ಗಮನಿಸಿ: ನಾಳೆ ಈ ಭಾಗದಲ್ಲಿ ಕರೆಂಟ್ ಇರಲ್ಲ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರು 66/33/11 ಕೆವಿ ವಿ.ವಿ ಕೇಂದ್ರದಲ್ಲಿ 2023-24 ನೇ ಸಾಲಿನ 2 ನೇ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಹಾಗೂ ಬಾಳೆಹೊನ್ನೂರು-ಶೃಂಗೇರಿ 33/11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ 30.09.2023 (ಶನಿವಾರ) ನಾಳೆ ಒಂದು ದಿನ ವಿದ್ಯುತ್ ನಿಲುಗಡೆ ಆಗಲಿದೆ.

 

ಇದನ್ನೂ ಓದಿ; psi ನೇಮಕಾತಿ ಹಗರಣ; ಅಮೃತ್ ಪೌಲ್‌ಗೆ ಹೈಕೋರ್ಟ್‌ ನಿಂದ ಜಾಮೀನು

ಶನಿವಾರದಂದು (ನಾಳೆ) ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಬಾಳೆಹೊನ್ನೂರು 66/33/11 ಕೆವಿ ವಿ.ವಿ ಕೇಂದ್ರದಲ್ಲಿ 2023-24 ನೇ ಸಾಲಿನ 2 ನೇ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಹಾಗೂ ಹಾಲಿ ಬಾಳೆಹೊನ್ನೂರು-ಶೃಂಗೇರಿ 33/11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶೃಂಗೇರಿ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

 

ಕಾಫಿನಾಡಲ್ಲಿ ರಾಜ್ಯದಲ್ಲೇ ಅತಿದೊಡ್ಡ ಭೂ ಹಗರಣ | ವಿದೇಶವಾಸಿಗೂ ಇಲ್ಲಿ ಸರ್ಕಾರಿ ಭೂಮಿ ಮಂಜೂರು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲೇ ಅತೀ ದೊಡ್ಡ ಲ್ಯಾಂಡ್ ಸ್ಕ್ಯಾಂಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಕಡೂರು ತಹಶೀಲ್ದಾರ್ ಆಗಿದ್ದ ಉಮೇಶ್ 3500 ಎಕರೆ ಅಕ್ರಮ ಮಾಡಿದ್ದರೆ, ಮೂಡಿಗೆರೆ ತಹಶೀಲ್ದಾರ್ ಆಗಿದ್ದ ರಮೇಶ್ 2200 ಎಕರೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ.

 

ಕಡೂರಿನಂತೆ ಮೂಡಿಗೆರೆಯಲ್ಲೂ ಲ್ಯಾಂಡ್ ಸ್ಕ್ಯಾಂ:
2019 ರಿಂದ 2021 ರ ಅವಧಿಯಲ್ಲಿ ಮೂಡಿಗೆರೆಯಲ್ಲಿ ರಮೇಶ್ ಎಂಬುವವರು ತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಬಾಳೂರು ಹೋಬಳಿ ವ್ಯಾಪ್ತಿಯ ಹಾದಿಯೋಣಿ ಗ್ರಾಮದ ಸರ್ವೆ ನಂ 21ರಲ್ಲಿ 7 ಮಂದಿ ಹಾಗೂ ಕೂವೆ ಗ್ರಾಮದ ಸರ್ವೆ.ನಂ 164, 180, ಕೆಳಗೂರು ಗ್ರಾಮದ ಸರ್ವೆ ನಂ 41, ಬಿಳಗಲಿ ಗ್ರಾಮದ ಸರ್ವೆ ನಂ 87 ಈ ಪ್ರದೇಶದಲ್ಲಿ ಅನೇಕ ಮಂದಿಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಡಲಾಗಿತ್ತು. ಅರ್ಜಿ ಇಲ್ಲದೇ, ಅಕ್ರಮ ಸಕ್ರಮ ಸಮಿತಿಯ ಮುಂದೆ ಮಂಡಿಸದೇ, ಹಕ್ಕುಪತ್ರ ನೀಡದೇ ನೇರವಾಗಿ ಮ್ಯುಟೇಷನ್ ಮತ್ತು ಪಹಣಿಯನ್ನು ಮಾಡಿಕೊಡಲಾಗಿತ್ತು.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು ಕೆಲವು ಅಕ್ರಮ ಖಾತೆಗಳನ್ನು ರದ್ದುಗೊಳಿಸಿದ್ದರು. ಈ ಸಂಬಂಧ ಅಕ್ರಮ ಎಸಗಿದ್ದ ತಹಸೀಲ್ದಾರ್ ಮತ್ತು ನೌಕರರ ವಿರುದ್ಧ ಪ್ರಕರಣ ದಾಖಲಿಸುವಂತೆ ಮೂಡಿಗೆರೆ ತಹಸೀಲ್ದಾರ್ ರವರಿಗೆ ಉಪವಿಭಾಗಾಧಿಕಾರಿಗಾಳಾದ ರಾಜೇಶ್ ಅವರು ನೀಡಿದ ನಿರ್ದೇಶನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ತಹಸಿಲ್ದಾರ್ ತಿಪ್ಪೇಸ್ವಾಮಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಗಿರೀಶ್ ಹಾಗೂ ನೇತ್ರ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂದಿಸಿದ್ದರು. ಗ್ರಾಮ ಲೆಕ್ಕಿಗ ಗಿರೀಶ್ ಈ ಹಿಂದೆಯೂ ಒಮ್ಮೆ ಅಕ್ರಮ ಭೂ ಮಂಜೂರಾತಿ ಆರೋಪದ ಮೇಲೆ ಅಮಾನತ್ತುಗೊಂಡಿದ್ದರು. ಹಿಂದೆ ಇದ್ದ ತಹಸೀಲ್ದಾರ್ ರಮೇಶ್ ಅವರು ಸ್ಥಳ ನಿರೀಕ್ಷಣೆಯಲ್ಲಿದ್ದು, ಮೂಡಿಗೆರೆಯಲ್ಲಿ ಆರ್.ಆರ್.ಟಿ. ಶಿರಸ್ತೆದಾರರಾಗಿದ್ದ ಪಾಲಯ್ಯ ಅವರು ಜಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಪ್ರಸ್ತುತ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿದೇಶವಾಸಿಗೂ ಇಲ್ಲಿ ಸರ್ಕಾರಿ ಭೂಮಿ ಮಂಜೂರು:
ಜಿಲ್ಲೆಯಲ್ಲಿ ಅಕ್ರಮ ಭೂಕಬಳಿಕೆ ವಿರುದ್ಧ ನಡೆಯುತ್ತಿರುವ ತನಿಖೆ ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಆಸ್ಟ್ರೇಲಿಯಾ, ಅಮೆರಿಕ, ಮುಂಬೈ, ಮಂಗಳೂರು, ಬೆಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ನೆಲಸಿರುವ, ಅರ್ಜಿಯನ್ನೇ ಹಾಕದೆ ಒಂದೇ ಕುಟುಂಬದ ಏಳು ಜನರ ಹೆಸರಿಗೆ ನೇರವಾಗಿ ಸರ್ಕಾರಿ ಭೂಮಿ ಖಾತೆ ಮಾಡಿರುವ ಪ್ರಕರಣ ಬಹಿರಂಗವಾಗಿದೆ.

 

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಹಾದಿಓಣಿ ಗ್ರಾಮದ ಸರ್ವೆ ನಂಬರ್ 21 ರಲ್ಲಿ ಇದ್ದ ಖಾಲಿ ಜಾಗ ಹುಬ್ರಾಟ್ ವಾಜ್ ನಾಯಕ್, ಅಂತೋನಿ ಜೆ.ಡಿ. ಪಿಂಟೊ, ಹೀರೊ ಎ.ಎಂ.ಎಲ್, ಜೋಸ್ ಫಿನ್ ಸುನೀತಿ ಕಾಮತ್, ಜೋಸ್ನಾ ಕಾಸರಗೋಡು, ಶೀಲಾ ಅಲ್ಟುಕ್ಯೂಕ್ ಮತ್ತು ಶೆರಿಲ್ಲಾ ಡಿಸೋಜಾ ಎಂಬುವರ ಹೆಸರಿಗೆ ಒಟ್ಟು 32 ಎಕರೆಯಷ್ಟು ಜಾಗ 2021 ರಲ್ಲಿ ಮಂಜೂರಾಗಿತ್ತು.

ಈಗ ದಾಖಲಾಗಿರುವ ಪ್ರಕರಣದಲ್ಲಿ ಅಷ್ಟೂ ಜಾಗದಲ್ಲಿ ಜೆರಾಲ್ಡ್ ಡಿಸೋಜಾ ಎಂಬುವರು ಕೃಷಿ ಮಾಡುತ್ತಿದ್ದಾರೆ. ಈ ಏಳು ಖಾತೆದಾರರೂ ಅವರ ಸಂಬAಧಿಕರೇ ಆಗಿದ್ದಾರೆ. ಮೂವರು ಅಮೆರಿಕದಲ್ಲಿದ್ದರೆ, ಒಬ್ಬರು ಆಸ್ಟ್ರೇಲಿಯಾದಲ್ಲಿದ್ದಾರೆ. ಒಬ್ಬರು ಮುಂಬೈ, ಮತ್ತೊಬ್ಬರು ಬೆಂಗಳೂರು ಮತ್ತು ಇನ್ನೊಬ್ಬರು ಮಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನುವುದು ಮೂಲಗಳ ವಿವರಣೆಯಾಗಿದೆ.

ಸರ್ಕಾರದ ವಿರುದ್ದ ರೈತ ಸಂಘ ಕಿಡಿ:
ಚಿಕ್ಕಮಗಳೂರು-ಮೂಡಿಗೆರೆಯ ಅಕ್ರಮ ಭೂ ಮಂಜೂರು ಪ್ರಕರಣದಲ್ಲಿ 60 ಜನ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿ ನೀಡಿದ್ದಾರೆ. ಆದರೆ ಯಾರ ಮೇಲೂ ಪ್ರಕರಣ ದಾಖಲಿಸುತ್ತಿಲ್ಲ. ಈಗ 4(1) ಜಾರಿ ಮಾಡಿ ಪ್ರಕರಣವನ್ನ ಜನರ ಮನಸ್ಸಿನಿಂದಲೇ ಮುಚ್ವಿಹಾಕೋ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಹಗರಣ ಮಾಡಿದ್ದರೆ ಕಾಂಗ್ರೆಸ್ ಮುಚ್ಚಿ ಹಾಕುತ್ತಿದೆ ಅಂತ ರೈತ ಸಂಘ ಸರ್ಕಾರದ ವಿರುದ್ಧ ಕಿಡಿಕಾರಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.