ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೀಗ ನಿರ್ಮಾಣ್-2 ತಂತ್ರಾಂಶ ಕಾರ್ಯ ನಿರ್ವಹಿಸಲು ಆರಂಭವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ರೇಷನ್ ಕಾರ್ಡ್ ಮತ್ತೆ ಪರಿಷ್ಕರಣೆ!; ಅನರ್ಹರಿಗೆ ರದ್ದಾಗುತ್ತಾ?

ಶೃಂಗೇರಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಕ್ಕೂ ಹೆಚ್ಚು ಕಾಲದಿಂದ ತಾಂತ್ರಿಕ ದೋಷದಿಂದ ಕಟ್ಟಡ ನಿರ್ಮಾಣ ಪರವಾನಗಿ ನೀಡಿರಲಿಲ್ಲ. ಇದೀಗ ನಿರ್ಮಾಣ್ 2 ತಂತ್ರಾಂಶ ಕಾರ್ಯ ನಿರ್ವಹಿಸಲು ಆರಂಭಿಸಿದ್ದು, ಇದರ ಸದುಪಯೋಗ ಪಡೆಯಬಹುದಾಗಿದೆ.

ಇದನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!
“ಸುಮಾರು 3 ವರ್ಷದಿಂದ ಅಂದರೆ ಕೋವಿಡ್ ಸಮಯದಿಂದ ಕಟ್ಟಡ ನಿರ್ಮಾಣ ಪರವಾನಗಿ ನೀಡುವ ನಿರ್ಮಾಣ್ 2 ತಂತ್ರಾಂಶವನ್ನು ಅಧಿಕಾರಿಯೊಬ್ಬರ ತಪ್ಪಿನಿಂದ ಕಟ್ಟಡ ನಿರ್ಮಾಣ ಪರವಾನಗಿಯನ್ನು ನೀಡಲು ಆಗುತ್ತಿರಲಿಲ್ಲ. ಕೊನೆಯದಾಗಿ ಬೆಂಗಳೂರಿನ ಡಿ.ಎಮ್.ಎ ಅವರ ಲಾಗಿನ್ ಗೆ ಹೋಗಿ ಒಂದು ತಿಂಗಳಾಗಿ ಬೇರೆ ಕಾರಣದಿಂದಾಗಿ ಹಾಗೇ ಉಳಿದಿತ್ತು. ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಡಿ.ಎಮ್.ಎ ಅಧಿಕಾರಿ ಬಳಿ ಮಾತನಾಡಿ ಕಾರ್ಯಗತಗೊಳಿಸಿದ್ದಾರೆ. ಹೀಗಾಗಿ ಇದೀಗ ಶೃಂಗೇರಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು”– ವೇಣುಗೋಪಾಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷ
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 1003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 15,000 ಸಂಬಳ















