ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ದಾವಣ ಗ್ರಾಮದ ಬಸ್ ತಂಗುದಾಣದ ಬಳಿ ನಿನ್ನೆ ರಾತ್ರಿ ನಡೆದಿದೆ. ಬಾಳೆ ಗ್ರಾಮದ ಕುಡ್ನಳ್ಳಿಯ ಅಶ್ವಥ್ ಗೌಡ ಮೃತ ದುದೈರ್ವಿ.
ಇದನ್ನೂ ಓದಿ: 60 ಪರ್ಸೆಂಟೇಜ್ ತೆಗೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ

ಅಶ್ವಥ್ ಗೌಡ ಹಾಗೂ ನಾಲ್ವರು ಸ್ನೇಹಿತರು ಬಾಳೆಹೊನ್ನೂರಿಗೆ ಹೋಗಿ ಮನೆಗೆ ಮರಳುವಾಗ ದಾವಣ ಸಮೀಪ ಕಾರಿನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಕಾರು ಚಾಲನೆ ಮಾಡುತ್ತಿದ್ದ ಅಶ್ವಥ್ ಗೌಡ ಅವರಿಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಆಸ್ತಿ ಖರೀದಿ, ಮಾರಾಟಗಾರರಿಗೆ ಭರ್ಜರಿ ಸುದ್ದಿ; ಏನದು? ಇಲ್ಲಿದೆ ನೋಡಿ
ಕಾರಿನಲ್ಲಿದ್ದ ಉಳಿದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್; ವಿವಿಧ ಯೋಜನೆಯಲ್ಲಿ ಶೇ.90ರಷ್ಟು ಸಹಾಯಧನ















