ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಬಸ್ ನಿಲ್ದಾಣಕ್ಕಾಗಿ ಭಿಕ್ಷೆ ಬೇಡಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬಗೆರೆ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ; ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ; ಶೃಂಗಸಭೆ ಮೂಲಕ ಈಡೇರಲಿದೆ ಭಾರತದ ಕನಸು

ಇಲ್ಲಿಯ ಜನರು ಬಸ್ ನಿಲ್ದಾಣವಿಲ್ಲದೆ ಪರದಾಟ ನಡೆಸುತ್ತಿದ್ದರು. ಜನಪ್ರತಿನಿಧಿಗಳಿಗೆ ನೂರಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಇದರಿಂದ ರೋಸಿಹೋದ ಸಾರ್ವಜನಿಕರು ಭಿಕ್ಷಾಟನೆ ಮಾಡಿ ಅದರಿಂದ ಬಂದ ಹಣದಿಂದ ಟಾರ್ಪಲ್ ಖರೀದಿಸಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ್ದಾರೆ.

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಕಾರು ಪಲ್ಟಿ | ಪ್ರಾಣಾಪಾಯದಿಂದ ಪಾರು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಫಿ ತೋಟಕ್ಕೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ನಡೆದಿದೆ.
ಕೊಟ್ಟಿಗೆಹಾರದಿಂದ ಬಾಳೂರಿಗೆ ತೆರಳುತ್ತಿದ್ದ ಕಾರು. ಚಾಲಕನ ನಿಯಂತ್ರಣ ತಪ್ಪಿ ಬಾಳೂರಿನ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಅಜ್ಜಿ ಕುಡಿಗೆ ತೋಟಕ್ಕೆ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು: ಕೋಳಿ ಮಾಂಸಕ್ಕೆ ದರ ನಿಗದಿಪಡಿಸಿದ ಪಂಚಾಯಿತಿ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೋಳಿ ಮಾಂಸದ ಅಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ದೂರು ಬಂದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿಯವರೇ ಪ್ರತಿ ನಿತ್ಯ ದರ ನಿಗದಿ ಮಾಡುವಂತಹ ಪರಿಪಾಠ ಆರಂಭಗೊಂಡಿದೆ.
ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಆರೋಪ:
ಕಳಸ ಪಟ್ಟಣದ ಕೋಳಿ ಮಾಂಸದ ಅಂಗಡಿಗಳಲ್ಲಿ ಸುತ್ತಲಿನ ಊರುಗಳಿಗಿಂತ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನಲೆ ಗಂಭೀರವಾಗಿ ಪರಿಗಣಿಸಿದ ಗ್ರಾಮ ಪಂಚಾಯಿತಿ ಎಲ್ಲ ಕೋಳಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದರು. ದಿನಪತ್ರಿಕೆಯಲ್ಲಿ ಪ್ರಕಟವಾಗುವ ದರದ ಅನುಗುಣವಾಗಿ ಪ್ರತಿದಿನವೂ ಕೋಳಿ ಮಾಂಸ ಮಾರಾಟ ಮಾಡಬೇಕು. ತಪ್ಪಿದರೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರತಿದಿನ ಪತ್ರಿಕೆಯಲ್ಲಿ ಪ್ರಕಟವಾಗುವ ಕೋಳಿ ಧಾರಣೆ ನೋಡಿಕೊಂಡು ಪಂಚಾಯಿತಿಯ ಸಿಬ್ಬಂದಿ ಕೋಳಿ ಮಾರುಕಟ್ಟೆಯಲ್ಲಿರುವ ಬೋರ್ಡ್ ನಲ್ಲಿ ಪ್ರತಿ ಕೆ.ಜಿ. ಕೋಳಿ ದರವನ್ನು ನಮೂದಿಸಿ ಬರುತ್ತಾರೆ. ಆ ದರದಲ್ಲಿಯೇ ಎಲ್ಲ ವರ್ತಕರು ಕೋಳಿ ಮಾರಾಟ ಮಾಡಬೇಕಿದೆ. ಅಂಗಡಿ ಮಾಲೀಕರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತ ಪಡೆದರೆ ಪಂಚಾಯಿತಿಗೆ ದೂರು ನೀಡುವಂತೆಯೂ ಸಾರ್ವಜನಿಕರಿಗೆ ಕೋರಲಾಗಿದೆ.
ಇನ್ನು ಗ್ರಾಮ ಪಂಚಾಯಿತಿಯ ಈ ಕ್ರಮಕ್ಕೆ ಕೋಳಿ ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿನಪತ್ರಿಕೆಯಲ್ಲಿ ಪ್ರಕಟವಾಗುವ ಬೆಲೆಗೆ ಮಾಂಸ ಮಾರಾಟ ಮಾಡಿದರೆ ನಮಗೆ ನಷ್ಟವಾಗುತ್ತದೆ. ಕೋಳಿ ದರ ಹೆಚ್ಚಾಗಿದೆ. ಮಳಿಗೆಗಳ ಬಾಡಿಗೆಯೂ ದುಬಾರಿ ಇದೆ. ಹಾಗಾಗಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಕೋರುತ್ತಿದ್ದಾರೆ.













