
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಇಲಾಖೆಗೆ ಆನೆ ಹಾವಳಿ ನಿಯಂತ್ರಣಕ್ಕಾಗಿ ಬೇಕಾಗಿರುವ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ಆದರೆ, ವಲಯ ಅರಣ್ಯ ವಿಭಾಗಕ್ಕೆ ಸೌಲಭ್ಯ ಒದಗಿಸದೆ ಭದ್ರಾ ವನ್ಯಜೀವಿ ವಿಭಾಗಕ್ಕೆ ಒದಗಿಸಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಆಸ್ತಿ ಮಾಲೀಕರ ಗಮನಕ್ಕೆ; ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ; ಇಲ್ಲಿದೆ ನೋಡಿ ಸುಲಭ ಹಂತ

ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ವ್ಯಾಪ್ತಿಯಲ್ಲಿನ ಕಾಡಾನೆಗಳ ಹಾವಳಿ ಬಹುತೇಕ ಗ್ರಾಮಗಳ ಗಡಿ ಭಾಗಗಳು ಭದ್ರಾ ಹಿನ್ನೀರಿನಿಂದ ಆವೃತವಾಗಿವೆ. ಈ ಗ್ರಾಮಗಳು ನರಸಿಂಹರಾಜಪುರ ಹಾಗೂ ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯಲ್ಲಿವೆ. ಈ ಭಾಗಗಳಿಗೆ ತುರ್ತಾಗಿ ಹೋಗಬೇಕಾದರೆ ರಸ್ತೆಯಲ್ಲಿ ಸುತ್ತಿ ಬಳಸಬೇಕು. ಆದ್ದರಿಂದ ಯಾಂತ್ರೀಕೃತ ದೋಣಿ ಅಗತ್ಯವಿತ್ತು. ಆದರೆ ಸರ್ಕಾರ ₹ 12 ಲಕ್ಷ ವೆಚ್ಚದ ಯಾಂತ್ರೀಕೃತ ದೋಣಿಯನ್ನು ಭದ್ರಾ ವನ್ಯಜೀವಿ ವಿಭಾಗಕ್ಕೆ ನೀಡಿದೆ. ಭದ್ರಾ ವನ್ಯಜೀವಿಯಲ್ಲಿ ಈಗಾಗಲೇ ಯಾಂತ್ರೀಕೃತ ದೋಣಿ ಇದೆ. ಆನೆಗಳು ಗ್ರಾಮಗಳ ವ್ಯಾಪ್ತಿಯಲ್ಲಿ ಬೀಡುಬಿಟ್ಟಾಗ ವನ್ಯಜೀವಿ ವಿಭಾಗದವರು ಅವುಗಳ ಹಾವಳಿ ತಡೆಗಟ್ಟಲು. ಅಭಯಾರಣ್ಯದತ್ತ ಅವುಗಳನ್ನು ಓಡಿಸಲು ಮುಂದಾಗಲೇ ಇಲ್ಲ ಎಂಬುದು ರೈತರ ಆರೋಪವಾಗಿದೆ.

ಇದನ್ನೂ ಓದಿ: ಇನ್ಮುಂದೆ ಇಂತಹವರಿಗೆ ಸಿಗಲ್ಲ ರೇಷನ್!, ಯಾಕೆ ಗೊತ್ತಾ?; ರೇಷನ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ
ಸರ್ಕಾರ ವಿರುದ್ಧ ಗ್ರಾಮಸ್ಥರ ಆಕ್ರೋಶ:
ಗ್ರಾಮಗಳ ವ್ಯಾಪ್ತಿಯಲ್ಲಿನ ತೋಟಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡುವ ಆನೆಗಳು, ಇತರೆ ಪ್ರಾಣಿಗಳು ಸಹ ಭದ್ರಾ ವನ್ಯಜೀವಿ ವಿಭಾಗಕ್ಕೆ ಸೇರಿದ್ದರೂ ಸಹ ಅವುಗಳನ್ನು ಅಭಯಾರಣ್ಯದತ್ತ ಓಡಿಸಲು ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಭದ್ರಾ ವನ್ಯಜೀವಿ ವಿಭಾಗಕ್ಕೆ ಯಾಂತ್ರೀಕೃತ ದೋಣಿಯನ್ನು ಕೊಡುವುದಾಗಿದ್ದರೆ ಅಲ್ಲಿಯೇ ಅದನ್ನು ಹಸ್ತಾಂತರಿಸಬಹುದಾಗಿತ್ತು. ವಲಯ ಅರಣ್ಯ ವಿಭಾಗಕ್ಕೆ ಯಾಂತ್ರೀಕೃತ ದೋಣಿ ಹಸ್ತಾಂತರಿಸುವುದಾಗಿ ಪ್ರಚಾರ ಮಾಡಿದ್ದ ಸರ್ಕಾರ ಅದನ್ನು ನೀಡಿದ್ದು ಮಾತ್ರ ವನ್ಯಜೀವಿ ವಿಭಾಗಕ್ಕೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಭರ್ಜರಿ ಅನುದಾನ; ಕೃಷಿ ಕ್ಷೇತ್ರದಲ್ಲಿ ಸಬ್ಸಿಡಿ ಸೇರಿದಂತೆ ಸಾಲದ ಮಿತಿ ಹೆಚ್ಚಳ!
ಪ್ರತ್ಯೇಕ ಆನೆ ಕಾರ್ಯಪಡೆ ತಂಡ ಕೊಡುವ ಭರವಸೆ ನೀಡಿದ ವಲಯ ಅರಣ್ಯಾಧಿಕಾರಿ:
ಅರಣ್ಯ ಇಲಾಖೆಗೆ ಅವಶ್ಯಕ ವಾಗಿರುವ ಎರಡು ಜೀಪ್ ಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು ಕೊಡುವ ಭರವಸೆ ನೀಡಿದ್ದಾರೆ. ಆನೆ ಕಾರ್ಯಪಡೆಯ ಪ್ರತ್ಯೇಕ ತಂಡ ಕೊಡುವ ಭರವಸೆ ನೀಡಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಗ್ರಾಮೀಣ ಭಾಗದ ಜನರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಗ್ರಾಮ ಪಂಚಾಯತಿಯಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯ
ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ ಎಂ.ಎನ್. ನಾಗೇಶ್:
ಆನೆ ದಾಳಿ ನಡೆದಾಗ ಸರ್ಕಾರ ನೀಡುವ ಭರವಸೆಯೇ ಬೇರೆ, ತದನಂತರ ನಡೆದುಕೊಳ್ಳುವುದೇ ಬೇರೆ. ಆನೆ ಹಾವಳಿ ಹೆಚ್ಚಾಗಿರುವ ಭಾಗಕ್ಕೆ ಅವಶ್ಯಕವಾಗಿರುವ ಯಾಂತ್ರೀಕೃತ ದೋಣಿ ನೀಡದಿರುವ ಸರ್ಕಾರದ ಕ್ರಮ ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಸರ್ಕಾರ ಇದೇ ಪ್ರವೃತ್ತಿ ಮುಂದುವರೆಸಿದರೆ ಹೋರಾಟ ರೂಪಿಸಲಾಗುವುದು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ಎಂ.ಎನ್. ನಾಗೇಶ್ ತಿಳಿಸಿದರು.
ಇದನ್ನೂ ಓದಿ: ಪೊಸ್ಟ್ ಆಫೀಸ್‌ನಲ್ಲಿ 500 ರೂ ಹೂಡಿಕೆ ಮಾಡಿ ಲಕ್ಷ ಪಡೆಯಿರಿ; ಯಾವ ಯೋಜನೆ? ಇಲ್ಲಿದೆ ಕಂಪ್ಲಿಟ್ ಡೀಟೈಲ್ಸ್













