ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಕಾಫಿ ಗಿಡ, ಅಡಿಕೆ, ಸಿಲ್ವರ್ ಮತ್ತು ನೀರಿನ ಪೈಪ್ ಲೈನ್ ಗಳು ವಿದ್ಯುತ್ ಶಾರ್ಟ್ಸರ್ಕ್ಯೂಟ್ ನಿಂದ ಸುಟ್ಟು ಹೋಗಿದೆ ಎಂದು ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ!; ಈ ದಾಖಲೆ ಕಡ್ಡಾಯ

ಬೆಳವಿನ ಕುಡಿಗೆ ಗ್ರಾಮದ ಬಾಳೆಹಕ್ಲುವಿನ ಮಹೇಶ್ ಭಟ್ ಅವರ ಜಮೀನಿನಲ್ಲಿ ನಿನ್ನೆ ಸುಮಾರು 3 ಗಂಟೆ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು 100 ಕಾಫಿ ಗಿಡ, ಅಡಿಕೆ, ಸಿಲ್ವರ್ ಮತ್ತು ನೀರಿನ ಪೈಪ್ ಲೈನ್ ಗಳು ಸುಟ್ಟು ಹೋಗಿದೆ.


ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಜಾಬ್ ಆಫರ್; 10th ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಹುರುಳಿ ಹಕ್ಲು ಮತ್ತು ಬಾಳೆಹಕ್ಲು ಈ ಭಾಗದಲ್ಲಿ ಲೈನ್ ಗಳು ದುರಸ್ತಿಗೆ ಬಂದಿದ್ದು, ಇದನ್ನ ಎಷ್ಟು ಮನವಿ ಮಾಡಿದರು ಸರಿಪಡಿಸುತ್ತಿಲ್ಲ ಎಂದು ಕೊಪ್ಪ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ಚಾರ್ಜ್‌ನಲ್ಲಿ 320 ಕಿ.ಮೀ. ಪ್ರಯಾಣ; ಮತ್ತೊಂದು ಹೊಸ ಸ್ಕೂಟರ್ ಅನಾವರಣ
















