ಕಾರ್ಯಕ್ರಮದ ಕರಪತ್ರದ ಕುರಿತ ಗೊಂದಲ ವಿಚಾರ: ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸ್ಪಷ್ಟೀಕರಣ

ಕರಪತ್ರ ಮುದ್ರಣದಲ್ಲಿ ಉಂಟಾದ ಗೊಂದಲದ ಕುರಿತು ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ ಹೆಚ್ ನಟರಾಜ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಮೊದಲು ಮಾನ್ಯ ಶಾಸಕರಾದ ಟಿ ಡಿ ರಾಜೇಗೌಡರು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಮಾಡಲು ತಿಳಿಸಿದ್ದರು. ಈ ಕಾರ್ಯಕ್ರಮಕ್ಕೆ 23/4/2025 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಜಿ ಜಾರ್ಜ್ ರವರು ಭಾಗವಹಿಸುತ್ತಾರೆಂದು ತಿಳಿಸಿದ್ದರು. ಆ ಕರಪತ್ರವೂ ತಯಾರಾಗಿತ್ತು.

ನಂತರ ಮಾನ್ಯ ಶಾಸಕರು ಫೋನ್ ಕರೆ ಮಾಡಿ ಕಾರ್ಯಕ್ರಮವನ್ನು ವ್ಯತ್ಯಾಸ ಮಾಡಿ ಹೇಳಿರುತ್ತೇನೆ, ಮಾನ್ಯ ಸಚಿವರು ಹೇಳಿರುವ ಕಾರ್ಯಕ್ರಮ “ಸರ್ಕಾರದ ನಡೆ ಕಾರ್ಯಕರ್ತರ ಕಡೆಗೆ” ಇದಾಗಿರುತ್ತದೆ ಎಂದರು,

ಈ ಹೆಸರಿನಲ್ಲಿ ಕಾರ್ಯಕ್ರಮವನ್ನು ಮಾಡಿ ಎಂದು ತಿಳಿಸಿದ್ದು ಕೊಪ್ಪ, ಎನ್ ಆರ್ ಪುರ ಮುಖಂಡರನ್ನು ಕರ ಪತ್ರದಲ್ಲಿ ಹಾಕಿ ಎಂದು ತಿಳಿಸಿದ್ದರು. ಅದರಂತೆ ಪುನಃ ಬದಲಿ ಕರಪತ್ರವನ್ನು ತಯಾರು ಮಾಡಿ ಜಿಲ್ಲಾ ಅಧ್ಯಕ್ಷರಾದ ಅಂಶುಮಂತ್ ರವರ ಗಮನಕ್ಕೆ ತಂದಾಗ ಕೊಪ್ಪ, ಶೃಂಗೇರಿ, ಎನ್ ಆರ್ ಪುರ ಬ್ಲಾಕ್ ಮುಖಂಡರ ಸಭೆಯನ್ನು ಕರೆದು ಚರ್ಚಿಸಿ ಕಾರ್ಯಕ್ರಮವನ್ನು ರೂಪುರೇಷ ಮಾಡಿಕೊಳ್ಳಿ ಇದು ಕ್ಷೇತ್ರದ ಕಾರ್ಯಕ್ರಮ ಎಂದು ತಿಳಿಸಿದ್ದರು.

ಅದರಂತೆ ತುರ್ತಾಗಿ ತಾರೀಕು 17/4/2025 ಸಭೆಗೆ ಎನ್ ಆರ್ ಪುರ ಬ್ಲಾಕ್ ಅಧ್ಯಕ್ಷರಿಗೆ ತಿಳಿಸಿದಂತ ಸಂದರ್ಭದಲ್ಲಿ ಅಲ್ಲಿಂದ ಎನ್ ಆರ್ ಪುರ ದಿಂದ ಪ್ರತಿನಿಧಿಯನ್ನು ಕಳಿಸಿಕೊಟ್ಟಿರುತ್ತಾರೆ , ಕೊಪ್ಪ ಬ್ಲಾಕ್ ಅಧ್ಯಕ್ಷರಿಗೆ ಕರೆ ಮಾಡಿ ಸಭೆಗೆ ಆಹ್ವಾನಿಸಿದ್ದು ನಾನು ಬೆಂಗಳೂರಿನಲ್ಲಿ ಇದ್ದೇನೆ, ಪ್ರತಿನಿಧಿಯನ್ನು ಕಳಿಸಿಕೊಡುತ್ತೇನೆ ಎಂದು ತಿಳಿಸಿದ್ದು ಸಭೆಗೆ ಯಾರನ್ನು ಸಹ ಕಳಿಸಿ ಕೊಟ್ಟಿಲ್ಲ.

17/4/2025 ಸಭೆಯಲ್ಲಿ ಕಾರ್ಯಕ್ರಮಕ್ಕೆ ತಡವಾಗಬಾರದೆಂದು 2 ದಿನ ಮುಂಚೆ ಕರಪತ್ರವನ್ನು ತಯಾರು ಮಾಡಿ ಎಲ್ಲರ ಸಮ್ಮುಖದಲ್ಲಿ ಕರಪತ್ರ ಬಂಡಲ್ ಒಡೆದಾಗ ಅಲ್ಲಿ ಸೇರಿದಂತೆ ಎಲ್ಲರಿಗೂ ವಿತರಿಸಿದ್ದಾಗ ಕೂಡಲೇ ಅದನ್ನು ಗಮನಿಸಿದಾಗ ಕರಪತ್ರ ತಯಾರಿಕರಿಂದ ವ್ಯತ್ಯಾಸವಾಗಿದ್ದು ಮಾನ್ಯ ಸಚಿವರು ಹಾಗು ಶಾಸಕರ ಭಾವ ಚಿತ್ರ ಇಲ್ಲದೆ ಇರುವುದನ್ನು ನೋಡಿ ಎಲ್ಲರಿಂದ ವಾಪಸು ಪಡೆಯಲಾಯಿತು, ಪುನಃ ಕರಪತ್ರವನ್ನು ತಯಾರು ಮಾಡಲೆಂದು ತೀರ್ಮಾನಿಸಲಾಯಿತು.

ಆ ಸಂದರ್ಭದಲ್ಲಿ ಕೊಪ್ಪ ಬ್ಲಾಕ್ ನಿಂದ ಯಾರಾದರೂ ಇದಿದ್ದರೆ ಮುಖಂಡರ ಹೆಸರೂ ಬಿಟ್ಟಿದನ್ನು ಸರಿ ಪಡಿಸಿಕೊಳ್ಳಬಹುದಿತ್ತು ಅವರುಗಳ ಸಲಹೆಯನ್ನು ಸ್ವೀಕರಿಸಬಹುದಾಗಿತ್ತು ತಮ್ಮ ಹೊಣೆಗಾರಿಕೆಯನ್ನು ಸ್ವಲ್ಪ ಯೋಚಿಸಿ ಗೊಂದಲ ನಿವಾರಣೆ ಮಾಡಿಕೊಳ್ಳಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.