ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) 2013ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿರುದ್ಧ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಜಿಬಿಎ ಗುಡ್ನ್ಯೂಸ್; ಮಧ್ಯವರ್ತಿಗಳ ಹಾವಳಿ ಸೇರಿ ಭ್ರಷ್ಟಾಚಾರಕ್ಕೂ ಬ್ರೇಕ್

ಆಲ್ದೂರಲ್ಲಿ 2013ರಲ್ಲಿ ಗಣೇಶ ವಿಸರ್ಜನೆ ಸಮಾರಂಭದಲ್ಲಿ ಮೆರವಣಿಗೆ ಮೂಲಕ ಬರುತ್ತಿದ್ದಾಗ ರಸ್ತೆಯಲ್ಲಿ ಕರ್ಪೂರ ಹಚ್ಚಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಾರೆ ಎಂದು ತುಡುಕೂರು ಮಂಜು, ರಾಕೇಶ್ ಹಳಿಯೂರ್, ಮಂಜುನಾಥ್, ಶ್ರೀಕಾಂತ್, ಲೋಕೇಶ್ ದೊಡ್ಡಮಾಗರವಳ್ಳಿ, ಮಧು ದೊಡ್ಡಮಾಗರವಳ್ಳಿ, ಕೃಷ್ಣಪ್ಪ ಗಾಳಿಗಂಡಿ ಇವರ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಅಂದು ಠಾಣೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಕೊಲೆ ಪ್ರಯತ್ನ ಮಾಡಿದ್ದನ್ನು ಪ್ರಶ್ನಿಸಿ ಅಂದಿನ ಎಸ್‌ಪಿ ಬಳಿ ದೂರನ್ನು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿತ್ತು. ಸತತ 12 ವರ್ಷಗಳ ಹೋರಾಟದ ನಂತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ಇದನ್ನೂ ಓದಿ: PM ಕಿಸಾನ್ ಯೋಜನೆಯಿಂದ 35 ಲಕ್ಷ ರೈತರ ಹೆಸರು ಡಿಲೀಟ್
ಅಂದಿನ ಆಲ್ದೂರು ಪೊಲೀಸ್ ಠಾಣೆ ಠಾಣಾಧಿಕಾರಿ ಕಬ್ಬಾಳ್ ರಾಜ್, ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣರಾಜು, ಪೋಲೀಸ್ ಸಿಬ್ಬಂದಿ ಮಂಜಪ್ಪ, ಪ್ರವೀಣ್, ನಿಂಗೇಗೌಡ, ಮಹೇಶ್, ಇಲಿಯಾಜ್, ಜಗದೀಶ್ ನಾಯ್ಕ, ಚಂದ್ರೇಗೌಡ ಇವರ ವಿರುದ್ಧ ಪ್ರತ್ಯೇಕವಾಗಿ ಏಳು ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.















