯಿತಿಗೆ ಚಿಕ್ಕಮಗಳೂರು ಜಿಲ್ಲೆಯ ತೇಗೂರು ಗ್ರಾಮ ಪಂಚಾಯಿತಿಯ ಪಿಡಿಒ ಆಗಿದ್ದು ಈ ಹಿಂದೆ ಕರ್ತವ್ಯ ಲೋಪದಡಿಯಲ್ಲಿ ಅಮಾನತಾಗಿದ್ದ ಲಕ್ಷ್ಮಣ್ ರನ್ನು ಅಮಾನತು ಆದೇಶ ರದ್ದುಗೊಳಿಸಿ ಮಾರ್ಕಲ್ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.